ವರ್ಷದಿಂದ ಹಾರಾಡದ ವಿಮಾನ: ಮುಚ್ಚುವ ಭೀತಿಯಲ್ಲಿ ಬೀದರ್ ಏರ್ಪೋರ್ಟ್!

ಬೀದರ.31.ಜನವರಿ.25: ಕರ್ಣಾಟಕ ರಾಜ್ಯ. ಕಲ್ಯಾಣ್ ಕರ್ಣಾಟಕ ಭಾಗದ ಗಡಿ ಜಿಲ್ಲೆ ಬೀದರ ಜೆಲೆಯೆಲ್ಲಿ ಆರಂಭವಾದ ವಿಮಾನ ಸೇವೆಗಳು ಟ್ರೂ ಜೆಟ್ ಮತ್ತು ಸ್ಟಾರ್ ಏರ್ ಕಂಪನಿಗಳಿಂದ ನಿಲ್ಲಿಸಲ್ಪಟ್ಟಿವೆ. ಪ್ರಯಾಣಿಕರ ಕೊರತೆ ಮತ್ತು ಆರ್ಥಿಕ ನಷ್ಟ ಇದಕ್ಕೆ ಕಾರಣ ಎನ್ನಲಾಗಿದೆ.

ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಬೀದರ್ ವಿಮಾನ ನಿಲ್ದಾಣ ಮುಚ್ಚುವ ಭೀತಿ ಎದುರಾಗಿದೆ. ಜಿಲ್ಲಾಧಿಕಾರಿಗಳು ಮತ್ತೆ ವಿಮಾನ ಸೇವೆ ಆರಂಭಿಸುವ ಭರವಸೆ ನೀಡಿದ್ದಾರೆ.

ಬೀದರ್, ಜನವರಿ 30: ಆ ಜಿಲ್ಲೆಯಿಂದ ರಾಜ್ಯದ ರಾಜ್ಯಧಾನಿ ಬೆಂಗಳೂರಿಗೆ ವಿಮಾನ ಹಾರಾಡಬೆಕೆಂಬ ಕನಸನ್ನು ಅಲ್ಲಿನ ಜನ ಕಂಡಿದ್ದರು.

ಆ ಜಿಲ್ಲೆಯ ನಾಗರಿಕರ ಕನಸಿನಂತೆ ಗಡಿ ಜಿಲ್ಲೆ ಬೀದರ್ನಿಂದ ಬೆಂಗಳೂರಿಗೆ ಲೋಹದ ಹಕ್ಕಿಯ ಹಾರಾಟ ಶುರುವಾಯಿತು. ಆದರೆ ಒಂದು ವರ್ಷದಿಂದ ವಿಮಾನ ಹಾರಾಟ ನಿಲ್ಲಿಸಿದ್ದು, ಬೀದರ್ ವಿಮಾನ ನಿಲ್ದಾಣ ಮುಚ್ಚುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟ
ಬೀದರ್ ಜಿಲ್ಲೆಯಿಂದ ರಾಜ್ಯದ ರಾಜ್ಯದಾನಿ ಬೆಂಗಳೂರು, ದೆಹಲಿಗೆ ವಿಮಾನ ಹಾರಾಡಬೇಕೆಂಬ ಆಸೆ ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಜನರ ಬಹುದೊಡ್ಡ ಆಸೆಯಾಗಿತ್ತು. ಇದಕ್ಕಾಗಿ ಹತ್ತಾರು ಹೋರಾಟಗಳನ್ನ ಸಹ ಮಾಡಿದ್ದರು. ಜನರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ 8 ಫೆಬ್ರುವರಿ 2020 ರಂದು ಬೀದರ್ನಿಂದ ಬೆಂಗಳೂರಿಗೆ 72 ಸೀಟ್ನ ಟ್ರೂ ಜೆಟ್ ವಿಮಾನದ ಹಾರಾಟ ಆರಂಭಿಸಿತು.

ಆದರೆ ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದಾಗಿ ಟ್ರೂ ಜೆಟ್ ವಿಮಾನ ಕೆಲವು ತಿಂಗಳಲ್ಲಿಯೇ ತನ್ನ ಹಾರಾಟವನ್ನ ನಿಲ್ಲಿಸಿತು.

ಇದಾದ ಬಳಿಕ ಒಂದು ವರ್ಷಗಳ ಕಾಲ ವಿಮಾನ ಹಾರಾಡಲೇ ಇಲ್ಲಾ, ಪ್ರಯಾಣಿಕರು ಹೈದ್ರಾಬಾದ್ಗೆ ಹೋಗಿ ಅಲ್ಲಿಂದ ವಿಮಾಣದ ಮೂಲಕ ಬೆಂಗಳೂರು ಹೀಗೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುವಂತಾಯಿದೆ.

ಇದು ಪ್ರಯಾಣಿಕರಿಗೆ ಕಷ್ಟವಾಗತೊಡಗಿದಾಗ ಪ್ರಯಾಣಿಕರ ಒತ್ತಾಯದ ಮೇರೆಗೆ ಮತ್ತೆ 2022 ಜೂನ್ 14 ರಂದು ಸ್ಟಾರ್ ಏರ್ ವಿಮಾನ ತನ್ನ ಹಾರಾಟವನ್ನ ಆರಂಭಿಸಿತು.

ಆದರೆ ಕಳೆದೊಂದು ವರ್ಷದಿಂದ ಇದು ಕೂಡ ಆರ್ಥಿಕ ನಷ್ಟದಿಂದಾಗಿ ತನ್ನ ಸೇವೆಯನ್ನ ನಿಲ್ಲಿಸಿದೆ. ಹೀಗಾಗಿ ಇಲ್ಲಿ ಸುಸ್ಸಜ್ಜಿತಏರ್ಪೋರ್ಟ್ ಇದ್ದರು ಕೂಡ ಜಿಲ್ಲೆಯ ಜನರಿಗೆ ವಿಮಾನ ಸೌಲಭ್ಯ ಸಿಗದಂತಾಗಿದೆ. ಇದು ಸಹಜವಾಗಿಯೇ ಜಿಲ್ಲೆಯ ಜನರಿಗೆ ನಿರಾಸೆಯುಂಟು ಮಾಡಿದೆ.

ಕೋವಿಡ್ ಸಮಯದಲ್ಲಿಯೇ ಬೀದರ್ ವಿಮಾನ ನಿಲ್ದಾಣ ಆರಂಭವಾಗಿದ್ದರು ಕೂಡ ಅವತ್ತಿನಿಂದಾ ಇವತ್ತಿನ ವರೆಗೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿಯೇ ಓಡಾಡಿದ್ದಾರೆ. ಆದರೂ ಕೂಡ ಟ್ರೂ ಜೆಟ್ ಹಾಗೂ ಸ್ಟಾರ್ ಏರ್ ನವರು ನಷ್ಟವಾಗುತ್ತಿದೆಂದು ಹೇಳಿ ತಮ್ಮ ಸೇವೆಯನ್ನ ನಿಲ್ಲಿಸಿದ್ದು, ಇದು ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿದೆ.

ಬೀದರ್ನಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದರಿಂದ ಜಿಲ್ಲೆಯ ಜನರು ಅನಿವಾರ್ಯವಾಗಿ ಕಲಬುರಗಿ ಅಥವಾ ಹೈದ್ರಾಬಾದ್ಗೆ ಹೋಗಿ ವಿಮಾನದ ಮೂಲಕ ಬೆಂಗಳೂರಿಗೆ ಹೋಗವಂತಾ ಸ್ಥಿತಿ ಉಂಟಾಗಿದೆ. ಪಕ್ಕದ ಕಲಬುರ್ಗಿಯಿಂದ ದಿನಕ್ಕೆ ಐದಾರು ವಿಮಾನಗಳು ಹಾರಾಟ ಮಾಡುತ್ತಿವೆ.

ಜೊತೆಗೆ ಅನ್ಯ ರಾಜ್ಯಕ್ಕೂ ಕೂಡ ಇಲ್ಲಿಂದ ವಿಮಾನ ಹಾರಾಟ ಮಾಡುತ್ತಿದೆ. ಆದರೆ ಬೀದರ್ನಲ್ಲಿ ಮಾತ್ರ ಇದ್ದ ಒಂದೇ ಒಂದು ವಿಮಾನವೂ ಕೂಡ ಹಾರಾಟ ನಡೆಸದೆ ಇರೋದು ಜಿಲ್ಲೆಯ ಜನರ ಅಸಮಾಧಾನ ಹೆಚ್ಚುವಂತೆ ಮಾಡಿದೆ.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದ್ದಿಷ್ಟು
ಬಡವರು ಸಹ ವಿಮಾನ ಪ್ರಯಾಣ ಮಾಡಲಿ ಅನ್ನೋ ಉದ್ದೇಶದಿಂದ‌ ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದಿದೆ. ಅಡೆತಡೆಗಳ ನಡುವೆಯೋ ಗಡಿನಾಡಿನಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಐದು ವರ್ಷ ಕಳೆಯಿತು ಎನ್ನುವಷ್ಟರಲ್ಲಿ ವಿಮಾನ ಹಾರಾಟ ನಿಲ್ಲಿಸಿದೆ.

ಇನ್ನೂ ವಿಚಾರ ಬಗ್ಗೆ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾರನ್ನು ಕೇಳಿದರೆ, ವಿಮಾನ ನಿಲ್ದಾಣ ಬಂದ್ ಆಗಿಲ್ಲ. ವಿಮಾನ ಹಾರಾಟ ಮಾತ್ರ ಸ್ಥಗಿತವಾಗಿದೆ.

ಈಗಾಗಲೇ ಎರಡು ಕಂಪನಿಗಳ ಜೊತೆಗೆ ಮಾತುಕತೆ ನಡೆದಿದೆ ಶೀಘ್ರದಲ್ಲಿಯೇ ಮತ್ತೆ ವಿಮಾನ ಹಾರಾಟ ಮಾಡಲಿದೆ ಎಂದಿದ್ದಾರೆ.

ಬೀದರ್ನಿಂದ ವಿಮಾನ ಹಾರಾಟ ಆರಂಭವಾಗಿ ಐದು ವರ್ಷದಲ್ಲಿಯೇ ಎರಡು ಕಂಪನಿಯವರು ವಿಮಾನ ಹಾರಾಟ ನಿಲ್ಲಿಸಿವೆ. ಇನ್ನೂ ಮುಂದೆ ಬೀದರ್ನಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸುವುದು ಅನುಮಾನವಾಗಿದ್ದು ಬೀದರ್ ವಿಮಾನ ನಿಲ್ದಾಣ ಮುಚ್ಚುವ ಎಲ್ಲಾ ಲಕ್ಷಣಗಳು ಇಲ್ಲಿ ಗೋಚರಿಸುತ್ತಿವೆ.

prajaprabhat

Recent Posts

ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಈ ಪ್ರಕಾರ ನಡೆಯಲಿದೆ.

ಬೆಂಗಳೂರು.03.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ  ಕಾಲೇಜು ಶಿಕ್ಷಣ ಇಲಾಖೆಯು…

5 hours ago

ಆ.10ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಿರಿ.

ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್‌ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…

6 hours ago

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ- ಡಾ. ಸುರೇಶ ಇಟ್ನಾಳ

ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…

6 hours ago

Free Couching ಅಲ್ಪಸಂಖ್ಯಾತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…

6 hours ago

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ: ಆಸಕ್ತರು ಭಾಗವಹಿಸಿ

ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…

6 hours ago

ನ್ಯಾಯಾಲಯಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಸೇವೆ ಪೂರೈಕೆಗೆ ಅರ್ಜಿ ಆಹ್ವಾನ<br>

ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…

7 hours ago