ವಿಧ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಅಸಾಧ್ಯವಾದದ್ದು ಸಾಧಿಸಲು ಸಾಧ್ಯ- ಸಚಿವ ಈಶ್ವರ ಖಂಡ್ರೆ.



ಬೀದರ.23.ಜನವರಿ.25:- ಬೀದರ ತಾಲ್ಲುಕಿನ  ಕೋಳಾರ ಕೆ ಗ್ರಾಮದ ಹೊರವಲಯದಲ್ಕಿರುವ ಸಂಸ್ಕಾರ ಪಿಯು ಕಾಲೇಜ ಆವರಣದಲ್ಲಿ  ಶಾಲಾ ಶಿಕ್ಷಣ ಇಲಾಖೆ,ಹಾಗೂ ಬನ್ಸಲ್ ಕ್ಲಾಸೆಸ್ ಸಂಯುಕ್ತಾಶ್ರಯದಲ್ಲಿ  ಗುರುವಾರ ಹಮ್ಮಿಕೊಂಡಿರುವ  2024- 25 ಸಾಲಿನ ಜಿಲ್ಲೆಯ 10 ನೇ ತರಗತಿ ಫಲಿತಾಂಶ ಸುಧಾರಣೆ ಕಾರ್ಯಗಾರ ಉದ್ಘಾಟಿಸಿ ಹಾಗೂ ಶತಾಯುಷಿ ಭಿಮಣ್ಣಾ ಖಂಡ್ರೆ ಹಾಗು ಲಿಂಗೈಕ್ಯ ಬಸವರಾಜ ಪಾಟೀಲ್ ಹುಮನಬಾದ ಅವರ ಸ್ಮರಣಾರ್ಥ ವಾಗಿ ಸುರಬಿ ಎನ್ ಜಿ ಓ ದಿಂದ ಘೊಷಣೆ ಮಾಡಿರುವ ಗೋಲ್ಡನ್ ಕಾರ್ಡ್  ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬಿಡುಗಡೆ ಮಾಡಿದರು.


ನಂತರ ಅವರು ಮಾತನಾಡಿ
ಆತ್ಮ ವಿಶ್ವಾದಿಂದ ಅಸಾಧ್ಯವಾದದ್ದು ಸಾಧಿಸಲು ಸಾಧ್ಯವಿದೆ ಎಂದು ನುಡಿದರು.


ವಿದ್ಯಾರ್ಥಿಗಳು ಜಿವಮದಲ್ಲಿ ದೊಡ್ಡ ಗುರಿಯಿಟುಕೊಂಡು ಕಠಿಣ ಪರಿಶ್ರಮದೊಂದಿಗೆ ತಾವು ಕಂಡಿರುವ ಕನಸು ನನಸಾಗಿಸಿಕೊಳ್ಳಲು ಸಾಧ್ಯವಿದೆ ಎಂದರು.


ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಅಗತ್ಯವಿದೆ ,ಕೆವಲ ವಿದ್ಯಾವಂತನಾದರೆ ಸಾಲದು ಜೊತೆಯಲ್ಲಿ ಉತ್ತಮ ಚಾರಿತ್ರೆ ಹೊಂದಿರಬೇಕು ಎಂದು ತಿಳಿಸಿದರು.
ನಮ್ಮಲಿ ಪ್ರತಿಭಾವಂತರ ಕೊರತೆಯಿಲ್ಲ.ಇವತ್ತು ನಮ್ಮಲಿ ಉನ್ನತ ವ್ಯಾಸಾಂಗ ಮಾಡಿ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿ ಕಾರ್ಯ ನಿರವಹಿಸುತಿದ್ದಾರೆ.

ಒಂದು ವೇಳೆ ಮರಳಿ ಭಾರತಕ್ಕೆ ಬಂದರೆ ಆ ದೇಶಗಳ ಆಡಳಿತ ವ್ಯವಸ್ಥೆ ಕುಸಿಯುತದೆ ಎಂದರು.
ವಿದ್ಯಾರ್ಥಿ ಗಳ ಭವಿಷ್ಯ ರೂಪಿಸುವ ಮಹತ್ವ ಘಟಹೊಂದಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ರೀತಿ ಸಾಧನೆ ಮಾಡಿ ಹೆಚ್ಚಿನ ಅಂಕಗಳು ಪಡೆದು ಉನ್ನತ ವಿದ್ಯಾಭಾಸ ಮಾಡುವಂತೆ ತಿಳಿಸಿದರು.


ಸುರಬಿ ಎನ್ ಜಿ.ಓ ದಿಂದ ಘೊಷಿಸಿರುವ ಗೊಲ್ಡ್ ಕಾರ್ಡ್ ಜಿಲ್ಲೆಯ ಸರಕಾರಿ ,ಅನುದಾನಿತ,ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಂದ ಯಾರು ಅತಿ ಹೆಚ್ಚು ಅಂಕಗಳನ್ನು ಹತ್ತನೆ ತರಗತಿಯಲ್ಕಿ ಪಡೆಯುತ್ತಾರೆ ಅಂಥವರನು ಇದರ ಸದುಪಯೊಗ ಪಡೆದುಕೊಳ್ಳಲು ಅತ್ಯುತ್ತಮ ಅವಕಾಶವಿದೆ ಎಂದು ಹೆಳಿದರು.


ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರ ಶೇಖರ ಪಾಟೀಲ್ ಮಾತನಾಡಿ ಹತ್ತನೆ ತರಗತಿಯ ಫಲಿತಾಂಸ ಸುಧಾರಣೆ ಕುರಿತು ಹಮ್ಮಿಕೊಂಡಿರುವ ಕಾರ್ಯಗಾರ ಬಹಳಷ್ಟು ಸಂತಸ ತಂದಿದೆ ಎಂದರು.


ವಿದ್ಯಾರ್ಥಿಗಳು ಯಾವದೆ ರೀತಿ ಧೈರ್ಯ ಕುಂದದೆ ಗುರಿಯಿಟುಕೊಂಡು ಪರಿಶ್ರಮ ಪಟ್ಟರೆ ತಾವು ಅಂದಿಕೊಂಡಿದು ಸಾಧಿಸಲು ಸಾಧ್ಯವಿದೆ ಎಂದು ನುಡಿದರು.
ಅನ್ನುತಿರಣವಾದರೆ ಧೈರ್ಯ ಗುಂದದೆ ವಿದ್ಯಾಭಾಸದಲ್ಲಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.


ಸಂಸ್ಥೆ ಯ ವ್ಯವಸ್ಥಾಪಕ ನಿರ್ದೇಶಕ ರಾದ ಡಾ.ಅಮರ ಎರಳೊಕರ ಗೊಲ್ಡ್ ಕಾರ್ಡ್ ಪ್ರಯೊಜನ ,ಸೌಲಭ್ಯ ಪಡೆಯಬೇಕಾದ ಅರ್ಹ ತೆ ಕುರಿತು ಸವಿಸ್ತಾರವಾಗಿ ತಿಳಿಸಿದರು.


ವೇದಿಕೆಯ ಮೇಲೆ  ಸಂಸ್ಥೆ ಯ ಅಧ್ಯಕ್ಷರಾದ ಶ್ರೀ ಮತಿ ಅನುಪಮ ಎರೊಳಕರ್,ನಿರ್ದೇಶಕ ರಾದ ಪ್ರಕಾಶ ಟೊಣೆ, ಕು.ಕ್ಷಿತಿಜಾ ಎರಳೊಕರ್, ಆಡಳಿತ ಅಧಿಕಾರಿ ಶ್ರಿಮತಿ ಸರೋಜಾ ಅರಳಿ,ಅವಿನಾಶ ಎರಳೊಕರ,ಬೀದರ್ ಕ್ಷೇತ್ರ  ಶಿಕ್ಷಣಾಧಿಕಾರಿ ಟಿ.ಆರ್.ದೊಡ್ಡಿ.ಪ್ರಾಂಶುಪಾಲ ಮಲಿನಾಥ ಮಠಪತ್ತಿ ಸೇರಿದಂತೆ ಮತಿತರರು ಇದ್ದರು.


ಕಾರ್ಯಗಾರದಲ್ಲಿ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿ,ವಿದ್ಯಾರ್ಥಿ ನಿಯರು.ಶಿಕ್ಷಕರು ಭಾಗವಹಿಸಿದರು.

prajaprabhat

Recent Posts

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

11 minutes ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

27 minutes ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

37 minutes ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

2 hours ago

ಆ.6 ರಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮ

ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…

3 hours ago

ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ

ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…

3 hours ago