ಜಿಲ್ಲಾ ಅಂಗವಿಕಲರ ಕಾರ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಕ್ಕೆ ಗೌರವಧನ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊನೆಯ ದಿನಾಂಕ: ಮೇ 17 ದಿನವಾಗಿದೆ.
ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. 18-45 ವರ್ಷಗಳ ವಯೋಮಿತಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಫಿಸಿಯೋಥೆರಪಿಸ್ಟ್/ಆಕ್ಯುಪೇಷನಲ್ ಥೆರಪಿಸ್ಟ್-1 ಹುದ್ದೆ ಖಾಲಿ ಇದ್ದು, ಡಿಗ್ರಿ ಇನ್ ಪಿಸಿಯೋಥೆರಪಿ/ಆಕ್ಯುಪೇಷನಲ್ ಥೆರಪಿ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ರೂ.25000/- ನೀಡಲಾಗುವುದು. ಪ್ರಾಥೋಟಿಸ್ಟ್ ಮತ್ತು ಆರ್ಥೋಟಿಸ್ಟ್ (ಪಿ&ಒ)-1 ಹುದ್ದೆ ಖಾಲಿ ಇದ್ದು, ಡಿಪ್ಲೊಮಾ ಇನ್ ಪಿ&ಓ/ಐಟಿಐ (ಫಿಟ್ಟರ್) ವಿದ್ಯಾರ್ಹತೆ ಹೊಂದಿರಬೇಕು.
ಮಾಸಿಕ ರೂ.12000/-ವೇತನ ನೀಡಲಾಗುವುದು. ಸ್ಪೀಚ್ ಥೆರಪಿಸ್ಟ್ & ಆಡಿಯಾಲಿಜಿಸ್ಟ್-1 ಹುದ್ದೆ ಖಾಲಿ ಇದ್ದು, ಬಿ.ಎಸ್ಸಿ ಇನ್ ಸ್ಪೀಚ್ ಮತ್ತು ಆಡಿಯಾಲಜಿ ವಿದ್ಯಾರ್ಹತೆ ಹೊಂದಿರಬೇಕು.
ಮಾಸಿಕ ರೂ.25000/-ವೇತನ ನೀಡಲಾಗುವುದು. ಮೊಬಿಲಿಟಿ ಇನ್ಸ್ಟ್ರಕ್ಟರ್-1 ಹುದ್ದೆ ಖಾಲಿ ಇದ್ದು, ಸರ್ಟಿಫಿಕೇಟ್ ಕೋರ್ಸ್ ಇನ್ ಓರಿಯಂಟೇಷನ್ & ಮೊಬಿಲಿಟಿ (ಓ&ಎಂ) ವಿದ್ಯಾರ್ಹತೆ ಹೊಂದಿರಬೇಕು.
ಮಾಸಿಕ ರೂ.8000/- ವೇತನ ನೀಡಲಾಗುವುದು. ಇಯರ್ ಮೋಲ್ಡ್ ಟೆಕ್ನಿಷಿಯನ್-1 ಹುದ್ದೆ ಖಾಲಿ ಇದ್ದು, ಸರ್ಟಿಫಿಕೇಟ್ ಇನ್ ಇಯರ್ ಮೋಲ್ಡ್ ಟೆಕ್ನಾಲಜಿ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ರೂ.8000/- ವೇತನ ನೀಡಲಾಗುವುದು.
ಹುದ್ದೆ ಮತ್ತು ವಿದ್ಯಾರ್ಹತೆಗನುಗುಣವಾಗಿ ಸ್ವ-ವಿವರದೊಂದಿಗೆ ಅರ್ಜಿಯನ್ನು ಸಿದ್ದಪಡಿಸಿ, ಮೊಬೈಲ್ ಸಂಖ್ಯೆ ನಮೂದಿಸಿ, ಅಗತ್ಯ ದಾಖಲೆಗಳೊಂದಿಗೆ ಕಾರ್ಯದರ್ಶಿಗಳು, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ , ಲೋಕಾಯುಕ್ತ ಕಚೇರಿ ಆವರಣ ಬಿ.ಡಿ.ರಸ್ತೆ ಚಿತ್ರದುರ್ಗ-577501,
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ
08194-220085, ಮೊಬೈಲ್ 9448038400 ಹೆಸರಿನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಕಚೇರಿಯಿಂದ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…