ವಿಶ್ವವಿದ್ಯಾಲಯಗಳನ್ನು ಉಳಿಸುವ ನಿಮ್ಮ ಗುರಿ: ಸಚಿವ ಡಾ.ಎಂ.ಸಿ.ಸುಧಾಕರ್‌

ಮಂಗಳೂರು.30.ಮಾರ್ಚ್.25:- ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯದ ಬಹಳ ಹಳೇ ವಿಶ್ವವಿದ್ಯಾಲಯ ಆಗಿರುತಿದೆ  ಅದಕ್ಕಾಗಿ ಸರಕಾರದ ಸಂಪುಟ ಉಪಸಮಿತಿ  ಸಮಗ್ರ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಅದನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್‌ ಹೇಳಿದ್ದಾರೆ.

ಅವರು ಕೊಣಾಜೆಯ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಶನಿವಾರ ಮಂಗಳೂರು ವಿವಿಯ 43ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೆಟ್‌, ಪಿಎಚ್‌ಡಿ, ಸ್ನಾತಕೋತ್ತರ ಮತ್ತು ಪದವಿ ತರಗತಿಯ ರ್‍ಯಾಂಕ್‌ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಅಡಿಗಲ್ಲು ಹಾಕಿದ್ದೇನೆಂಬ ಪ್ರತಿಷ್ಠೆ ಬಿಡಿ!
ಕೆಲವರು ಹೆಚ್ಚು ವಿಶ್ವವಿದ್ಯಾನಿಲಯ ಗಳನ್ನು ಆರಂಭಿಸಬೇಕು ಎನ್ನುತ್ತಿದ್ದಾರೆ. ಆದರೆ ಹೊಸ ವಿಶ್ವವಿದ್ಯಾಲಯ ಆರಂಭಿಸುವುದಕ್ಕೆ ಸ್ಥಳ, ಬೋಧಕ ಬೋಧಕೇತರ ಸಿಬಂದಿ ನೇಮಕಾತಿ, ಸಂಪನ್ಮೂಲ ಅಗತ್ಯ. ಅದರ ನಡುವೆ ಈಗಿರುವ ಪ್ರತಿಷ್ಠಿತ ವಿವಿಗಳು ಆರ್ಥಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿವೆ.

ಅವುಗಳನ್ನು ಉಳಿಸಿಕೊಳ್ಳಲೇಬೇಕಿದೆ. ಹಾಗಾಗಿ ಕೆಲವರು “ನಾನು ಅಡಿಗಲ್ಲು ಹಾಕಿದ್ದೇನೆ, ಹಾಗಾಗಿ ಹೊಸ ವಿಶ್ವವಿದ್ಯಾಲಯ ಉಳಿಯಬೇಕು’ ಎಂಬ ಪ್ರತಿಷ್ಠೆಯನ್ನು ಬಿಡಬೇಕು ಎಂದರು.

ಹಿಂದೆ ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜುಗಳು ಕೂಡ ಆಯಾ ಪ್ರದೇಶದ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ಒಳಪಡುತ್ತಿದ್ದವು. ಇದರಿಂ ದಾಗಿ ಅವುಗಳಿಗೆ ಸಾಕಷ್ಟು ಆದಾಯ ಲಭಿಸುತ್ತಿತ್ತು. ಆದರೆ ಯಾವಾಗ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ವಿಟಿಯುಗಳು, ಮುಕ್ತ ವಿಶ್ವವಿದ್ಯಾಲಗಳು ಆರಂಭಗೊಂಡವೋ ಆಗ ವಿಶ್ವವಿದ್ಯಾಲಯಗಳ ಆರ್ಥಿಕತೆ ಹದಗೆಡಲು ಆರಂಭವಾಯಿತು ಎಂದರು.

ವಿಶ್ವವಿದ್ಯಾಲಯ ನಿವೃತ್ತ ನೌಕರರ ಪಿಂಚಣಿಗಾಗಿ 11.30 ಕೋ. ರೂ. ಬಿಡುಗಡೆ ಮಾಡಲಾ ಗಿದೆ. 30 ಕೋ. ರೂ. ವೆಚ್ಚದಲ್ಲಿ ಬೆಳಪುನಲ್ಲಿ ನಿರ್ಮಿಸಿದ ಸಂಶೋಧನೆ ಕೇಂದ್ರ ಉಪಯೋಗವಾಗುತ್ತಿಲ್ಲ, ಅಂತಾರಾಷ್ಟ್ರೀಯ ಹಾಸ್ಟೆಲ್‌ ಅರ್ಧಕ್ಕೆ ಬಾಕಿಯಾಗಿರುವುದೂ ಗೊತ್ತಿದೆ. ಹಾಗೆಂದು ಸರಕಾರಗಳು ನಿರಂತರ ವಾಗಿ ಸಹಾಯ ಮಾಡಲಾಗದು ಎಂದರು.

ಬದಲಾವಣೆಗೆ ಸ್ಪಂದನೆ: ಪ್ರೊ| ಪಿಳ್ಳೈ
ಘಟಿಕೋತ್ಸವ ಭಾಷಣ ಮಾಡಿದ ಮುಂಬಯಿ ಸೋಮಿಯಾ ವಿದ್ಯಾವಿಹಾರ್‌ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ.ಎನ್‌.ರಾಜಶೇಖರನ್‌ ಪಿಳ್ಳೈ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನತೆ ಬದುಕಿನುದ್ದಕ್ಕೂ ಆಲೋಚನೆ ಹಾಗೂ ತಂತ್ರಜ್ಞಾನಗಳಿಗೆ ಮುಕ್ತವಾಗಿ ಒಡ್ಡಿಕೊಳ್ಳುವ ಮನೋಭಾವ ರೂಪಿಸಿಕೊಳ್ಳಬೇಕು. ಅಲ್ಲದೆ ತಮ್ಮ ತಜ್ಞತೆಯ ಕ್ಷೇತ್ರದ ಹೊರಗಿನ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರಿತು ಅವುಗಳನ್ನು ತಮ್ಮ ಕ್ಷೇತ್ರಕ್ಕೂ ಅಳವಡಿಸಿಕೊಳ್ಳುವಂತಹ ಯೋಚನೆ ಹೊಂದಿರಬೇಕಾಗುತ್ತದೆ ಎಂದರು.

ಸಂಕಷ್ಟಗಳನ್ನು ಎದುರಿಸಿ ಪರಿಶ್ರಮ ಪಡುವುದು, ವೈಫಲ್ಯಗಳಿಂದ ಕಲಿತುಕೊಳ್ಳು ವುದು, ಬದಲಾಗುತ್ತಿರುವ ಸನ್ನಿವೇಶಗಳಿಗೆ ಒಗ್ಗಿಕೊಳ್ಳುವುದು ಯಶಸ್ಸಿಗೆ ಇರುವ ಮಾರ್ಗಗಳು ಎಂದ ಪಿಳ್ಳೆ, ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಂಡರೂ ನೈತಿಕತೆ ಹಾಗೂ ಪ್ರಾಮಾಣಿಕತೆ ನಿಮ್ಮ ಮುನ್ನಡೆಸುವ ತತ್ವಗಳಾಗಿರಲಿ.

ವ್ಯಾಸಂಗದ ಸಂದರ್ಭ ಅರ್ಜಿಸಿಕೊಂಡ ಜ್ಞಾನ ಮತ್ತು ಕೌಶಲಗಳನ್ನು ಸಮಾಜದ ಒಳಿತಿಗಾಗಿ ಬುದ್ಧಿ ವಂತಿಕೆಯಿಂದ ಉಪಯೋಗಿಸುವ ಜವಾಬ್ದಾರಿಯೂ ಇರಬೇಕಾಗಿದೆ ಎಂದರು.
ಕುಲಪತಿ ಪ್ರೊ. ಪಿ.ಎಲ್‌.ಧರ್ಮ ಪ್ರಸ್ತಾವಿಸಿದರು. ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಸಂಗಪ್ಪ, ವಿ.ವಿ.ಯ, ಸಿಂಡಿಕೇಟ್‌ ಸದಸ್ಯರು, ವಿದ್ಯಾವಿಷಯ ಪರಿಷತ್‌ ಸದಸ್ಯರು, ವಿವಿಧ ಮುಖ್ಯಸ್ಥರು ಉಪಸ್ಥಿತರಿದ್ದರು.

ಆರಾಧನಾ ಶೆಣೈಗೆ 3 ಚಿನ್ನದ ಪದಕ
ಮ್ಯಾಪ್ಸ್‌ ಸಂಧ್ಯಾ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು 650 ಅಂಕಗಳೊಂದಿಗೆ ಪ್ರಥಮ ರ್‍ಯಾಂಕ್‌ನಲ್ಲಿ ಪೂರೈಸಿರುವ ಆರಾಧನಾ ವಿ. ಶೆಣೈ 3 ಚಿನ್ನದ ಪದಕಗಳಿಗೆ ಭಾಜನರಾದರು. ಮಂಗಳೂರಿನ ವಿಶ್ವನಾಥ ಶೆಣೈ-ವಿನಿತಾ ದಂಪತಿಯ ಪುತ್ರಿ.

ಮೂವರಿಗೆ ಗೌರವ ಡಾಕ್ಟರೆಟ್‌ ಪ್ರದಾನ
ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌, ನಿರ್ಮಾಣ ಕ್ಷೇತ್ರದ ಸಾಧಕ ರೋಹನ್‌ ಮೊಂತೆರೋ, ಉದ್ಯಮಿ, ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಸಮಾಜ ಸೇವೆಗಾಗಿ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಯಿತು. ಇದೇ ವೇಳೆ ವಿಶ್ವವಿದ್ಯಾನಿಲಯದ 64 (ಕಲಾ ನಿಕಾಯ-12, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-38, ವಾಣಿಜ್ಯ ನಿಕಾಯ – 11, ಶಿಕ್ಷಣ ನಿಕಾಯ – 03) ಸಂಶೋಧನ ವಿದ್ಯಾರ್ಥಿಗಳು ಡಾಕ್ಟರೆಟ್‌ ಪದವಿ (ಪಿಎಚ್‌ಡಿ) ಪ್ರದಾನ ಮಾಡಲಾಯಿತು. 54 ಚಿನ್ನದ ಪದಕ ಮತ್ತು 56 ನಗದು ಬಹುಮಾನ, ವಿವಿಧ ಸ್ನಾತಕ/ಸ್ನಾತಕೋತ್ತರ ವಿಭಾಗದ ವಿವಿಧ ಪದವಿಗಳ ಒಟ್ಟು 127 ರ್‍ಯಾಂಕ್‌ ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು.

2,800 ಬೋಧಕ ಹುದ್ದೆ ಖಾಲಿ
ರಾಜ್ಯದ ವಿವಿಧ ವಿವಿಗಳಲ್ಲಿ 2,800 ಬೋಧಕ ಹುದ್ದೆಗಳು ಖಾಲಿ ಇದೆ. ಕೆಇಎ ಮೂಲಕ ಪರೀಕ್ಷೆ ಮಾಡಬೇಕಿದೆ. ಆದರೆ ಹಿಂದೆ ಕೆಲವರು ಒತ್ತಡದಿಂದ ಅಥವಾ ತಮ್ಮ ಲಾಭಕ್ಕಾಗಿ ಯಾವುದೇ ಅನುಮೋದನೆ ಪಡೆದಿಲ್ಲ ಎಂಬ ಅಭಿಪ್ರಾಯವನ್ನು ಹಣಕಾಸು ಇಲಾಖೆ ಹೊಂದಿದೆ. ಹಾಗಾಗಿ ಹುದ್ದೆಗಳನ್ನು ತರ್ಕಬದ್ಧಗೊಳಿಸುವುದು, ಹೆಚ್ಚು ಬೇಡಿಕೆಯ ಕೋರ್ಸ್‌ಗಳಿಗೆ ಬೋಧಕರ ನೇಮಕಾತಿ, ಆರ್ಥಿಕ ಹಾಗೂ ಆಡಳಿತಾತ್ಮಕ ಶಿಸ್ತಿನ ವಾತಾವರಣ ತರುವ ಸವಾಲು ನಮ್ಮ ಮುಂದಿದೆ,
-ಡಾ.ಎಂ.ಸಿ. ಸುಧಾಕರ್‌ , ರಾಜ್ಯ ಉನ್ನತ ಶಿಕ್ಷಣ ಖಾತೆ ಸಚಿವ

ಸ್ವೀಪರ್‌ ಪುತ್ರಿ ಟಾಪರ್‌
ಉಳ್ಳಾಲ:ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸ್ವೀಪರ್‌ ಆಗಿರುವ ಮುನ್ನೂರು ಗ್ರಾಮದ ಕುತ್ತಾರು ದೆಕ್ಕಾಡಿನ ಸುಜಾತಾ ಅವರ ಪುತ್ರಿ ವೀಕ್ಷಿತಾ ಮಂಗಳಗಂಗೋತ್ರಿ ಎಸ್‌ಎವಿಪಿ ಕನ್ನಡ ಅಧ್ಯಯನ ವಿಭಾಗದಲ್ಲಿ ಕನ್ನಡ ಎಂಎಯಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ತಂದೆಯ ಅನಾ ರೋಗ್ಯದ ಹಿನ್ನೆಲೆಯಲ್ಲಿ ತಾಯಿಯ ದುಡಿಮೆಯೇ ವೀಕ್ಷಿತಾ ಓದಿಗೆ ಆಧಾರ. ಮಂಗಳೂರಿನಲ್ಲಿ ಪದವಿ ಓದುತ್ತಿದ್ದಾಗ ಕಾಲೇಜಿನ ಉಪನ್ಯಾ ಸಕರು ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ್ದರು ಎಂದು ಸ್ಮರಿಸುವ ಅವರು ಮುಂದೆ ಉಪನ್ಯಾಸಕಿಯಾಗುವಗುರಿ ಹೊಂದಿದ್ದಾರೆ.

ರವಿ ನಡುಬೆಟ್ಟು ಅವರಿಗೆ ಪಿಎಚ್‌.ಡಿ.
ಉಳ್ಳಾಲ: ನಡುಬೆಟ್ಟಿನ ಶ್ರೀ ರೌದ್ರನಾಥೇಶ್ವರ ಕ್ಷೇತ್ರದಲ್ಲಿ ಧರ್ಮದರ್ಶಿ ಯಾಗಿ ಸೇವೆ ಸಲ್ಲಿಸಲು ಕೆನರಾ ಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿ ಹುದ್ದೆಯನ್ನು ತ್ಯಜಿಸಿದ್ದ ರವಿ ಎನ್‌. “ಪಂಜುರ್ಲಿ ದೈವದ ಪ್ರಾಧಾನ್ಯ, ಪ್ರದರ್ಶನಾತ್ಮಕತೆ: ಮಾನವ ಸಂಪನ್ಮೂಲ ಅಭಿವೃದ್ಧಿ ಆಧಾರಿತ ಅಧ್ಯಯನ’ ವಿಷಯದಲ್ಲಿ ಪಿಎಚ್‌. ಡಿ. ಪದವಿಯನ್ನು ಸ್ವೀಕರಿಸಿದ್ದಾರೆ.

prajaprabhat

Recent Posts

ಉತ್ತರ ಪ್ರದೇಶದಲ್ಲಿ ಪ್ರವಾಹದ ಅಬ್ಬರ: ಹಲವು ಜಿಲ್ಲೆಗಳಲ್ಲಿ ಗಂಗಾ, ಯಮುನಾ ನದಿಗಳು ಅಪಾಯದ ಮಟ್ಟ ದಾಟಿವೆ.

ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…

7 hours ago

ಭಾವನಗರ-ಅಯೋಧ್ಯಾ ಸಾಪ್ತಾಹಿಕ ರೈಲಿಗೆ ರೈಲ್ವೆ ಸಚಿವರು ಹಸಿರು ನಿಶಾನೆ ತೋರಿಸಿದರು.

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…

7 hours ago

ರಷ್ಯಾದ ಕುರಿಲ್ ದ್ವೀಪಗಳಲ್ಲಿ 6.8 ತೀವ್ರತೆಯ ಭೂಕಂಪನ

ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…

7 hours ago

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಶ್ರೀ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…

7 hours ago

ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ,

ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…

7 hours ago

600 ವರ್ಷಗಳ ನಂತರ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಸ್ಫೋಟಗೊಂಡು, 4 ಕಿ.ಮೀ ಎತ್ತರಕ್ಕೆ ಬೂದಿ ಸುರಿಯುತ್ತಿದೆ.

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…

8 hours ago