ಬೆಂಗಳೂರು.03.ಜುಲೈ.25:ಗೆ ಹಿಂದಿನ ಡಿಫೈನ್ ಪಿಂಚಿಣಿ ಯೋಜನೆಗೆ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 247-A ರನ್ವಯ ಪಿಂಚಿಣಿ ಸೌಲಭ್ಯಕ್ಕಾಗಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ದಿನಾಂಕ:01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರುವ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಪದ್ದತಿಯನ್ನು ಕಡ್ಡಾಯಗೊಳಿಸಿ ಜಾರಿಗೆ ತರಲಾಗಿರುತ್ತದೆ.
ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ಸದರಿ ಯೋಜನೆಯನ್ನು ಕಾರ್ಯರೂಪಗೊಳಿಸಿದೆ. ದಿನಾಂಕ:31.03.2006 ರ ಆದೇಶಾನುಸಾರ ನೌಕರನು ಸೇವೆಗೆ ವಾಸ್ತವವಾಗಿ ವರದಿ ಮಾಡಿಕೊಂಡ ದಿನಾಂಕದ ಆಧಾರದ ಮೇರೆಗೆ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನೆಗೆ ಒಳಪಡುವುದಾಗಿದೆ.
ಕ್ರಮ ಸಂಖ್ಯೆ (3) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ರಾಜ್ಯ ಸಿವಿಲ್ ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ 1.4.2006 ರ ಪೂರ್ವದ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಗಳ ಸಂಬಂಧದಲ್ಲಿ ದಿನಾಂಕ 1.4.2006 ಮತ್ತು ತದನಂತರದಲ್ಲಿ ಆಯ್ಕೆ ಮತ್ತು ನೇಮಕ ಹೊಂದಿ ಸೇವೆಗೆ ಸೇರಿರುವ ಅಭ್ಯರ್ಥಿಗಳ ಪ್ರಕರಣಗಳಿದ್ದು, ಆದರೆ ಅದೇ ತಂಡದಲ್ಲಿನ ಇತರೆ ಅಭ್ಯರ್ಥಿಗಳು ದಿನಾಂಕ 1.4.2006 ರ ಪೂರ್ವದಲ್ಲಿಯೇ ಆಯ್ಕೆ ಮತ್ತು ನೇಮಕಾತಿಗಳು ಪೂರ್ಣಗೊಂಡು ಸೇವೆಗೆ ನೇಮಕ ಹೊಂದಿ ವರದಿ ಮಾಡಿಕೊಂಡಿರುವ ಮತ್ತು ಇದರಿಂದಾಗಿ ಡಿಫೈನ್ ಪಿಂಚಣಿ ಯೋಜನೆಗೆ ಒಳಪಟ್ಟಿರುವ ಸಂದರ್ಭಗಳಿರುವ ನಿರ್ದಿಷ್ಟ ವಿಶಿಷ್ಟ ಪ್ರಕರಣಗಳನ್ನು ಮಾತ್ರ ಸರ್ಕಾರದ ಆದೇಶ ಸಂಖ್ಯೆ: ಆಇ (ವಿಶೇಷ) 04 ಪಿಇಟಿ 2005, ದಿನಾಂಕ 31.3.2006 ರ ಆದೇಶದನ್ವಯ ದಿನಾಂಕ 1.4.2006 ರಿಂದ ಜಾರಿಗೊಳಿಸಲಾದ ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಯೋಜನಾ ವ್ಯಾಪ್ತಿಯಿಂದ ಸಡಿಲಿಕೆಯನ್ನು ನೀಡಿ ಕೆಲವೊಂದು ಷರತ್ತುಗಳಿಗೊಳಪಡಿಸಿ ಹಿಂದಿನ ಡಿಫೈನ್ ಪಿಂಚಣಿ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಆದೇಶಿಸಿದೆ.
ಕ್ರಮ ಸಂಖ್ಯೆ (4) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ, ದಿನಾಂಕ 1.4.2006 ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ನೇಮಕಾತಿ ಅಧಿಸೂಚನೆಗಳ ಮೇರೆಗೆ ಆಯ್ಕೆ ಹೊಂದಿ ದಿನಾಂಕ 1.4.2006 ರಂದು ಅಥವಾ ಆ ದಿನಾಂಕದ ನಂತರ ಸೇವೆಗೆ ಸೇರಿರುವ ಕಾರಣದಿಂದ ನೂತನ ಅಂಶದಾಯಿ ಕೊಡುಗೆ ಯೋಜನೆಯ (ರಾಷ್ಟ್ರೀಯ ಪಿಂಚಣಿ ಯೋಜನೆ) ವ್ಯಾಪ್ತಿಗೊಳಪಟ್ಟಿರುವ ಸರ್ಕಾರಿ ನೌಕರರನ್ನು ಸರ್ಕಾರವು ಅವರ ಅಭಿಮತದ ಮೇರೆಗೆ ಕೆಳಕಂಡ ಷರತ್ತುಗಳಿಗೊಳಪಟ್ಟು ಒಂದು ಬಾರಿಯ ಕ್ರಮವಾಗಿ ಹಿಂದಿನ ಡಿಫೈನ್ ಪಿಂಚಣಿ ಯೋಜನೆ ವ್ಯಾಪ್ತಿಗೊಳಪಡಿಸಲು ಒಪ್ಪಿಗೆ ನೀಡಿದೆ.
ಪ್ರಸ್ತುತ ಸರ್ಕಾರ ಮೇಲೆ ನಮೂದಿಸಿದ ದಿನಾಂಕ 17.2.2021 ಹಾಗೂ ದಿನಾಂಕ 24.1.2024 ರ ಸರ್ಕಾರಿ ಆದೇಶಗಳ ಮೂಲಕ OPS ಯೋಜನೆಯ ವ್ಯಾಪ್ತಿಗೊಳಪಟ್ಟ ನೌಕರರಿಗೆ OPS ಯೋಜನೆಯ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶ ಸಂಖ್ಯೆ:ಆಇ 39 ಪಿಇಎನ್ 2020(ಭಾಗ), ದಿನಾಂಕ:17.2.2021 ಹಾಗೂ ಸರ್ಕಾರಿ ಆದೇಶ ಸಂಖ್ಯೆ:ಆಇ-ಪಿಇಎನ್/99/2023, ದಿನಾಂಕ:24.1.2024 ರ ಉಪಬಂಧಗಳನ್ವಯ ಹಿಂದಿನ ಡಿಫೈನ್ ಪಿಂಚಿಣಿ ಯೋಜನೆಗೆ ಯೋಜನೆಯನ್ನು ವಿಸ್ತರಿಸಲ್ಪಟ್ಟ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 2-C ಅನ್ವಯವಾಗತಕ್ಕದ್ದಲ್ಲವೆಂದು ಮತ್ತು ಈ ನೌಕರರಿಗೆ ಅದೇ ನಿಯಮಾವಳಿಯ ನಾಲ್ಕನೇ ಭಾಗ (Part IV) ರಲ್ಲಿನ ಎಲ್ಲ ಉಪಬಂಧಗಳು ಅನ್ವಯವಾಗತಕ್ಕದ್ದೆಂದು ಆದೇಶಿಸಿದೆ.
ಬೆಂಗಳೂರು.04.ಜುಲೈ.25:-<ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದ ಹೊರತು ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಹೊರಡಿಸಲಾಗಿರುವ ಉದ್ದೇಶಿತ ಕರಡು ಅಧಿಸೂಚನೆ ಅನ್ವಯ ಭವಿಷ್ಯದಲ್ಲಿ…
ದೇಶದಲ್ಲಿ ಹಲವಾರು ಪಾಕಿಸ್ತಾನಿ ನಟರು ಮತ್ತು ಕ್ರಿಕೆಟಿಗರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರ್ಕಾರ ಮತ್ತೆ ನಿಷೇಧಿಸಿದೆ. ತಾಂತ್ರಿಕ ಕಾರಣಗಳಿಂದಾಗಿ ಈ…
ಮೊದಲ ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವವು ಆಗಸ್ಟ್ 21 ರಿಂದ ಶ್ರೀನಗರದ ಐತಿಹಾಸಿಕ ದಾಲ್ ಸರೋವರದಲ್ಲಿ ನಡೆಯಲಿದೆ. ಇದನ್ನು…
ಬೆಂಗಳೂರು.04.ಜುಲೈ.25:- ವಿಶ್ವ ವಿದ್ಯಾಲಯದಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಪದವಿ, ಸ್ನಾತಕೋತ್ತರ…
Gratuity turm and conditions with Formate ಬೆಂಗಳೂರು.02.ಜುಲೈ.25:-ಕರ್ನಾಟಕ ಸರ್ಕಾರವು ಪದವಿ ಕಾಲೇಜುಗಳಲ್ಲಿನ ಅತಿಥಿ ಅಧ್ಯಾಪಕರಿಗೆ 60 ವರ್ಷ ತುಂಬಿದ…
ಬೆಂಗಳೂರು.03.ಜುಲೈ.25:- ರಾಜ್ಯ ಸರ್ಕಾರ ವತಿಯಿಂದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ…