ಬೀದರ.15.ಮಾರ್ಚ.25:-ಎಫ್‌ಎಕ್ಯೂ ಗುಣಮಟ್ಟದ ಕುಸುಬೆ ಉತ್ಪನ್ನವನ್ನು ಎಂಎಸ್‌ಪಿ ದರದಲ್ಲಿ ರೈತರಿಂದ ಖರೀದಿಸಲು ಬೀದರ ಜಿಲ್ಲೆಯಲ್ಲಿ ಒಟ್ಟು 09 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2024-25ನೇ ಸಾಲಿಗೆ ಭಾರತ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೀದರ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ ಎಫ್‌ಎಕ್ಯೂ ಗುಣಮಟ್ಟದ ಕುಸುಬೆ ಉತ್ಪನ್ನವನ್ನು ಪ್ರತಿ ಕ್ವಿಂಟಾಲಿಗೆ ರೂ. 5940-00 ದರದಲ್ಲಿ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ರೈತರಿಂದ ಖರೀದಿಸಲು ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳ ನಿಯಮಿತ (ಕೆಓಎಫ್) ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿ, ರಾಜ್ಯ ಸರ್ಕಾರ ಆದೇಶಿಸಿರುತ್ತದೆ.
ಈ ಆದೇಶದನ್ವಯ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ಹಾಗೂ ಅಧ್ಯಕ್ಷರು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಬೀದರ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 15-03-2025 ರಂದು ಜರುಗಿದ ಸಭೆಯ ನಡವಳಿಗಳ ಪ್ರಕಾರ ಈ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಕುಸುಬೆ ಖರೀದಿ ಕೇಂದ್ರಗಳ ವಿವರ:
ಔರಾದ (ಬಾ) ತಾಲ್ಲೂಕು: ಪಿ.ಎ.ಸಿ.ಎಸ್. ಔರಾದ
(ಬಾ),ಪಿ.ಎ.ಸಿ.ಎಸ್. ಕಮಲನಗರ,
ಬಸವಕಲ್ಯಾಣ ತಾಲ್ಲೂಕು:
ಪಿ.ಎ.ಸಿ.ಎಸ್. ನಾರಾಯಣಪೂರ್,
ಪಿ.ಎ.ಸಿ.ಎಸ್. ಮುಡಬಿ,
ಪಿ.ಎ.ಸಿ.ಎಸ್. ಗಡಿಗೌಡಗಾಂವ್,
ಭಾಲ್ಕಿ ತಾಲ್ಲೂಕು: ಪಿ.ಎ.ಸಿ.ಎಸ್.
ಭಾತಂಬ್ರಾ, ಪಿ.ಎ.ಸಿ.ಎಸ್. ಕೋಣ ಮೇಳಕುಂದಾ,
ಬೀದರ ತಾಲ್ಲೂಕು: ಪಿ.ಎ.ಸಿ.ಎಸ್. ಜನವಾಡಾ,
ಹುಮನಾಬಾದ ತಾಲ್ಲೂಕು: ಪಿ.ಎ.ಸಿ.ಎಸ್. ಚಿಟಗುಪ್ಪಾ,
ರಾಜ್ಯ ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿoದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಿದೆ.
ಖರೀದಿ ಪ್ರಕ್ರಿಯೆಯಲ್ಲಿ ರೈತರು ಪ್ರತಿ ಎಕರೆಗೆ ಗರಿಷ್ಠ 5 ಕ್ವಿಂಟಾಲ್‌ನoತೆ ಹಾಗೂ ಪ್ರತಿ ರೈತರಿಗೆ ಗರಿಷ್ಠ 20 ಕ್ವಿಂಟಾಲ್‌ನAತೆ ಎಫ್‌ಎಕ್ಯೂ \ಗುಣಮಟ್ಟದ ಕುಸುಬೆ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದೆ.
ಖರೀದಿ ಕೇಂದ್ರಗಳು ಲಾಗ್‌ಇನ್ ಕ್ರೆಡೆನ್ಸಿಯಲ್ಸ್ಗಳನ್ನು ಪಡೆದು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದ ಮೇಲೆ ನೋಂದಣಿ ಮಾಡಿಕೊಳ್ಳಲು ಇಚ್ಛಿಸುವ ರೈತರು ಸಮೀಪದ ಖರೀದಿ ಕೇಂದ್ರಗಳಿಗೆ ನೋಂದಣಿ ಮಾಡಿಸಿಕೊಂಡು ತಮ್ಮ ಕುಸುಬೆ ಉತ್ಪನ್ನವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿ ಸದರಿ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಯಳಂದೂರು.13.ಜೂನ್.25:- ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗ ಬುದ್ಧ ಪ್ರಿಯ ಅಶೋಕ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿವೃತ್ತಿ ಪದವಿ ಪೂರ್ವ ಶಿಕ್ಷಣ…
ಬೆಂಗಳೂರು.13.ಜೂನ್.25:- ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ -2 ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಈ ರೀತಿಯಾಗಿ ಫಲಿತಾಂಶ ಚೆಕ್…
ಬೆಂಗಳೂರು.13.ಜೂನ್.25:- ರಾಜ್ಯದ ಆರೋಗ್ಯ ಇಲಾಖೆಯಲ್ಲಿ NHM ಅಡಿಯಲ್ಲಿ ನೇಮಕಗೊಂಡ ಆಶಾ ಮೆಂಟರ್ಸ್ ಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 2007-08ನೇ…
ಬೆಂಗಳೂರು.13.ಜೂನ್.25:- ಬೀದರ್ ಬೆಂಗಳೂರು ಮತ್ತೊಂದು ವಿಶೇಷ ಟ್ರೈನ್ ಇದೇ 15 ಜೂನ್ ರಿಂದ ಪ್ರಾರಂಭ ಆಗ್ತಿದೆ. ಈ ಟ್ರೈನ್ ಕರ್ನಾಟಕದ…
ಬೆಂಗಳೂರು.13.ಜೂನ್ .25:- ರಾಜ್ಯ ಸರ್ಕಾರಿ ನೌಕರರಿಗೆ 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ…
ಬಳ್ಳಾರಿ.13.ಜೂನ್.25:- ರಾಜ್ಯದಲ್ಲಿ ಏಕಲವ್ಯ ಮಾದರಿ ಸ್ಕೂಲ್ ಗಳಲ್ಲಿ ಬೇಕಾಗಿರುವ ಶೀಕ್ಷಕರ ಹುದ್ದೆಗಳು ತಾಲ್ಲೂಕಿನ ಕೊಳಗಲ್ಲು ಗ್ರಾಮದ ಏಕಲವ್ಯ ಮಾದರಿ ವಸತಿ…