ವಿಶೇಷ ಡಿ.ಇಡಿ ತರಬೇತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ವಿಷೇಶ ತರಬೇತಿ ಕೇಂದ್ರಕ್ಕೆ ಶಿಕ್ಷಕರಾಗಲು ಎರಡು ವರ್ಷಗಳ ವಿಶೇಷ ಡಿ.ಇಡಿ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜು.12 .

ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.50(ಎಸ್‌ಸಿ, ಎಸ್‌ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45) ಅಂಕಗಳೊoದಿಗೆ ತೇರ್ಗಡೆಯಾಗಿರಬೇಕು.

ಈ ತರಬೇತಿ ಕಾರ್ಯಕ್ರಮಗಳು ರೆಗ್ಯೂಲರ್ ಆಗಿದ್ದು, ವಿಕಲಚೇತನರು ಸೇರಿದಂತೆ ಸಾಮಾನ್ಯ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ.

https://nber-rehabcouncil.gov.in

ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ತರಬೇತಿಗಳು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ಬೋಧನ ಶುಲ್ಕ ಇರುವುದಿಲ್ಲ.

ಡಿ.ಇಡಿ.ಎಸ್‌ಪಿಲ್.ಇಡಿ(VI)- ಹೆಲೆನ್ ಕೆಲ್ಲರ್ ಸರ್ಕಾರಿ ಟೀಚರ್ ಟ್ರೆöÊನಿಂಗ್ ಸೆಂಟರ್ ಫಾರ್ ವಿಜುಯಲಿ ಹ್ಯಾಂಡಿಕ್ಯಾಪ್ಡ್-ಕೆಕೆ016, ಡಿ.ಇಡಿ.ಎಸ್‌ಪಿಎಲ್.ಇಡಿ(HI)- ಗವರ್ನ್ಮೆಂಟ್ ಟೀಚರ್ ಟ್ರೆöÊನಿಂಗ್ ಸೆಂಟರ್ ಫಾರ್ ಇಯರಿಂಗ್ ಹ್ಯಾಂಡಿಕ್ಯಾಪ್ಡ್-ಕೆಕೆ015 ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ.

ಈ ತರಬೇತಿಯನ್ನು ಪಡೆದರೆ, ರಾಜ್ಯ ಸರ್ಕಾರದ ಸಾಮಾನ್ಯ ಶಾಲೆ ಮತ್ತು ವಿಶೇಷ ಶಾಲೆಗಳರಡರಲ್ಲೂ ಶಿಕ್ಷಕರಾಗಬಹುದು. ವಿಕಲಚೇತನರ ಇಲಾಖೆಯ ಅಡಿಯಲ್ಲಿ ಬರುವ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಬಹುದು. ಸಿಬಿಎಸ್‌ಸಿ ಶಾಲೆಗಳಲ್ಲಿ ಶಿಕ್ಷಕರಾಗಬಹುದು, ಸರ್ವ ಶಿಕ್ಷಣ ಅಭಿಯಾನದಲ್ಲಿ ಸಂಪನ್ಮೂಲ ಶಿಕ್ಷಕರಾಗಬಹುದು.

ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪನ್ಮೂಲ ವ್ಯಕ್ರಿಗಳಾಗಿ ಕಾರ್ಯ ನಿರ್ವಹಿಸಬಹುದು. ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಬಹುದು. ರಾಷ್ಟಿçoಯ ಸಂಸ್ಥೆಗಳು/ಪ್ರಾದೇಶಿಕ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಬಹುದು. ಮಾತಿನ ತರಬೇತಿ ಘಟಕದಲ್ಲೂ ಕಾರ್ಯ ನಿರ್ವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ 0821 2491600 ಹಾಗೂ ತರಬೇತಿ ಸಂಯೋಜಕರಾದ ಆಶಾ.ವಿ ಹಿರೇಮಠ್-9113561620, ಟಿ.ಡಿ.ಮಂಜುನಾಥ್-9686762378 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

prajaprabhat

Recent Posts

‘ಹರ ಘರ ತಿರಂಗಾ”ಕಾರ್ಯಕ್ರಮ

ಬೀದರ.14 ಆಗಸ್ಟ್.25:- 'ಹರ ಘರ ತಿರಂಗಾ" ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.…

2 hours ago

ಸ್ವಾತಂತ್ರ್ಯ ಭಾರತದೊಳಗೆ ಇರುವ ಸಮಸ್ಯೆಗಳು.

                          ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ…

4 hours ago

ರಾಜ್ಯದಲ್ಲಿ ಖಾಲಿ ಪ್ರಾಧ್ಯಾಪಕರ ಹುದ್ದೆಗಳು  ಶೀಘ್ರ ಭರ್ತಿ ಮಾಡಲಾಗುವುದು.

ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್‌ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…

11 hours ago

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

13 hours ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

14 hours ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

14 hours ago