ರಾಜ್ಯ ಸರ್ಕಾರ. ಎಸ್‌ಸಿ-ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆಯಲು ಹೊಸ ನಿಯಮ.

ಬೆಂಗಳೂರು: ಇಂದು ರಾಜ್ಯಸರಕಾರ ಹೊಸ ಪದ್ದ ಚಲಿತರಬೇಕು ಅಂತಾ ಚಿಂತನೆಮಾಡುತ್ತಿದೆ ರಾಜ್ಯದಲ್ಲಿ ‘ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದವರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಒದಗಿಸುವ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸಲಾಗುವುದು.

ಈ ಸಂಬಂಧ ಸುತ್ತೋಲೆ ಹೊರಡಿಸುತ್ತೇವೆ’ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಭರವಸೆ ನೀಡಿದರು.

ಎಸ್‌.ಸಿ.ಎಸ್‌.ಎ/ಟಿ.ಎಸ್‌.ಎ ಜಾಗೃತಿ ವೇದಿಕೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ, ಎಸ್‌ಸಿ-ಎಸ್‌ಟಿ ಸಮುದಾಯದ ಪ್ರಮುಖರ ಅಹವಾಲು ಆಲಿಸಿದರು.

ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಇರುವ ತೊಡಕಿನ ನಿವಾರಣೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ‘ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ತಹಶೀಲ್ದಾರ್‌ಗಳಿಗೆ ಸರ್ಕಾರದ ಆದೇಶಗಳು ಹಾಗೂ ನ್ಯಾಯಾಲಯಗಳ ಮಾರ್ಗಸೂಚಿಗಳ ಬಗ್ಗೆ ತರಬೇತಿ ನೀಡಬೇಕಿದೆ.

ಈ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಸಭೆ ನಡೆಸಿ,

ಸರಳವಾಗಿ ಜಾತಿ ‍ಪ್ರಮಾಣ ಪತ್ರ ಒದಗಿಸಲು ಸುತ್ತೋಲೆ ಹೊರಡಿಸಲಾಗುವುದು’ ಎಂದರು.

ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ‘ಶಾಲಾ ವರ್ಗಾವಣೆ ಪ್ರಮಾಣಪತ್ರ ಇಲ್ಲದ ಅಥವಾ ಶಿಕ್ಷಣ ಪಡೆಯದ ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಸ್ಥಳ ಮಹಜರು ಮಾಡಬೇಕು. ಜಾತಿಯ ಬಗ್ಗೆ ಮಾಹಿತಿ ಪಡೆಯುವ ಮೂಲಕ ಪ್ರಮಾಣ ಪತ್ರವನ್ನು ನೀಡಬೇಕು.

ಜಿ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಅನ್ಯ ರಾಜ್ಯದವರಾಗಿದ್ದರೇ ಅಲ್ಲಿನ ಜಾತಿ ಹಿನ್ನೆಲೆಯನ್ನು ಪರಿಶೀಲಿಸಿ, ಪ್ರಮಾಣ ಪತ್ರ ನೀಡಲಾಗುವುದು’ ಎಂದರು.

ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ, ‘ರಾಜ್ಯದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಕ್ಲಿಷ್ಟಕರವಾಗಿದೆ. ಜಾತಿಯ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ. ಒಂಟಿ ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಕಂದಾಯ ಅಧಿಕಾರಿಗಳು ಸ್ಥಳ ಮಹಜರು ಮಾಡಿ, ಪರಿಹಾರ ಒದಗಿಸಬೇಕು.

ಎಸ್‌ಸಿ-ಎಸ್‌ಟಿ ಜನರ ಸರ್ವತೋಮುಖ ಅಭಿವೃದ್ಧಿಗೆ ಜಾತಿ ಪ್ರಮಾಣ ಪತ್ರ ಅಗತ್ಯ’ ಎಂದು ಹೇಳಿದರು.

ರಾಜ್ಯದಲಿ  ಎಸ್‌ಸಿ-ಎಸ್‌ಟಿ ಪ್ರಮಾಣ ಪತ್ರ ಸಿಗ್ಬೇಕು ಅಂದ್ರೆ ಒಂದೂ ತಿಂಗಳು ಕಾಯಬೇಕು.

prajaprabhat

Recent Posts

ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಈ ಪ್ರಕಾರ ನಡೆಯಲಿದೆ.

ಬೆಂಗಳೂರು.03.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ  ಕಾಲೇಜು ಶಿಕ್ಷಣ ಇಲಾಖೆಯು…

2 hours ago

ಆ.10ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಿರಿ.

ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್‌ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…

3 hours ago

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ- ಡಾ. ಸುರೇಶ ಇಟ್ನಾಳ

ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…

4 hours ago

Free Couching ಅಲ್ಪಸಂಖ್ಯಾತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…

4 hours ago

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ: ಆಸಕ್ತರು ಭಾಗವಹಿಸಿ

ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…

4 hours ago

ನ್ಯಾಯಾಲಯಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಸೇವೆ ಪೂರೈಕೆಗೆ ಅರ್ಜಿ ಆಹ್ವಾನ<br>

ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…

4 hours ago