ರಾಜ್ಯ ಸರ್ಕಾರ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ಸರ್ಕಾರದಿಂದ ಆದೇಶ.!

ದಿನಾಂಕ:12/06/2025 ರಂದು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ”ದ ಆಯೋಜನೆಯ ಕುರಿತು ನಿರ್ದೇಶನ ಹಾಗೂ ಅನುದಾನ ಬಿಡುಗಡೆ ಮಾಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಘೋಷಿಸಿರುವಂತೆ, ವಿಶ್ವ ಸಂಸ್ಥೆಯ ಎಲ್ಲಾ ಮಿತ್ರ ರಾಷ್ಟ್ರಗಳು ಪ್ರತಿ ವರ್ಷ ಜೂನ್-12 ರಂದು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ ಆಯೋಜಿಸಲಾಗುತ್ತಿದೆ.

ಕರ್ನಾಟಕ ಸರ್ಕಾರ ಪ್ರತಿ ವರ್ಷ ಜೂನ್-12 ರಂದು ಜಿಲ್ಲೆಯಾದ್ಯಂತ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ”ವನ್ನು ಆಯೋಜಿಸಲಾಗುತ್ತಿತ್ತು. ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಉಲ್ಲೇಖ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ದಿನಾಂಕ:12.06.2025 ರಂದು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಆಯೋಜಿಸುವ ಕುರಿತು ಅನುದಾನವನ್ನು ಬಿಡುಗಡೆ ಮಾಡಿ ನಿರ್ದೇಶನವನ್ನು ನೀಡಲಾಗಿರುತ್ತದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಉಲ್ಲೇಖ ಪತ್ರದಲ್ಲಿನ ನಿರ್ದೇಶನಗಳನ್ನು ಪಾಲಿಸಿ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಯಶಸ್ವಿಯಾಗಿ ಆಯೋಜಿಸಲು ಕ್ರಮಗಳನ್ನು ಕೈಗೊಳ್ಳಲು ಈ ಮೂಲಕ ಸೂಚಿಸಿದೆ(ಉಲ್ಲೇಖ ಪತ್ರವನ್ನು ಈ ಪತ್ರದೊಂದಿಗೆ ಲಗತ್ತಿಸಿದೆ) ಹಾಗೂ ದಿನಾಂಕ:12.06.2025 ರಂದು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ವನ್ನು ಯಶಸ್ವಿಯಾಗಿ ಆಯೋಜಿಸಿರುವ ಕುರಿತು ಸಂಪೂರ್ಣ ವರದಿಯನ್ನು ಛಾಯಾಚಿತ್ರಗಳೊಂದಿಗೆ ಈ ಕಛೇರಿಗೆ ಸಲ್ಲಿಸಲು ಈ ಮೂಲಕ ಸೂಚಿಸಿದೆ.

ವಿಶ್ವ ಬಾಲಕಾರ್ಮಿಕ ವಿರೋಧಿ ದಿನ-2025

ಪ್ರಮಾಣ ವಚನ

ನಾನು ಸತ್ಯವಾಗಿ, ಪ್ರಾಮಾಣಿಕವಾಗಿ ಹಾಗೂ ಆತ್ಮಸಾಕ್ಷಿಯಾಗಿ ಪ್ರಮಾಣ ಮಾಡುವುದೇನೆಂದರೆ, ನಾನು ವಾಸಿಸುವ ಸುತ್ತ ಮುತ್ತಲಿನ ಪ್ರದೇಶ ಹಾಗೂ ನಾನು ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಬಾಲಕಾರ್ಮಿಕರು ಕಂಡುಬಂದಲ್ಲಿ ನೇಮಿಸಿಕೊಂಡ ಮಾಲೀಕರು ಹಾಗೂ ಪೋಷಕರಿಗೆ ತಿಳುವಳಿಕೆ ಹೇಳಿ ಮಗುವನ್ನು ಶಾಲೆಗೆ ಸೇರಿಸುತ್ತೇನೆ. ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ತೊಡಗಿಸಿಕೊಂಡು ತಯಾರಿಸಲ್ಪಟ್ಟ ಯಾವುದೇ ವಸ್ತುವನ್ನು ಉಪಯೋಗಿಸುವುದಿಲ್ಲ ಮತ್ತು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸೇವೆಯನ್ನು ಪಡೆಯುವುದಿಲ್ಲವೆಂದು “ವಿಶ್ವ ಬಾಲಕಾರ್ಮಿಕ ವಿರೋಧಿ ದಿನ’ವಾದ ಇಂದು ಪ್ರಮಾಣ ಮಾಡುತ್ತೇನೆ.

prajaprabhat

Recent Posts

ಎನ್‌ಡಿಎಯ 11 ವರ್ಷಗಳ ಪ್ರಯಾಣದ ಪ್ರಮುಖ ಆಧಾರಸ್ತಂಭ ಮಹಿಳಾ ನೇತೃತ್ವದ ಅಭಿವೃದ್ಧಿ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಹೊಸ ದೆಹಲಿ.08.ಜೂನ್.25:-ಅಭಿವೃದ್ಧಿ ಹೊಂದಿದ ಭಾರತದತ್ತ ಮಹಿಳೆಯರು ವಹಿಸಿರುವ ಪರಿವರ್ತನಾತ್ಮಕ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಎತ್ತಿ ತೋರಿಸಿದರು, ಕಳೆದ…

2 minutes ago

ರಾಜ್ಯ ‘ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ ಯೋಜನೆ’ ಲಾಭ ಪಡೆಯಲು ಈ ದಾಖಲೆಗಳು ಕಡ್ಡಾಯ |

ಬೆಂಗಳೂರು.08.ಜೂನ್.25:- ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಕುಟುಂಬದವರಿಗೂ ಉಚಿತ ಆರೋಗ್ಯ ವಿಮಾ'ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದೆ.ಎಂಬುದಾಗಿ ಕರೆಯುವಂತ ಯೋಜನೆಯಡಿ…

1 hour ago

ಕರ್ಣಾಟಕ ರಾಜ್ಯದ ಈ 7 ಜಿಲ್ಲೆಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣ ಭಾರಿ ಏರಿಕೆ! ಕೇಂದ್ರದಿಂದ ಆತಂಕಕಾರಿ ವರದಿ!

ಹೊಸ ದೆಹಲಿ.08.ಜೂನ್.25:-ದೇಶದಲ್ಲಿ 49 ಜಿಲ್ಲೆಗಳಲ್ಲಿ ಜನಿಸಿದ ಮಕ್ಕಳ ಸಂಖ್ಯೆಗಿಂತ ಸಾವಿನ ಸಂಖ್ಯೆ ಹೆಚ್ಚಾಗಿದೆ. 2021 ರ ಭಾರತದ ನಾಗರಿಕ ನೋಂದಣಿ…

6 hours ago

ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ ಜೂನ್ 10ರಂದು ನಡೆಯಲಿದೆ.

ಬಾಗಲಕೋಟೆ.07.ಜೂನ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಾಗಲಕೋಟ  ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಇದೇ ತಿಂಗಳು ಜೂನ್ 10 ರಂದು ಬೆಳಿಗ್ಗೆ…

14 hours ago

ಫ್ರೆಂಚ್ ಓಪನ್ ಟೆನಿಸ್: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಪಂದ್ಯದಲ್ಲಿ ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ವಿಶ್ವದ ನಂ. 2 ಆಟಗಾರ್ತಿ ಕೊಕೊ ಗೌಫ್ ಅವರನ್ನು ಎದುರಿಸಲಿದ್ದಾರೆ.

ಫ್ರೆಂಚ್ ಓಪನ್ ಟೆನಿಸ್‌ನಲ್ಲಿ, ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಇಂದು ಸಂಜೆ ನಡೆಯಲಿರುವ ಬಹುನಿರೀಕ್ಷಿತ ಮಹಿಳಾ ಸಿಂಗಲ್ಸ್…

15 hours ago

ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಬ್ರಿಕ್ಸ್ ರಾಷ್ಟ್ರಗಳು, ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ನೀತಿಯನ್ನು ಬೆಂಬಲಿಸಿವೆ.

"ಭಾರತವು ಯಾವಾಗಲೂ ಕಾನೂನಿನ ನಿಯಮ, ಜಾಗತಿಕ ಸಹಕಾರ ಮತ್ತು ವಿಶ್ವ ವೇದಿಕೆಯಲ್ಲಿ ಸಂವಾದದ ಅಗತ್ಯವನ್ನು ಬೆಂಬಲಿಸಿದೆ" ಎಂದು ಲೋಕಸಭಾ ಸ್ಪೀಕರ್…

15 hours ago