ಚಿತ್ರದುರ್ಗ.07.ಜುಲೈ.25:- ರಾಜ್ಯದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ಕಾರ್ಯನಿರ್ವಹಿಸುತ್ತಿರುವ ಮೋರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಇಂದಿರಾಗಾoಧಿ ವಸತಿ ಶಾಲೆಗಳಲ್ಲಿ ಖಾಲಿ ಇರುವ 9 ಮತ್ತು 10 ನೇ ತರಗತಿಯಲ್ಲಿ ಸ್ಥಾನಗಳಿಗೆ ನೇರ ಪ್ರವೇಶ ನೀಡಲಾಗುತ್ತಿದೆ.
ಈಗಾಗಲೇ ಸರ್ಕಾರ ಆದೇಶದಂತೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆ ಸಮಿತಿಯಲ್ಲಿ ತಾಲ್ಲೂಕುವಾರು ಖಾಲಿ ಇರುವ ಸ್ಥಾನಗಳಿಗೆ ಮೀಸಲಾತಿ ಗುರುತಿಸಲಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 9ನೇ ತರಗತಿಗೆ 8 ಹಾಗೂ 10ನೇ ತರಗತಿಗೆ 28 ಸ್ಥಾನಗಳು ಖಾಲಿಯಿವೆ. ಚಳ್ಳಕೆರೆ ತಾಲ್ಲೂಕಿನಲ್ಲಿ 9ನೇ ತರಗತಿಗೆ 6 ಹಾಗೂ 10ನೇ ತರಗತಿಗೆ 13, ಹಿರಿಯೂರು ತಾಲ್ಲೂಕಿನಲ್ಲಿ 9ನೇ ತರಗತಿಗೆ 5 ಹಾಗೂ 10ನೇ ತರಗತಿಗೆ 22, ಹೊಳಲ್ಕೆರೆ ತಾಲ್ಲೂಕಿನಲ್ಲಿ 9ನೇ ತರಗತಿಗೆ 15 ಹಾಗೂ 10ನೇ ತರಗತಿಗೆ 27,ಹೊಸದುರ್ಗ ತಾಲ್ಲೂಕಿನಲ್ಲಿ 9ನೇ ತರಗತಿಗೆ 18 ಹಾಗೂ 10ನೇತರಗತಿಗೆ 19 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 9ನೇ ತರಗತಿಗೆ 2 ಹಾಗೂ 10ನೇ ತರಗತಿಗೆ 1 ಸ್ಥಾನ ಖಾಲಿಯಿದೆ.
ಅರ್ಹ ಅಭ್ಯರ್ಥಿಗಳು ತಮಗೆ ಸಮೀಪವಿರುವ ವಸತಿ ಶಾಲೆಗೆ ಭೇಟಿ ನೀಡಿ ನೇರ ಪ್ರವೇಶ ಪಡೆಯಬಹುದು. 2024-25ನೇ ಸಾಲಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಶೇ.75ಕ್ಕಿಂತ ಹೆಚ್ಚಿನ ಅಂಕಗಳೊoದಿಗೆ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮೊಹಮ್ಮದ್ ಜಿಲಾನಿ ಖುರೇಷಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು.08.ಜುಲೈ.25:- ರಾಜ್ಯದಲ್ಲಿ ದಿನಾಲು ಯುವ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ 'ಹೃದಯ ತಪಾಸಣೆ' ನಡೆಸಲು ಈ…
ಕೊಪ್ಪಳ.07.ಜುಲೈ.25:- ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟೀ ನಂತರ ಮಾತೊಂದು ಗ್ಯಾರಂಟಿ ಘೋಷಣೆ ಮಾಡಿ ಮಾಡಿದಾರೆ ಇನ್ಮುಂದೇ ರಾಜ್ಯ ಸರ್ಕಾರ…
ಬೆಂಗಳೂರು.07.ಜುಲೈ.25:- ರಾಜ್ಯದಲ್ಲಿ 6000 ಭಾರತಿ ಖಾಯಂಹಿಡೆಗಳನು ವನ್ಯಜೀವಿಗಳ ಸಂರಕ್ಷಣೆ ಹಾಗೂ ಅರಣ್ಯ ಜಮೀನು ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಇಲಾಖೆಯಲ್ಲಿ ಖಾಲಿ…
ಕಲಬುರಗಿ.07.ಜುಲೈ.25:- ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಇತರರ 29 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೌಕರರ ರಾಜ್ಯ…
ಬೆಂಗಳೂರು.07.ಜುಲೈ.25:- ರಾಜ್ಯದಲ್ಲಿ ಆಸ್ತಿ ಮಾಲೀಕರಿಗೆ ಜು.31 ರವರೆಗೆ ವಿಶೇಷ ಇ-ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಭಾಗಿಯಾಗಬಹುದಾಗಿದೆ.2025ರ ಜುಲೈ 1 ರಿಂದ…
ಬೆಂಗಳೂರು.07.ಜುಲೈ.25:- ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪತ್ರಕರ್ತರಿಗೆ ಕನ್ನಡ ಸಾಹಿತ್ಯ ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ ಶಿಬಿರವನ್ನು, ಆಗಸ್ಟ್ 3ನೇ…