ರಾಜ್ಯ ಸರ್ಕಾರಿ ನೌಕರರ HRMS ಭೌತಿಕ ಬಿಲ್ಲುಗಳ ಬದಲಿಗೆ ಆನ್ ಲೈನಲ್ಲಿ ಮಾತ್ರ ಅಂಗೀಕರಿಸುವ ಆದೇಶ.!

ಬೆಂಗಳೂರು.01.ಜೂನ್.25:- ರಾಜ್ಯ ಸರ್ಕಾರಿ ನೌಕರರ ಹೆಚ್.ಆರ್.ಎಂ.ಎಸ್ ಮತ್ತು ಖಜಾನೆ-2 ರಲ್ಲಿ ಸೃಜಿಸಲಾದ ರಾಜ್ಯ ವಲಯದ ವೇತನ ಬಿಲ್ಲುಗಳನ್ನು ಭೌತಿಕ ಬಿಲ್ಲುಗಳ ಬದಲಿಗೆ ಆನ್ ಲೈನಲ್ಲಿ ಮಾತ್ರ ಅಂಗೀಕರಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲೆ ಓದಲಾದ (1) ರ ಆದೇಶದಲ್ಲಿ ವೋಚರುಗಳ ಡಿಜಟಲೀಕರಣದ ಅಂಗವಚಾಗಿ ಹೆಚ್‌ಆರ್‌ಎಂಎಸ್ ಹಾಗೂ ಖಜಾನೆ-2 ರಲ್ಲಿ ವೇತನ ಬಿಲ್ಲು ಮತ್ತು ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ ಗಳ ಬದಲು ಆನ್ ಲೈನ್ ನಲ್ಲಿ ಅಂಗೀಕರಿಸಲು ದಿನಾಂಕ: 1.4.2022 ರಿಂದ ಜಾರಿಗೆ ಬರುವಂತೆ ಹೆಚ್ ಆರ್ ಎಂ ಎಸ್ ಹಾಗೂ ಖಜಾನೆ 2 ರಲ್ಲಿ ಸೃಜಿಸುವ ವೇತನಗಳಿಗೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓರವರು ಡಿ.ಎಸ್.ಸಿ ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸಲು ಹಾಗೂ ಯಾವುದೇ ಕಡಿತ ಮತ್ತು ವಸೂಲಾತಿಗಳ ಷೆಡ್ಯೂಲ್ / ಚಲನ್ ಗಳನ್ನು ಭೌತಿಕವಾಗಿ ಮುದ್ರಿಸಿ ಸಲ್ಲಿಸದಿರಲು ಆದೇಶಿಸಲಾಗಿದೆ.

ಮೇಲೆ (3) ರಲ್ಲಿ ಓದಲಾದ ಆದೇಶದಲ್ಲಿ ಜಿಲ್ಲಾ ವಲಯದ ವೇತನ ಬಿಲ್ಲುಗಳನ್ನೂ ಸಹ ಭೌತಿಕವಾಗಿ ಸಲ್ಲಿಸದೆ ಡಿಜಿಟಲ್ ರೂಪದಲ್ಲಿ ಸಲ್ಲಿಸಲು ಆದೇಶಿಸಲಾಗಿದೆ.

ಮೇಲೆ (2) ರಲ್ಲಿ ಓದಲಾದ ಖಜಾನೆ ಆಯುಕ್ತರ ಪತ್ರದಲ್ಲಿ, ಮಹಾಲೇಖಪಾಲರಿಗೆ ವೋಚರುಗಳಿಗಾಗಿಯೇ ಮೀಸಲಾದ ಸರ್ವರ್(Dedicated Server) ಅನ್ನು ಒದಗಿಸಲಾಗಿದ್ದು, ವೇತನಕ್ಕೆ ಸಂಬಂಧಿಸಿದ ವೋಚರ್ ಗಳು ಸಂಪೂರ್ಣವಾಗಿ ಡಿಜಿಟೈಸ್ಟ್ ರೂಪದಲ್ಲಿ ಲಭ್ಯವಾಗುವುದಾಗಿ ಹಾಗೂ ಡಿಜಿಟೈಸ್ ವೇತನದ ಬಿಲ್ಲುಗಳು ಐಟಿ ಆಕ್ಸ್ 2000 ಮತ್ತು Evidence Act 1872 ರಲ್ಲಿ ಸೂಚಿಸಿರುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದರಿಂದ ಮಹಾಲೇಖಪಾಲರಿಗೆ ಈ ಸಂಬಂಧ Standard Operating Procedure ಅನ್ನು ಕಳುಹಿಸಿ ವೇತನ ಮತ್ತು ವೇತನ ಭತ್ಯೆಗಳಿಗೆ ಸಂಬಂಧಿಸಿದ ಬಿಲ್ಲುಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲು ಕೋರಲಾಗಿರುವುದಾಗಿ ತಿಳಿಸುತ್ತಾ ಈ ಕುರಿತು ಎಲ್ಲಾ ಇಲಾಖೆಗಳಿಗೆ ಸೂಚನೆಗಳನ್ನು ನೀಡಲು ಕೋರಿರುತ್ತಾರೆ.

ಮೇಲೆ (4) ರಲ್ಲಿ ಓದಲಾದ ಪತ್ರದಲ್ಲಿ ಮಹಾಲೇಖಪಾಲರು ರಾಜ್ಯ ವಲಯಕ್ಕೆ ಸಂಬಂಧಿಸಿದ ವೇತನ ಬಿಲ್ಲುಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲು Standard Operating Procedure ನಲ್ಲಿ ತಿಳಿಸಿರುವಂತೆ ನಡೆದುಕೊಳ್ಳುವ ಷರತ್ತಿಗೊಳಪಟ್ಟು ಸಹಮತಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ, ಅದರಂತೆ ಆದೇಶಿಸಿದೆ.

prajaprabhat

Recent Posts

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

3 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

9 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

9 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

9 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

9 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

9 hours ago