ವಸತಿ ರಹಿತ ಕುಟುಂಬಗಳ ಪಟ್ಟಿ ತಯ್ಯಾರಿಸಲು ಸಂಸದ ಸಾಗರ ಈಶ್ವರ ಖಂಡ್ರೆ ಸೂಚನೆ

ಬೀದರ.25.ಮಾರ್ಚ.25: ಸರ್ಕಾರದ ವಸತಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ಜಿಲ್ಲೆಯ ವಸತಿ ರಹಿತ ಕುಟುಂಬಗಳ ಪಟ್ಟಿ ತಯ್ಯಾರಿಸಿ ತ್ವರಿತ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಬೀದರ ಲೋಕಸಭಾ ಸಂಸದರಾದ ಸಾಗರ ಈಶ್ವರ ಖಂಡ್ರೆ ಸೂಚನೆ ನೀಡಿದರು.


ಅವರು ಬೀದರ ಲೋಕಸಭಾ ಕ್ಷೇತ್ರದಲ್ಲಿ ಪಿ.ಎಂ.ಎ.ವೈ (ಗ್ರಾಮೀಣ ಮತ್ತು ನಗರ) ವಸತಿ ಯೋಜನೆಯ ಅನುಷ್ಠಾನ ಕುರಿತಂತೆ ಬೀದರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.


ಬೀದರ ಕ್ಷೇತ್ರವನ್ನು ಗುಡಿಸಲು ಮುಕ್ತಗೊಳಿಸುವ ಗುರಿ ಹೊಂದಿದ್ದು, ಯಾವುದೇ ಕುಟುಂಬವೂ ವಸತಿ ರಹಿತವಾಗಿರಬಾರದು. ಪ್ರಧಾನಮಂತ್ರಿ ಆವಾಸ್ (ಗ್ರಾಮೀಣ) ಯೋಜನೆಯಡಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆಯನ್ನು ಮಾರ್ಚ. 31 ರವರೆಗೆ ಕಾಲವಕಾಶ ಇರುವುದರಿಂದ, ಈ ಸಮೀಕ್ಷೆಯಲ್ಲಿ ಎಲ್ಲಾರೂ ಕಡ್ಡಾಯವಾಗಿ ಪಾಲ್ಗೊಂಡು ಸಮೀಕ್ಷೆಯ ಮಾಹಿತಿಯನ್ನು ಂತಿಚಿಚಿsoಜಿಣ Poಡಿಣಚಿಟ ಅಳವಡಿಸಲು ಹಾಗೂ 2024-25ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಲಾದ ಗುರಿಗೆ ಅನುಗುಣವಾಗಿ ಆದ್ಯತೆಯ ಪಟ್ಟಿಯ ಪ್ರಕಾರ ಫಲಾನುಭವಿಗಳ ಅನುಮೋದನೆ ಪಡೆದು ಬಡ ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದರು.


ಸರ್ಕಾರದಿಂದ ನಿಗಧಿಪಡಿಸಿದ ಕಾಲಮೀತಿಯೊಳಗಾಗಿ ಸದರಿ ಸಮೀಕ್ಷೆ ಹಾಗೂ ಫಲಾನುಭವಿಗಳ ಅನುಮೋದನೆಯನ್ನು ಯಶಸ್ವಿಗೊಳ್ಳಿಸದೆ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮಕೈಗೊಳ್ಳಲು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರಿಗೆ ಸೂಚಿಸಿದರು.


ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಬೇಸಿಗೆ ಕಾಲ ಪ್ರಾರಂಭವಾಗುತ್ತಿರುವುದರಿAದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮತ್ತು ಜಲ ಜೀವನ ಮೀಷನ ಯೋಜನೆಯ ನಿಯಮಾನುಸಾರ ಅನುಷ್ಠಾನಗೊಳಿಸಲು ಸಂಸದರು ಸೂಚಿಸಿದರು.


ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಪ್ರಮುಖ ಅಧಿಕಾರಿಗಳು, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಂಬAಧಿತ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

ವಸತಿಯುಕ್ತ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ

2025-26ನೇ ಸಾಲಿಗೆ ಧರ್ಮಪುರ ದೇವರಕೊಟ್ಟ ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗ ವಸತಿ ಪದವಿಪೂರ್ವ ಕಾಲೇಜು ಮಂಜೂರಾಗಿದ್ದು, ಖಾಲಿ ಇರುವ ಹುದ್ದೆಗಳು…

2 hours ago

ಅಥಿತಿ ಉಪನ್ಯಾಸಕರ ಆಯ್ಕೆಗೆ ಅನಧಿಕೃತ PH.D ಪ್ರಮಾಣಪತ್ರ

ರಾಯಚೂರು.12.ಆಗಸ್ಟ್.25:- ಅಥಿತಿ ಉಪನ್ಯಾಸಕರ ಆಯ್ಕೆಗೆ ಅನಧಿಕೃತ ಪ್ರಮಾಣಪತ್ರ ಹೊಂದಿರುವ ಅಭ್ಯಾರ್ಥಿಗಳ ತಡಿಯುವ ಕುರಿತು. ಮಾನ್ಯರೇ, ಈ ಮೇಲ್ಕಾಣಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ…

5 hours ago

ವಿಶೇಷಚೇತನ ಅತಿಥಿ ಉಪನ್ಯಾಸಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ ಸರ್ಕಾರ ಗಮನ ಸೆಳೆಲೀ..

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಶೇಷ ಚೇತನ ಬದುಕು ಸ್ಥಿತಿ ? ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ…

6 hours ago

Free ಉಚಿತ ‘ಮೊಬೈಲ್ ರಿಪೇರಿ’ ತರಬೇತಿಗಾಗಿ ಅರ್ಜಿ ಆಹ್ವಾನ

ರಾಜ್ಯದ ಯುವಕರಿಂದ ಶುಭ ಸುಧಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌…

7 hours ago

ಯುವತಿಗೆ ಚುಡಾಯಿಸಿದ ಆರೋಪ, ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ ದುಷ್ಕರ್ಮಿಗಳು!

ಬೆಳಗಾವಿ.12.ಆಗಸ್ಟ್.25:- ಬೆಳಗಾವಿ ಜಿಲ್ಲೆ ರಾಮದುರ್ಗ  ತಾಲ್ಲೂಕಿನಲ್ಲಿ ಗೊಡಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಈ ಇಬ್ಬರು ಯುವಕರನ್ನು  ಪರಿಶಿಷ್ಟ ಪಂಗಡಕ್ಕೆ…

9 hours ago

ಸಾರಿಗೆ ಇಲಾಖೆಯಲ್ಲಿ 1,000 ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ.ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು.12.ಆಗಸ್ಟ್.25:- ರಾಜ್ಯ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ 1,000 ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಸಚಿವ ರಾಮಲಿಂಗ…

10 hours ago