ಬೆಂಗಳೂರು.09.ಮೇ.25:-ರಾಜ್ಯ ಸರಕಾರ ಸರ್ಕಾರಿ ನೌಕರರಿಗೆ ವರ್ಗಾವಣೆ ನಿರೀಕ್ಷೆಯಲ್ಲಿರುವವರಿಗೆ ಮೇ 15ರಿಂದ ಜೂ. 14ರವರೆಗೆ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ ಸಚಿವ ಸಂಪುಟ ಅನುಮೋದನೆಗೆ ಪ್ರಸ್ತಾವನೆ ಮಂಡಿಸಲಾಗಿದೆ.
ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿಗಳು, ನೌಕರರನ್ನು ಕಾರ್ಯನಿರತ ವೃಂದ ಬಲದ ಶೇಕಡ 6ರಷ್ಟು ಮೀರದಂತೆ ವರ್ಗಾವಣೆ ಮಾಡಬಹುದಾಗಿದೆ. ಎ ಮತ್ತು ಬಿ ವೃಂದದ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಸಚಿವರಿಗೆ, ಸಿ, ಡಿ ವೃಂದದ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ನೀಡಲು ಪ್ರಸ್ತಾಪಿಸಲಾಗಿದೆ.
ಒಂದು ಸ್ಥಳದಲ್ಲಿ ಎರಡು ವರ್ಷ ಕರ್ತವ್ಯ ಅವಧಿ ಪೂರ್ಣಗೊಳಿಸಿದ ಗ್ರೂಪಿ ಎ ಮತ್ತು ಬಿ ವೃಂದದ ಅಧಿಕಾರಿಗಳು, 4 ವರ್ಷ ಪೂರ್ಣಗೊಳಿಸಿದ ಸಿ ವೃಂದದ ನೌಕರರು, 7 ವರ್ಷ ಪೂರ್ಣಗೊಳಿಸಿದ ಡಿ ದರ್ಜೆ ನೌಕರರು ವರ್ಗಾವಣೆಗೆ ಅರ್ಹರಾಗಿರುತ್ತಾರೆ. ಎ ಮತ್ತು ಬಿ ವೃಂದದ ಅಧಿಕಾರಿಗಳ ವರ್ಗಾವಣೆ ಪ್ರಸ್ತಾವವನ್ನು ಆಡಳಿತ ಇಲಾಖೆಯ ಮೂಲಕವೇ ಸಚಿವರಿಗೆ ಸಲ್ಲಿಸಬೇಕು ಎಂದು ಹೇಳಲಾಗಿದೆ.
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…