04 ಡಿಸೆಂಬರ್ 24 ಚಿಂತಾಮಣಿ : ತಾಲ್ಲೂಕಿಗೆ ಮಂಜೂರು ಆಗಿರುವ 24 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಚಾಲನೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ ಇನ್ನು ಜೆಡಿಎಸ್ ನವರ ಮೊಸಳೆ ಕಣ್ಣೀರಿನಾಟ ನಡೆಯುವುದಿಲ್ಲ .ಇನ್ನೇನಿದ್ದರೂ ಅಭಿವೃದ್ಧಿಗೆ ಅಷ್ಟೆ ಬೆಲೆ. ಕಣ್ಣೀರಿಗೆ ಬೆಲೆಕೊಟ್ಟು ಓಟು ಹಾಕುವರಿಲ್ಲ ಎಂದು ಚನ್ನಪಟ್ಟಣ ವಿಧಾನಸಭೆಯ ಉಪಚುನಾವಣೆ ಫಲಿತಾಂಶ ಉಲ್ಲೇಖಿಸಿ ಕುಟುಕಿದರು.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಾಯಕರಾದ ದೇವಗೌಡರು ಕುಮಾರಸ್ವಾಮಿಗಳು ಮತ್ತುನಿಖಿಲ್ ಕುಮಾರಸ್ವಾಮಿ ಸೇರಿ ತಾತ ತಂದೆ ಮಗೆ ಎಲ್ಲರೂ ಕಣ್ಣೀರಿಟ್ಟಿದ್ದಾರೆ. ಆದರೆ ಕಣ್ಣೀರಿಟ್ಟರೆ ಮತಹಾಕುವ ಕಾಲಹೋಯಿತು. ಈಗ ಏನಿದ್ದರು ಅಭಿವೃದ್ದಿಮಾಡಬೇಕು. ಅಭಿವೃದ್ಧಿ ಮಾಡಿದರೆ ಮಾತ್ರ ಜನ ಕೈ ಹಿಡಿಯುತ್ತಾರೆ ಎಂದರು.
ಇನ್ನು ಸಿ.ಪಿ.ಯೋಗ್ಯೇಶ್ವರ್ ರವರು ಹಿಂದೆ ಶಾಸಕರಾಗಿದ್ದ ವೇಳೆ ತಾಲ್ಲೂಕಿನ ಎಲ್ಲಾ ಕೆರಗಳಿಗೆ ನೀರು ಹರಿಸಿದರು. ಅದರ ಫಲವೆ ಇಂದು ಅವರ ಗೆಲುವಿಗೆ ಕಾರಣವಾಯಿತು .ಆದರೆ ಕುಮಾರಸ್ವಾಮಿ ಯವರು ಮುಖ್ಯಮಂತ್ರಿ ಆಗಿದ್ದರೂ ಸಹ ಅವರ ಕ್ಷೇತ್ರದಲ್ಲಿ ನಯಾಪೈಸೆ ಅಭಿವೃದ್ದಿ ಮಾಡಲಿಲ್ಲ.ಅದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಇನ್ನು ನಾನು ಮೊದಲಬಾರಿಗೆ ಶಿಕ್ಷಣ ಸಚಿವನಾಗಿದ್ದರೂ ಹತ್ತಾರು ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ದಿ ಪಡಿಸುತ್ತಿದ್ದೇನೆ .ಆದರೆ ಕುಮಾರಸ್ವಾಮಿ ರವರು ಕೇವಲ ಐದು ಹತ್ತು ಕೋಟಿ ಕಾಲೇಜಿಗೆ ಕೊಟ್ಟು ಅದನ್ನು ಪದೆ ಪದೇ ಪ್ರಚಾರ ಮಾಡುತ್ತಿದ್ದಾರೆಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಚಿನ್ನಪ್ಪ,ಗ್ರಾಮ ಪಂಚಾಯತಿ ಸದಸ್ಯ ಅಂಬರೀಶ್,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ,ಮುಖಂಡರಾದ ಮುಸ್ತಫಾ,ಅಸ್ಲಾಂ ಪಾಷಾ,ಪವಿತ್ರ ಚಂದ್ರಶೇಖರ್,ಜಂಗಮಶೀಗೆಹಳ್ಳಿ ಮುನಿನಾರಾಯಣಪ್ಪ,ನಗರಸಭೆ ಅದ್ಯಕ್ಷ ಜಗನ್ನಾಥ್,ಉಪಾದ್ಯಕ್ಷೆ ರಾಣಿಯಮ್ಮ ಸಂಬಂಧಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು,ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…