ರಾಜ್ಯ ಸರ್ಕಾರವು 2025-26 ನೇ ಸಾಲಿನ ಪೂರ್ಣ ವರ್ಷಕ್ಕಾಗಿ ವೆಚ್ಚ ಮಾಡಲು ಅನುಮತಿ ನೀಡಿ ಆದೇಶ ಪ್ರಕಟಿಸಿದೆ.

ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ವತಿಯಿಂದ 01ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026ರ ವರೆಗಿನ ಅವಧಿಯ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ರಾಜ್ಯ ವಿಧಾನ ಮಂಡಲವು ಅನುಮೋದಿಸಿದೆ ಮತ್ತು ದಿನಾಂಕ 26ನೇ ಮಾರ್ಚ್ 2025 ರಂದು ಕರ್ನಾಟಕ ರಾಜ್ಯಪಾಲರ ಒಪ್ಪಿಗೆಯನ್ನು ಪಡೆದ ಈ ಧನವಿನಿಯೋಗ ವಿಧೇಯಕವನ್ನು ದಿನಾಂಕ 26ನೇ ಮಾರ್ಚ್, 2025 ರ ವಿಶೇಷ ಕರ್ನಾಟಕ ರಾಜ್ಯಪತ್ರದಲ್ಲಿ 2025 ರ ಕರ್ನಾಟಕ ಅಧಿನಿಯಮ ಸಂಖ್ಯೆ 21 ಎಂದು ಪ್ರಕಟಿಸಲಾಗಿದೆ.

ಈ ಅಧಿಕೃತ ಜ್ಞಾಪನಕ್ಕೆ ಲಗತ್ತಿಸಿದ ಅನುಸೂಚಿಯಲ್ಲಿ ಸೂಚಿಸಿರುವಷ್ಟು ಅನುದಾನ ವಿನಿಯೋಗಗಳನ್ನು ಈ ಅಧಿನಿಯಮವು ಅಧಿಕೃತಗೊಳಿಸುತ್ತದೆ.

2. ಆದ್ದರಿಂದ, ಕಾಲಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಅನುಸೂಚಿಯಲ್ಲಿನ 5ನೇ ಕಾಲಂನಲ್ಲಿ ಸೂಚಿಸಿದ ಮೊತ್ತಕ್ಕಿಂತ ಮೀರದ ಮೊತ್ತವನ್ನು ದಿನಾಂಕ 1ನೇ ಏಪ್ರಿಲ್ 2025 ರಿಂದ 31ನೇ ಮಾರ್ಚ್ 2026 ರವರೆಗಿನ ಅವಧಿಗೆ, ಅನುಸೂಚಿಯ 2ನೇ ಅಂಕಣದಲ್ಲಿರುವ ಸೇವೆಗಳು ಮತ್ತು ಉದ್ದೇಶಕ್ಕಾಗಿ ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ಅನುಸೂಚಿಯ 5ನೇ ಕಾಲಂನಲ್ಲಿ ತಿಳಿಸಿರುವ ಮೊತ್ತದ ವಿವರಗಳನ್ನು ಆಯವ್ಯಯ ದಸ್ತಾವೇಜುಗಳೊಂದಿಗೆ ಒದಗಿಸಿದ “ಸಂಕ್ಷಿಪ್ತ ಅನುದಾನಗಳ ಅಭಿಯಾಚನೆ ಮತ್ತು ಪ್ರಕೃತ ವಿನಿಯೋಗ 2025-26” ರ ಭಾಗ-I ರಲ್ಲಿ ತಿಳಿಸಲಾಗಿದೆ.

ಕೆಲವೊಂದು ಪ್ರಕರಣಗಳಲ್ಲಿ “ಬೇಡಿಕೆ’ಯು ಒಂದಕ್ಕಿಂತ ಹೆಚ್ಚಿನ ಮುಖ್ಯ ಲೆಕ್ಕಶೀರ್ಷಿಕೆ ಮತ್ತು ಮುಖ್ಯ ಲೆಕ್ಕಶೀರ್ಷಿಕೆಯ ಒಂದು ಭಾಗವನ್ನು ಒಳಗೊಂಡಿರುವುದನ್ನು ಗಮನಿಸಬಹುದು, ಯಾವುದೇ ಒಂದು ಮುಖ್ಯ ಲೆಕ್ಕಶೀರ್ಷಿಕೆಯು ಒಂದಕ್ಕಿಂತ ಹೆಚ್ಚಿನ “ಬೇಡಿಕೆಗಳನ್ನು ಒಳಗೊಂಡಿದ್ದಲ್ಲಿ, ಆ ಮುಖ್ಯ ಲೆಕ್ಕಶೀರ್ಷಿಕೆಯ ಬೇಡಿಕೆವಾರು ವಿವರಗಳನ್ನು ಸಂಕ್ಷಿಪ್ತ ಅನುದಾನಗಳ ಅಭಿಯಾಚನೆ ಮತ್ತು ಪ್ರಕೃತ ವಿನಿಯೋಗಗಳು 2025-26 ರ ಭಾಗ- II” ರಲ್ಲಿ ನಮೂದಿಸಲಾಗಿದೆ.

3. ಜಿಲ್ಲಾ ಪಂಜಾಯತಿಗಳಿಗೆ ಸಂಬಂಧಿಸಿದ ಆಯವ್ಯಯ ಅನುದಾನಗಳು ಸಂಬಂಧಪಟ್ಟ ಅನುದಾನ ಅಭಿಯಾಚನೆಗಳಲ್ಲಿ ಸೇರಿರುತ್ತದೆ. ಅಭಿಯಾಚನೆಗಳಲ್ಲಿ ಸೂಚಿಸಿರುವ ಮೊತ್ತಕ್ಕಿಂತ ವೆಚ್ಚವು ಅಧಿಕವಾಗಿಲ್ಲವೆಂದು ಖಾತ್ರಿ ಮಾಡಿಕೊಳ್ಳುವ ಜವಾಬ್ದಾರಿಯು ಇಲಾಖಾ ಮುಖ್ಯಸ್ಥರದ್ದಾಗಿರುತ್ತದೆ. ಇವರು ಜಿಲ್ಲಾ ಪಂಚಾಯತ್‌ನ ಕ್ಷೇತ್ರ ಇಲಾಖೆಯಿಂದ ಮಾಸಿಕ ವರದಿಯನ್ನು ಪಡೆದುಕೊಂಡು ವೆಚ್ಚವನ್ನು ನಿಯಂತ್ರಿಸಬೇಕಾಗಿದೆ.

4. ಎಲ್ಲಾ ಇಲಾಖಾ ಮುಖ್ಯಸ್ಥರು ಮತ್ತು ವೆಚ್ಚವನ್ನು ನಿಯಂತ್ರಿಸಲು ಜವಾಬ್ದಾರರಾಗಿರುವ ಇತರ ಅಧಿಕಾರಿಗಳು ಯಾವುದೇ ಒಂದು ಬೇಡಿಕೆಯಡಿ ರಾಜಸ್ವ ಶೀರ್ಷಿಕೆಯಿಂದ ಬಂಡವಾಳ (ಸಾಲಗಳು ಸೇರಿ) ಶೀರ್ಷಿಕೆಗೆ ಹಾಗೂ ಬಂಡವಾಳ ಶೀರ್ಷಿಕೆಯಿಂದ ರಾಜಸ್ವ ಶೀರ್ಷಿಕೆಗೆ ಹಣವನ್ನು ಮರು ಹೊಂದಾಣಿಕೆ ಮಾಡತಕ್ಕದ್ದಲ್ಲ.

ಸರ್ಕಾರ ಮರುಹೊಂದಾಣಿಕೆಗೆ ಮಂಜೂರಾತಿ ನೀಡದ ಹೊರತು ಯಾವುದೇ ಘಟಕದಲ್ಲಿ ಉಳಿತಾಯದಿಂದ ಮರು ಹೊಂದಾಣಿಕೆಯನ್ನು ನಿರೀಕ್ಷಿಸಿ ಅಧಿಕ ವೆಚ್ಚವನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ.

ವೆಚ್ಚವನ್ನು ಮಾಡಲು ಜವಾಬ್ದಾರರಾದ ಇಲಾಖಾ ಮುಖ್ಯಸ್ಥರು ಹಾಗೂ ಇತರರು ಆರ್ಥಿಕ ವರ್ಷದ ಕೊನೆಯಲ್ಲಿ ವೆಚ್ಚವು ಬೃಹತ್ ಪ್ರಮಾಣದಲ್ಲಾಗದೇ, ವರ್ಷದ ಎಲ್ಲಾ ತಿಂಗಳಲ್ಲೂ ಸಮನಾಗಿ ಹಂಚುವಂತೆ ನೋಡಿಕೊಳ್ಳತಕ್ಕದ್ದು ಹಾಗೂ ಆಯವ್ಯಯ ವ್ಯಪಗತವಾಗಬಾರದೆಂಬ ಉದ್ದೇಶದಿಂದ ವರ್ಷಾಂತ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ವೆಚ್ಚ ಮಾಡುವುದನ್ನು ತಡೆಯುವುದು.

ಹೊಸ ಸೇವೆ ನಿಯಮಗಳ ಆದೇಶ ಸಂಖ್ಯೆ ಎಫ್.ಡಿ 14 ಬಿಪಿಎ 2015, ದಿನಾಂಕ:06-08-2015 ರನ್ವಯ ಯಾವುದೇ “ಹೊಸ ಸೇವೆಗಳ” ಬಗ್ಗೆ ಸಾದಿಲ್ವಾರು ನಿಧಿಯಿಂದ ಅಥವಾ ಪೂರಕ ಅಂದಾಜಿನ ಮೂಲಕ ಆರ್ಥಿಕ ಇಲಾಖೆಯು ಹಣ ಬಿಡುಗಡೆ ಮಾಡದ ಹೊರತು ಯಾವುದೇ ವೆಚ್ಚವನ್ನು ಮಾಡಬಾರದು.

5. ಕರ್ನಾಟಕ ಆರ್ಥಿಕ ಸಂಹಿತೆ / ಸಾದಿಲ್ವಾರು ವೆಚ್ಚದ ಕೈಪಿಡಿ / ಆಯವ್ಯಯ ಕೈಪಿಡಿ ನಿಯಮಗಳ ಅನ್ವಯ ಹಾಗೂ ಆದೇಶ ಸಂಖ್ಯೆ: ಆಇ 08 ಟಿ.ಎಫ್.ಪಿ 2023, ದಿನಾಂಕ:28.10.2024 ರಲ್ಲಿ ಇಲಾಖಾ ಮುಖ್ಯಸ್ಥರಿಗೆ ನೀಡಿರುವ ಅಧಿಕಾರಿ ಪ್ರತ್ಯಾಯೋಜನೆಯನ್ವಯ ಹಾಗೂ ಆರ್ಥಿಕ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ತ್ರೈಮಾಸಿಕ ಕಂತುಗಳ ಬಿಡುಗಡೆ ಅಧಿಕಾರದ ಆದೇಶಗಳನ್ವಯ ಅನುದಾನದ ಬಿಡುಗಡೆ | ವೆಚ್ಚಗಳನ್ನು ಮಾಡತಕ್ಕದ್ದು.

prajaprabhat

Recent Posts

ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಈ ಪ್ರಕಾರ ನಡೆಯಲಿದೆ.

ಬೆಂಗಳೂರು.03.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ  ಕಾಲೇಜು ಶಿಕ್ಷಣ ಇಲಾಖೆಯು…

3 hours ago

ಆ.10ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಿರಿ.

ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್‌ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…

4 hours ago

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ- ಡಾ. ಸುರೇಶ ಇಟ್ನಾಳ

ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…

5 hours ago

Free Couching ಅಲ್ಪಸಂಖ್ಯಾತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…

5 hours ago

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ: ಆಸಕ್ತರು ಭಾಗವಹಿಸಿ

ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…

5 hours ago

ನ್ಯಾಯಾಲಯಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಸೇವೆ ಪೂರೈಕೆಗೆ ಅರ್ಜಿ ಆಹ್ವಾನ<br>

ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…

5 hours ago