ಬೆಂಗಳೂರು.28.ಫೆ .25:- ರಾಜ್ಯದ್ 3 ಮೂರು ಜಿಲ್ಲೆಗಳಲ್ಲಿ ಹಾಕ್ಕಿ ಜ್ವರ ಪತ್ತೆ ಯಾವ ಜಿಲ್ಲೆಯ ನೋಡೋಣಾ ? ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾಗಿರುವ ವರದಿ, ಆರೋಗ್ಯ ಇಲಾಖೆ ರಾಜ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ರಾಯಚೂರಿನ ಜಿಲ್ಲೆಯ (ಮಾನ್ವಿ) ತಾಲ್ಲೂಕು, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಬಳ್ಳಾರಿಯ ಜಿಲ್ಲೆಯ (ಸಂಡೂರು) ತಾಲ್ಲೂಕಿನಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ “H5N1 ಏವಿಯನ್ ಇನ್ಫ್ಲುಯೆಂಜಾ” ಕಂಡುಬಂದಿದ್ದು, ಹಲವಾರು ಕೋಳಿಗಳು ಸಾವಿಗೀಡಾಗಿವೆ.
ಆದರೆ, ರಾಜ್ಯದಲ್ಲಿ ಈವರೆಗೆ ಮನುಷ್ಯರಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಅವರು ಹೇಳಿದರು.
ರಾಜ್ಯದ ಪಾಶು ಸಂಗೋಪನಾ ಏಲಾಖೆ ಅಧಿಕಾರಿಗಳು ಈಗ ಸತ್ತ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನ ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಹಕ್ಕಿ ಜ್ವರದಿಂದ ಪಕ್ಷಿಗಳು ಸಾವಿಗೀಡಾಗಿರುವುದಾಗಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಹಕ್ಕಿ ಜ್ವರ ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಪಶುಸಂಗೋಪನಾ ಇಲಾಖೆಯು ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದ ಸ್ಥಳದ ಸುತ್ತಲಿನ 3 ಕಿ.ಮೀ ಪ್ರದೇಶದಲ್ಲಿನ ಕೋಳಿಗಳನ್ನು ಸಾಮೂಹಿಕವಾಗಿ ಕೊಲ್ಲಲು ನಿರ್ಧರಿಸಲಾಗಿದೆ.
ನಾವು ಕಣ್ಗಾವಲು ಹೆಚ್ಚಿಸಿದ್ದೇವೆ ಮತ್ತು ಹಕ್ಕಿ ಜ್ವರ ಪ್ರಕರಣಗಳು ಪತ್ತೆಯಾದ ಹತ್ತಿರದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳ ಸೌಲಭ್ಯಗಳನ್ನು ಎಂದು ಅವರು ಮಾಹಿತಿನೀಡಿದರು.
ಹಕ್ಕಿ ಜ್ವರ ಅಥವಾ ಬರ್ಡ್ ಫ್ಲೂ (ಕುಶಲವೇ ಕ್ಷೇಮವೇ)
ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ. ರಾಜ್ಯದ ಆರೋಗ್ಯ ಮತ್ತು ಪಶುಸಂಗೋಪನೆ ಇಲಾಖೆಗಳು ಜಂಟಿಯಾಗಿ ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಭರವಸೆ ನೀಡಿದಾರೆ.
ರಾಯಚೂರು.03.ಆಗಸ್ಟ್.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಉಡಮಗಲ್ ಖಾನಾಪುರ…
ರಾಯಚೂರು.03.ಆಗಸ್ಟ್.25:- ಯೂರಿಯಾ ಗೊಬ್ಬರ ವಿತರಿಸಿದ ವಿವರ (ಮೆಟ್ರೀಕ್ ಟನ್ ಗಳಲ್ಲಿ) ಅನ್ನಪೂರ್ಣೇಶ್ವರಿ ಅಗ್ರೋ ಟ್ರೇಡಿಂಗ್ ಕ್ಯಾಂಪ್ ಬ್ಯಾಗ್ವಾಟ್ -9, ಬಂದೇನವಾಜ್…
ಕೊಪ್ಪಳ.03.ಆಗಸ್ಟ್.25: ಆಗಸ್ಟ್ 5 ರಿಂದ ಕೆ.ಎಸ್.ಆರ್.ಟಿ ನೌಕರರು ಮುಷ್ಕರವನ್ನು ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರಾಯಾಣಕ್ಕೆ ಯವುದೇ…
ರಾಯಚೂರು.03.ಆಗಸ್ಟ್.25: ಪ್ರಸ್ತುತ ಶೈಕ್ಷಣಿಕ ವರ್ಷ 2025-26 ನೇ ಸಾಲಿಗೆ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಷಯದ ತರಗತಿಗೆ ಪ್ರವೇಶ ಪ್ರಕ್ರಿಯೆ…
ರಾಯಚೂರು.03.ಆಗಸ್ಟ್.25: ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಧೀನದ ರಾಜೀವ್ ಗಾಂಧಿ ಸೂಪರ್‌ಸ್ಪೆಷಾಲಿಟಿ (ಓಪೆಕ್) ಆಸ್ಪತ್ರೆಯಲ್ಲಿ ಬೋಧಕೇತರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ…
ರಾಯಚೂರು.03.ಆಗಸ್ಟ.25: ಆಗಸ್ಟ್ 27ರಂದು ಆಚರಿಸುವ ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಪೂರ್ವಭಾವಿ ಸಭೆಯು ಆಗಸ್ಟ್ 7ರ…