ಡಿ.21:- ರೈತ ಬಾಂಧವರಿಗೆ ಈಗ ಸರ್ಕಾರ ಹೊಸಾ (ಫ್ರೂಟ್ಸ್ ಐಡಿ ) ಹೊಸಾ ನಿಯಮ ಜಾರಿಯಲಿ ತರಲಾಗುತ್ತಿದೆ. ಸರಕಾರ ವಿವಿಧ ಯೋಜನೆಗಳು ತರಲಾಗುತ್ತಿದೆ ಈ ಯೋಜನೆಗಳ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ಅತಿ ಆವಶಕ್.
ರೈತ ಮಿತರರಿಗೆ ಸರ್ಕಾರದ ವಿವಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲಾ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ಜೊತೆಗೆ ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯ ಸೌಲಭ್ಯ ಪಡೆಯಲು ರೈತರಿಗೆ ಎಫ್‍ಐಡಿ (ಫ್ರೂಟ್ಸ್ ಐಡಿ) ಕಡ್ಡಾಯವಾಗಿದೆ ಎಂದು ಬೀದರ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿ ಮುಖ್ಯ ಎಫ್.ಐ.ಡಿ ಎಂದರೇ ಕೃಷಿ ಇಲಾಖೆಯಿಂದ ರಾಜ್ಯದ ಎಲ್ಲಾ ರೈತರ ವಿವರವನ್ನು ವಿವಿಧ ಸೌಲಭ್ಯ ನೀಡಲು ಡಿಜಿಟಲ್ ರೂಪದಲ್ಲಿ ದಾಖಲಿಸುವಂತಹ ವ್ಯವಸ್ಥೆಯಾಗಿದೆ. ಇದರಲ್ಲಿ ಕೃಷಿ ಜಮೀನಿನ ಮಾಹಿಯನ್ನು ನೀಡಲಾಗುತ್ತದೆ. ಈ ಪೋರ್ಟಲ್ ಮೂಲಕ ನೋಂದಾಯಿಸಿಕೊಂಡಾಗ ರೈತರಿಗೆ ಎಫ್.ಐ.ಡಿ ನಂಬರ್ ಲಭ್ಯವಾಗುತ್ತದೆ. ಇಲ್ಲಿ ಒಮ್ಮೆ ಎಫ್.ಐ.ಡಿ ನಂಬರ್ ಪಡೆದರೆ, ಈ ರೈತರ ಸಂಪೂರ್ಣ ಜಮೀನಿನ ಮಾಹಿತಿ ಇಲ್ಲಿ ಸಿಗುತ್ತದೆ.
ಫ್ರೂಟ್ಸ್ ಐಡಿ ಹೇಗೆ ಮಾಡಿಸುವುದು: ಫ್ರೂಟ್ಸ್ ಐಡಿ ಮಾಡಿಸದಿರುವ ರೈತರು ಕೂಡಲೇ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಎಲ್ಲಾ ಜಮೀನುಗಳ ಪಹಣಿ, ಆಧಾರ್ ಮತ್ತು ಜಾತಿ ಪ್ರಮಾಣ ಪತ್ರ, ಫೋಟೋ ಹಾಗೂ ಬ್ಯಾಂಕ್ ಪಾಸ್‍ಪುಸ್ತಕ ಕೊಟ್ಟು ಫ್ರೂಟ್ಸ್ ಐಡಿ ಮಾಡಿಸಬೇಕು.
ಇದರಿಂದ ಎನ್‍ಡಿಆರ್‍ಎಫ್, ಎಸ್ ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ಹಣ ಪಡೆದುಕೊಳ್ಳಲು ಹಾಗೂ ಕೃಷಿ ಇಲಾಖೆಯ ಇತರೆ ಸವಲತ್ತು ಪಡೆಯಲು ಸಹಾಯಕವಾಗಲಿದೆ.
ಫ್ರೂಟ್ಸ್ ಐಡಿಯಿಂದ ಪ್ರಯೋಜನವೇನು: ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ವೈಯುಕ್ತಿಕ ಮತ್ತು “ಭೂ” ದಾಖಲಾತಿಗಳನ್ನು ನೀಡಿ, ಆಧಾರ್ ಆಧಾರಿತ ನೋಂದಣಿ ಮಾಡಿಕೊಂಡು ಫ್ರೂಟ್ಸ್‍ಐ.ಡಿ. ಪಡೆದು, ಎಲ್ಲಾ ಇಲಾಖೆಗಳಲ್ಲೂ ಕೂಡ ಫ್ರೂಟ್ಸ್ ಬಳಸಿ, ವಿವಿಧ ಸವಲತ್ತು ಪಡೆಯಬಹುದಾಗಿರುತ್ತದೆ.
ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯುವುದರೊಂದಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಆಹಾರ ಪದಾರ್ಥಗಳ ಖರೀದಿಯಲ್ಲಿ, ಅತಿವೃಷ್ಠಿ ಮತ್ತು ಅನಾವೃಷ್ಠಿ ಸಂದರ್ಭದಲ್ಲಿ ಪರಿಹಾರ ನೀಡಲು, ಬೆಳೆ ಸಮೀಕ್ಷೆಗಾಗಿ, ಬೆಳೆ ವಿಮೆ ಪರಿಹಾರ ನೀಡಲು ಈ ಮಾಹಿತಿಯನ್ನು ಬಳಸಬಹುದಾಗಿದೆ.
ಐಡಿ ಮಾಡಿಸಲು ಬೇಕಾದ ದಾಖಲಾತಿಗಳು: ಆಧಾರ್ ಕಾರ್ಡ, ಫೋಟೋ, ರೇಷನ್ ಕಾರ್ಡ್, ಜಮೀನಿನ ಎಲ್ಲಾ ಸರ್ವೆ ನಂಬರ್‍ನ ಪಹಣಿ/ಪಟ್ಟಾ ಪುಸ್ತಕ ನಕಲು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರ ಆರ್.ಡಿ.ಸಂಖ್ಯೆ ಇರುವ ಜಾತಿ ದೃಢೀಕರಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ, ರೈತರ ಮೊಬೈಲ್ ಸಂಖ್ಯೆ.
ಕಾರಣ ರೈತಬಾಂಧವರು ಫ್ರೂಟ್ಸ್ ಐಡಿ ಪಡೆದು ಸರ್ಕಾರದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಈ ಫ್ರೂಟ್ ಐ ಡಿ ಕ್ರೈಷಿ ಇಲಾಖೆ ವತಿಯಿಂದ ಪಡೆಯಲು ಸದೆತೆ..
source www.prajaprabhat.com
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…