ಔರಾದ (ಬಾ). 25.ಜನವರಿ.25:- ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಹೆಡಗಾಪುರ ರೈತ ಸಿದ್ದಪ್ಪ ಯರನಾಳೆ ಅವರ 3.8 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಂಕಿಗಾಹುತಿಯಾಗಿದೆ. ಶುಕ್ರವಾರ ಮುಂಜಾನೆ ಆಕಸ್ಮಿಕವಾಗಿ ಕಬ್ಬಿನ ಗದ್ದೆಯಲ್ಲಿ ಬೆಂಕಿ ಕಾಣಿಸಿಕೊಂಡು ನೋಡು ನೋಡುತ್ತಿದ್ದಂತೆ ಎಲ್ಲೆಡೆ ಪಸರಿಸಿ, ಇಡೀ ಕಬ್ಬು ಸುಟ್ಟು ಹೋಗಿದೆ.
ಸ್ಥಳಕ್ಕೆ ಪೋಲಿಸ ಹಾಗೂ ಅಗ್ನಿಶಾಮಕ ತಂಡ ಭೇಟಿ ನೀಡಿ, ಪರಿಶೀಲಿಸಿತು.ಕಟಾವಿಗೆ ಬಂದರೂ ಕಾರ್ಖಾನೆಯವರು ಕಬ್ಬು ಸಾಗಿಸಲು ವಿಳಂಬ ಮಾಡಿದ್ದರಿಂದ ಹೊಲದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗಲಿ ಕಬ್ಬು ಸುಟ್ಟು ಹೋಗಿದೆ. ಸುಮಾರು ₹ 5 ಲಕ್ಷದಷ್ಟು ಹಾನಿಯಾಗಿದೆ ಎಂದು ಸಂತ್ರಸ್ತ ರೈತ ಪೊಲೀಸರಿಗೆ ದೂರು ನೀಡಿದ್ದಾರೆ.
ವಿವಿಧ ಸಮಷ್ಯಗಳಿಂದ ರೈತರಿಗೆ ತುಂಬಾ ಕಷ್ಟಾ ಆಗ್ತಿದೆ ಕಬ್ಬು ಹಾಳಾದ ಸಂತ್ರಸ್ತ ರೈತನಿಗೆ ಸೂಕ್ತ ಪರಿಹಾರ ನೀಡಬೇಕು.
ಕಬ್ಬು ಹಾಳಾದ ಸಂತ್ರಸ್ತ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹೆಡಗಾಪುರ ಪಿಕೆಪಿಎಸ್ ಅಧ್ಯಕ್ಷ ಶ್ರೀಮಂತ ಪಾಟೀಲ ಆಗ್ರಹಿಸಿದ್ದಾರೆ.
ಸರ್ಕಾರ ಉನ್ನತ ಮಟ್ಟದಲ್ಲಿ ಪರಿಶೀಲನೆ ಮಾಡಿ ರೈತ ವಿರೋಧಿ ಕುತಂತ್ರ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…
ಮಂಗಳೂರು.04.ಆಗಸ್ಟ್ .25:- ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜುಲೈ 25 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಅತಿಥಿ…
ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…
ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…
ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…