ವಿಶ್ವವಿದ್ಯಾಲಯ ಧನಸಹಾಯ ಆಯೋಗ.ಹೊಸ ರೆಗುಲೇಷನ್ 2025

ಹೊಸ ದೆಹಲಿ:- ವಿಶ್ವವಿದ್ಯಾಲಯ ಧನಸಹಾಯ ಆಯೋಗ 2025 ಹೊಸಾ ಕರಡು ಪ್ರಸ್ತಾವನೆ, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ನೇಮಕಾತಿಗೆ ಸಂಬಂಧಿಸಿ ಯುಜಿಸಿ (ವಿಶ್ವವಿದ್ಯಾಲಯ ಧನ ಸಹಾಯ ಆಯೋಗ) ಪ್ರಸ್ತಾವವೊಂದನ್ನುಸಿದ್ಧಪಡಿಸಿದೆ.

ಇದಕ್ಕೆ ಸಂಬಂಧಿಸಿದ ಕರಡು ಮಾರ್ಗಸೂಚಿಗಳನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬಿಡುಗಡೆಗೊಳಿಸಿದ್ದಾರೆ.”ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಹಾಗೂ ವೈವಿಧ್ಯಮಯ ಪ್ರತಿಭೆಗಳನ್ನು ಗುರುತಿಸುವ ಮೂಲಕ ನಾವು ಭಾರತದ ಕ್ರಿಯಾತ್ಮಕ ಶೈಕ್ಷಣಿಕ ಭವಿಷ್ಯಕ್ಕೆ ದಾರಿಯನ್ನು ಕಲ್ಪಿಸುತ್ತಿದ್ದೇವೆ” ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕರಡು ನಿಯಮಗಳ ಪ್ರಕಾರ ಕನಿಷ್ಠ ೧೦ ವರ್ಷಗಳ ಅನುಭವವನ್ನು ಹೊಂದಿರುವ ಉದ್ಯಮರಂಗದ ಪರಿಣತರು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕಾರ್ಯ ನಿರ್ವಹಿಸಿದವರು ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳು ವಿವಿ ಕುಲಪತಿಗಳಾಗಿ ನೇಮಕಗೊಳ್ಳಲು ಅರ್ಹರಾಗಲಿದ್ದಾರೆ.

ಅಷ್ಟೇ ಅಲ್ಲ, ಬೋಧಕ ಸಿಬ್ಬಂದಿ ನೇಮಕಾತಿಯ ನಿಯಮಗಳಿಗೂ ಭಾರೀ ಸರ್ಜರಿಗಳನ್ನು ಮಾಡಲಾಗಿದೆ. ಹಾಲಿ ಇರುವಂತೆ ಕುಲಪತಿಗಳ ಹುದ್ದೆಗೆ ಅಭ್ಯರ್ಥಿಗಳು ವಿವಿಯಲ್ಲಿ ಅಥವಾ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಲ್ಲಿ ಅಥವಾ ಶೈಕ್ಷಣಿಕ ಅಧಿಕಾರಿಯಾಗಿ ೧೦ ವರ್ಷಗಳ ಅನುಭವ ಇದ್ದರೆ ಸಾಕು. ಎಲ್ಲಕ್ಕಿಂತ ಮುಖ್ಯವಾಗಿ ಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಗಳ ಹಸ್ತಕ್ಷೇಪವನ್ನು ನಿಯಮಾವಳಿ ಸಂಪೂರ್ಣ ನಿರಾಕರಿಸುತ್ತದೆ.

ಈ ಹಿಂದೆ ಯುಪಿಎಸ್ಸಿಯಲ್ಲಿ ಹಿಂಬಾಗಿಲ ನೇಮಕಾತಿಯನ್ನು ಮಾಡಲು ಹೊರಟು ಕೇಂದ್ರ ಸರಕಾರ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಣಿತರಾದವರನ್ನು ಸರಕಾರದ ಉನ್ನತ ಹುದ್ದೆಗಳಲ್ಲಿ ನೇಮಕಗೊಳಿಸಿ, ಆಡಳಿತವನ್ನು ಸುಧಾರಣೆಗೊಳಿಸಲಾಗುವುದೆಂದು ಸರಕಾರ ಹೇಳಿತ್ತಾದರೂ, ಇದು ಸರಕಾರದೊಳಗೆ ತನ್ನ ಮೂಗಿನ ನೇರಕ್ಕಿರುವ ಶಕ್ತಿಗಳನ್ನು ನುಗ್ಗಿಸುವ ತಂತ್ರವೂ ಆಗಿತ್ತು.

ಲೇಟರಲ್ ಎಂಟ್ರಿಯ ಮೂಲಕ ನಡೆಯುವ ನೇಮಕಾತಿ ಆರಂಭದಲ್ಲೇ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತ್ತು. ಈ ಬಗ್ಗೆ ಹಲವು ತಜ್ಞರು ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು. ನೇಮಕಾತಿಯ ಪ್ರಕ್ರಿಯೆ ನಿಧಾನಕ್ಕೆ ಸರಕಾರದೊಳಗೆ ಅನರ್ಹರನ್ನೂ ಸೇರಿಸಲು ಅವಕಾಶ ನೀಡಬಹುದು ಎನ್ನುವ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದರು.

ಉನ್ನತ ಹುದ್ದೆಗಳಲ್ಲಿ ಮೀಸಲಾತಿಯನ್ನು ರದ್ದುಗೊಳಿಸಲು ಈ ಹಿಂಬಾಗಿಲನ ನೇಮಕಾತಿಯನ್ನು ಬಳಸಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಭಾರೀ ಪ್ರತಿಭಟನೆಗಳನ್ನು ನಡೆಸಿದವು. ಲೋಕಸಭೆಯಲ್ಲೂ ಗದ್ದಲಕ್ಕೆ ಕಾರಣವಾಯಿತು.

ಈ ನೇಮಕಾತಿ ಕಾಂಟ್ರಾಕ್ಟ್ ಬೇಸಿಸ್ ಆಗಿರುವುದರಿಂದ, ಆಡಳಿತದ ಆಳಅಗಲಗಳನ್ನು ಅರಿತು ಕಾರ್ಯನಿರ್ವಹಿಸಲು ಬಹುದೊಡ್ಡ ತೊಡಕಾಗುತ್ತದೆ ಎನ್ನುವ ಕಳವಳವನ್ನು ತಜ್ಞರು ಮುಂದಿಟ್ಟರು. ಈ ನೇಮಕಾತಿಗೆ ವ್ಯಕ್ತವಾದ ಪ್ರತಿರೋಧ, ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಎನ್ಡಿಎ ಮಿತ್ರರು ಕೂಡ ಇದರ ವಿರುದ್ಧ ಧ್ವನಿಯೆತ್ತ ತೊಡಗಿದ ಕಾರಣದಿಂದ, ಕೊನೆಗೂ ತನ್ನ ನೇಮಕಾತಿ ಆದೇಶವನ್ನು ಸರಕಾರ ಹಿಂದೆಗೆದುಕೊಂಡು ಮುಖ ಉಳಿಸಿಕೊಂಡಿತು.

ಆ ಹಿಂಬಾಗಿಲ ನೇಮಕಾತಿಯನ್ನೇ ಕೇಂದ್ರ ಸರಕಾರ ಇದೀಗ ಶಿಕ್ಷಣ ಕ್ಷೇತ್ರದ ಉನ್ನತ ಸ್ಥಾನಗಳಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ ಶಿಕ್ಷಣವನ್ನು ಕೇಸರೀಕರಣಗೊಳಿಸಲು ಭಾಗಶಃ ಯಶಸ್ವಿಯಾಗಿರುವ ಕೇಂದ್ರ ಸರಕಾರ, ವಿಶ್ವವಿದ್ಯಾನಿಲಯಗಳಲ್ಲಿ ತನ್ನ ಮೂಗಿನ ನೇರಕ್ಕೆ ತಕ್ಕ ಹಾಗೆ ನೇಮಕಾತಿಗಳನ್ನು ಮಾಡಿ ಆ ಮೂಲಕ ಶಿಕ್ಷಣ ಕೇಂದ್ರಗಳನ್ನು ತನ್ನ ನಿಯಂತ್ರಣಕ್ಕೆ ತರಲು ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಕುಲಪತಿಗಳ ನೇಮಕಾತಿಗಳ ವಿಷಯದಲ್ಲಿ ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವಿನ ಸಂಘರ್ಷ ತಾರಕಕ್ಕೇರಿತ್ತು. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವೂ ಈ ವಿಷಯದಲ್ಲಿ ರಾಜ್ಯಪಾಲರ ಜೊತೆಗೆ ಗುದ್ದಾಟ ನಡೆಸಿತ್ತು ಮಾತ್ರವಲ್ಲ, ಕುಲಪತಿ ನೇಮಕಾತಿಯ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಂಡ ವಿಧೇಯಕ ತಿದ್ದುಪಡಿ ನಿರ್ಣಯಕ್ಕೆ ಸಂಪುಟ ಸಭೆ ಅನುಮೋದನೆಯನ್ನೂ ನೀಡಿತ್ತು.

ಆದರೆ ಇದು ಕೇಂದ್ರ ಸರಕಾರಕ್ಕೆ ಅಧಿಕಪ್ರಸಂಗವಾಗಿ ಕಂಡಿತು. ದಕ್ಷಿಣ ಭಾರತದ ರಾಜ್ಯಗಳು ವಿಶ್ವವಿದ್ಯಾನಿಲಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪಕ್ಕೆ ತೀವ್ರ ಪ್ರತಿರೋಧ ನಡೆಸುತ್ತಿರುವುದು ಕೇಂದ್ರ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿತ್ತು. ಆ ಕಾರಣದಿಂದಲೇ, ಇದೀಗ ಯುಜಿಸಿಯ ಮೂಲಕ ಕುಲಪತಿಗಳ ನೇಮಕಾತಿಯ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಯೋಜನೆಯನ್ನು ಹಾಕಿಕೊಂಡಿದೆ.

ಈ ಮೂಲಕ ಕೇಂದ್ರ ಸರಕಾರ ಒಕ್ಕೂಟ ಸಂರಚನೆಯನ್ನು ಇನ್ನಷ್ಟು ದುರ್ಬಲಗೊಳಿಸಿ, ಹಂತ ಹಂತವಾಗಿ ರಾಜ್ಯ ಸರಕಾರಗಳನ್ನ್ನು ದುರ್ಬಲಗೊಳಿಸಲು ಮುಂದಾಗಿದೆ. ಯುಜಿಸಿ ಪ್ರಸ್ತಾವಕ್ಕೆ ಮೊತ್ತ ಮೊದಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಧ್ವನಿಯೆತ್ತಿದ್ದಾರೆ. ”ಉಪಕುಲಪತಿಗಳ ನೇಮಕಾತಿಯ ಅರ್ಹತೆಗೆ ಸಂಬಂಧಿಸಿದಂತೆ ಪ್ರಸ್ತಾವದಲ್ಲಿ ಹಲವು ಗಂಭೀರ ಬದಲಾವಣೆಗಳನ್ನು ಮಾಡಲಾಗಿದೆ.

ಹೊಸ ನಿಯಮಗಳ ಪ್ರಕಾರ ಉಪಕುಲಪತಿಗಳನ್ನು ಕೇವಲ ಅಕಾಡಮಿಕ್ ವಲಯದಿಂದ ಮಾತ್ರ ನೇಮಿಸಿಕೊಳ್ಳದೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು, ಸಾರ್ವಜನಿಕ ಆಡಳಿತದ ನೀತಿ ನಿರೂಪಕರು ಸೇರಿದಂತೆ ಇತರ ಕ್ಷೇತ್ರಗಳ ತಜ್ಞರನ್ನು ನೇಮಕ ಮಾಡಬಹುದಾಗಿದೆ. ಇದು ಕನ್ನಡಿಗರಿಗೆ ಮಾತ್ರವಲ್ಲ, ಉನ್ನತ ಶಿಕ್ಷಣದ ಮೌಲ್ಯಗಳಿಗೆ ಮಾಡುವ ದ್ರೋಹವಾಗಿದೆ. ಈ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸಲಾಗಿದೆ.

ಇದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಿಗೇ ಯುಜಿಸಿಯ ೨೦೨೫ರ ಕರಡು ನಿಯಮಾವಳಿಗಳನ್ನು ತಕ್ಷಣ ಹಿಂದೆಗೆದುಕೊಳ್ಳುವಂತೆ ಕರೆ ನೀಡುವ ನಿರ್ಣಯವೊಂದನ್ನು ತಮಿಳು ನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.

ಅಷ್ಟೇ ಅಲ್ಲ, ಪ್ರಾದೇಶಿಕತೆಯ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುವ ಕೇಂದ್ರದ ಹುನ್ನಾರವನ್ನು ಖಂಡಿಸಿದ್ದಾರೆ. ಇತ್ತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಇದರ ವಿರುದ್ಧ ಧ್ವನಿಯೆತ್ತಿದ್ದಾರೆ.

‘ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಹಕ್ಕುಗಳನ್ನು ದಮನಿಸುವ ಪ್ರಯತ್ನ ಇದಾಗಿದೆ” ಎಂದು ಅವರು ವ್ಯಾಖ್ಯಾನಿಸಿದ್ದಾರೆ. ನೂತನ ಪ್ರಸ್ತಾವದಲ್ಲಿ, ಸಂಪುಟ ಸಭೆಯ ಸಲಹೆಗಳನ್ನು ಧಿಕ್ಕರಿಸಿ, ರಾಜ್ಯಪಾಲರಿಗೆ ಸರ್ವಾಧಿಕಾರವನ್ನು ನೀಡಲಾಗಿದೆ. ಇದು ರಾಜ್ಯ ಮತ್ತು ಕೇಂದ್ರದ ನಡುವಿನ ಸಂಘರ್ಷವನ್ನು ಹೆಚ್ಚಿಸಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ವಿಶ್ವವಿದ್ಯಾನಿಲಯಗಳು ರಾಜಕೀಯ ಆಡುಂಬೊಲವಾಗಿದೆ ಮಾತ್ರವಲ್ಲ, ವಾಣಿಜ್ಯೀಕರಣಗೊಂಡಿವೆೆ. ಇಲ್ಲಿ ಡಾಕ್ಟರೇಟ್ಗಳನ್ನು ಭಾರೀ ಮೊತ್ತಕ್ಕೆ ಮಾರಲಾಗುತ್ತಿದೆ.

ಬೃಹತ್ ಉದ್ಯಮಿಗಳು ‘ಗೌ.ಡಾ.’ಗಳಾಗಿ ಮಿಂಚುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳ ಅತ್ಯುನ್ನತ ಹುದ್ದೆಗಳನ್ನು ಕೇಂದ್ರ ಸರಕಾರ ಅಧಿಕೃತವಾಗಿ ಮಾರಾಟಕ್ಕಿಡಬಹುದು. ಪ್ರಾದೇಶಿಕತೆಯನ್ನು ಪ್ರತಿನಿಧಿಸುವ ಮೂಲಕ ವಿಶ್ವವಿದ್ಯಾನಿಲಯಗಳು ವಿಶ್ವವ್ಯಾಪಿಯಾಗಬೇಕು.

ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸುವ ರಾಜ್ಯಪಾಲರ ಕೈಗೆ ವಿಶ್ವವಿದ್ಯಾನಿಲಯಗಳ ಚುಕ್ಕಾಣಿಯನ್ನು ಸಂಪೂರ್ಣವಾಗಿ ಒಪ್ಪಿಸಿದರೆ ಅದರ ಪರಿಣಾಮ ಅತ್ಯಂತ ಕೆಟ್ಟದಾಗಿರುತ್ತದೆ. ಸ್ಥಳೀಯತೆಯ ಬಗ್ಗೆ ಯಾವ ಅರಿವೂ ಇಲ್ಲದ, ಆ ಬಗ್ಗೆ ಗೌರವವೂ ಇಲ್ಲದ, ರಾಜ್ಯಗಳಿಗೆ ಅನ್ಯರಾಗಿರುವ ರಾಜ್ಯಪಾಲರಿಂದ ನೇರವಾಗಿ ಆಯ್ಕೆಯಾಗುವ ಕುಲಪತಿಗಳು, ವಿಶ್ವವಿದ್ಯಾನಿಲಯಗಳನ್ನು ಕೇಂದ್ರ ಸರಕಾರದ ಜೀತಕ್ಕಿಳಿಸುವುದರಲ್ಲಿ ಅನುಮಾನವಿಲ್ಲ.

ಈ ನಿಟ್ಟಿನಲ್ಲಿ, ಯುಜಿಸಿಯ ಹೊಸ ಪ್ರಸ್ತಾವವನ್ನು ಎಲ್ಲ ರಾಜ್ಯಗಳು ಒಕ್ಕೊರಲಿನಲ್ಲಿ ವಿರೋಧಿಸಬೇಕಾಗಿದೆ. ಒಂದಾನೊಂದು ಕಾಲದಲ್ಲಿ ನಳಂದಾದಂತಹ ವಿಶ್ವವಿದ್ಯಾನಿಲಯಗಳ ಮೇಲೆ ವಿದೇಶಿಯರು ನಡೆಸಿರುವ ದಾಳಿಗಳನ್ನು ನಾವು ಓದಿದ್ದೇವೆ. ಆದರೆ ಆ ಹೊಸ ಮಾರ್ಗಸೂಚಿಗಳು ಅನುಷ್ಠಾನಗೊಂಡರೆ, ನಮ್ಮ ವಿಶ್ವವಿದ್ಯಾನಿಲಯಗಳು ಮತ್ತೆ ಸ್ವದೇಶಿಯರಿಂದಲೇ ಬರ್ಬರ ದಾಳಿಗೆ ಸಿಲುಕಿ ಸ್ವಯಂ ನಾಶವಾಗುವ ಸ್ಥಿತಿ ನಿರ್ಮಾಣವಾಗುತ್ತದೆ.

ಈ ಪ್ರಸ್ತಾವ ರಾಜ್ಯ ಸರ್ಕಾರ ಪರಿಶೀಲಿಸಿ ಸ್ವೀಕರಿಸಬಹುದು ಅಥವ ವೋಪೋದಿಲ್ಲ.

prajaprabhat

Recent Posts

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

15 minutes ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

31 minutes ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

41 minutes ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

2 hours ago

ಆ.6 ರಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮ

ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…

3 hours ago

ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ

ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…

3 hours ago