ರಾಯಚೂರು ವಿವಿ : ರಸಾಯನಶಾಸ್ತ್ರ ವಿಭಾಗದಲ್ಲಿ ವಿಶೇಷ ಉಪನ್ಯಾಸ

ರಾಯಚೂರು.15.ಫೆ.25:- ರಾಯಚೂರು ವಿಶ್ವವಿದ್ಯಾಲಯ ಪಾಲಿಮರ್ ವಿಜ್ಞಾನದಲ್ಲಿ ವಿಶೇಷತೆಯೊಂದಿಗೆ ನೀವು ಆರ್ ಮತ್ತು ಡಿ ಫಾರ್ಮಾಸ್ಯುಟಿಕಲ್ಸ್, ಮೆಟೀರಿಯಲ್ ಸೈನ್ಸ್, ನ್ಯಾನೊಟೆಕ್ನಾಲಜಿ ಮತ್ತು ಗ್ರೀನ್ ರಸಾಯನಶಾಸ್ತ್ರದಲ್ಲಿ ವೈವಿದ್ಯಮಯ ವೃತ್ತಿ ಅವಕಾಶಗಳನ್ನು ಅನ್ವೇಷಿಸಬಹುದಾಗಿದೆ ಎಂದು ಬೆಂಗಳೂರಿನ ಎನ್‍ಎಮ್‍ಐಟಿ, ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಡಾ.ಸುನಿತಾ ಎಮ್.ಎಸ್ ಅವರು ವಿಶೇಷ ಉಪನ್ಯಾಸ ನೀಡಿದ್ದಾರೆ.

ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸಾಯನಶಾಸ್ತ್ರ ವಿಭಾಗದಲ್ಲಿ ಶುಕ್ರವಾರ ವಿಶೇಷ ಉಪನ್ಯಾಸ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಶ್ಲೇಷಿತ ಮತ್ತು ನೈಸರ್ಗಿಕ ಪಾಲಿಮರ್‍ಗಳು ದೈನಂದಿನ ಜೀವನದಲ್ಲಿಅಗತ್ಯ.

ಈ ಎರಡು ಪಾಲಿಮರ್‍ಗಳನ್ನು ಮಾನೋಮರ್‍ಗಳೆಂದು ಕರೆಯಲ್ಪಡುವ ಅನೇಕ ಸಣ್ಣ ಅಣುಗಳ ಪಾಲಿಮರಿಕರಣದ ಮೂಲಕ ರಚಿಸಲಾಗುತ್ತದೆ.

ಇಂದು ಆಕರ್ಷಕ ಮತ್ತು ಪ್ರಭಾವಶಾಲಿ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ವಸ್ತುಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಎಮ್.ಎಸ್ಸಿ. ರಸಾಯನಶಾಸ್ತ್ರದ ವಿದ್ಯಾರ್ಥಿಗಳು ಪಾಲಿಮರ್ ವಿಜ್ಞಾನಕ್ಕೆ ನಿಮ್ಮ ಪ್ರಯಾಣವು ಅದ್ಭುತ ಆವಿಷ್ಕಾರಗಳಿಗೆ ಮತ್ತು ಜಗತ್ತಿಗೆ ಪ್ರಭಾವಶಾಲಿ ಕೊಡುಗೆಗಳಿಗೆ ಕಾರಣವಾಗಬಹುದು.

ಈ ಕ್ಷೇತ್ರದಲ್ಲಿ ಅನ್ವೇಶಿಸಲು, ಆವಿಷ್ಕರಿಸಲು ಸುಸ್ಥಿರ ಮತ್ತು ತಾಂತ್ರಿಕವಾಗಿ ಮುಂದುವರಿದ ಭವಿಷ್ಯಕ್ಕಾಗಿ ಪ್ರೋತ್ಸಾಹದಿಂದ ಕೆಲಸಮಾಡಿರೆಂದು ನುಡಿಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾವಿವಿಯ ರಸಾಯನಶಾಸ್ತ್ರ ವಿಭಾಗದ ಮುಖಸ್ಥೆ ಹಾಗು ಸಹ ಪ್ರಾಧ್ಯಾಪಕರಾದ ಡಾ.ಲತಾ ಎಮ್.ಎಸ್ ಅವರು ಮಾತನಾಡಿ, ಪಾಲಿಮರ್ ವಿಜ್ಞಾನವು ನಿಮ್ಮ ಜ್ಞಾನ ಮತ್ತು ಸೃಜನಶೀಲತೆ ಭವಿಷ್ಯದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.

ಪಾಲಿಮರ್ ವಿಜ್ಞಾನ ಮತ್ತು ಭವಿಷ್ಯವನ್ನು ರೂಪಿಸುವುದರ ಜೊತೆಗೆ ಬೆಳವಣಿಗೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.

ಅತಿಥಿ ಉಪನ್ಯಾಸಕರಾದ ರಸಾಯನಶಾಸ್ತ್ರ ವಿಭಾಗದ ಡಾ.ಬಸವರಾಜ.ಡಿ, ಡಾ.ಯಮನಪ್ಪಗೌಡ, ಪಂಪಾಪತಿ, ಸೈಯದ ಫಜಲುನಿಸಾ ಬೇಗಂ, ಅನಿಲ್ ಚಂದ್ರ, ಐಕ್ಯೂಎಸಿ ಸಂಚಾಲಕ ಅನಿಲ್ ಅಪ್ರಾಳ್ ವೇದಿಕೆ ಮೇಲೆ ಉಪಸ್ಥಿತರಿದ್ದರು.

ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಮಧು ಮತ್ತು ಭಾಗ್ಯ ಪ್ರಾರ್ಥಿಸಿದರು, ಶಹಬಾಜ್ ಮತ್ತು ಸನಾ ನಿರೂಪಿಸಿದರು, ಡಿ.ಸುದೀಪ್ ಸ್ವಾಗತಿಸಿದರು, ಹರ್ಷಿಯಾ ಬೇಗಂ ಅತಿಥಿಯನ್ನು ಪರಿಚಯಿಸಿದರು, ಶೃತಿ ವಂದಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

prajaprabhat

Recent Posts

ರಾಜ್ಯದಲ್ಲಿ ಖಾಲಿ ಪ್ರಾಧ್ಯಾಪಕರ ಹುದ್ದೆಗಳು  ಶೀಘ್ರ ಭರ್ತಿ ಮಾಡಲಾಗುವುದು.

ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್‌ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…

28 minutes ago

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

3 hours ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

4 hours ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

4 hours ago

ಸ್ಟಡಿ ಅಬ್ರಾಡ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…

10 hours ago

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

10 hours ago