ರಾಜ್ಯ ಸರ್ಕಾರದಿಂದ SC-ST ಎಲ್ಲಾ ಬ್ಲಾಕ್ ಲಾಗ್ ಹುದ್ದೆಗಳ ಭರ್ತಿ.!

ದಾವಣಗೆರಾ.10.ಫೆ.25:-ಕರ್ಣಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಎಸ್ ಸಿ, ಎಸ್ ಟಿ ಖಾಲಿಯಿರುವ ಎಲ್ಲ ಬ್ಲಾಕ್‌ಲಾಗ್ ಹುದ್ದೆಗಳನ್ನು ಶೀಘ್ರ ತುಂಬಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಹರಿಹರ ತಾಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುತ್ತಿರುವ ವಾಲ್ಮೀಕಿ ಮಹೋತ್ಸವದಲ್ಲಿ ಮಾತನಾಡಿದ ಅವರು.

‘ಸಿಎಂ ಸಿದ್ದರಾಮಯ್ಯ ಎಸ್ಸಿ, ಎಸ್ಟಿ ಬ್ಯಾಕ್‌ಲಾಗ್ ಹುದ್ದೆ ತುಂಬಬೇಕು. ಎಂದು ಸಂಪುಟ ಉಪ ಸಮಿತಿ ರಚಿಸಿದ್ದು, ನಾನು ಅದರ ಅಧ್ಯಕ್ಷ ಈಗಾಗಲೇ ಮೂರು ಸಭೆ ನಡೆಸಿದ್ದೇವೆ.

ಇನ್ನೊಂದು ಸಭೆ ನಡೆಸಿ ಬ್ಯಾಕ್‌ಲಾಗ್‌ ಹುದ್ದೆ ತುಂಬಲು ತೀರ್ಮಾನ ಕೈಗೊಳ್ಳುತ್ತೇವೆ. ಎಸ್‌ಸಿ, ಎಸ್ಟಿ ಜನಸಂಖ್ಯೆಗೆ ತಕ್ಕಂತೆ ಅನುದಾನಮೀಸಲಿಡುವ ಕಾಯಿದೆಯಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ ಶೇ.24ರಷ್ಟು ಅನುದಾನ ಸಿಗುತ್ತಿದೆ. ಇದರಿಂದ ಈ ಸಮು ದಾಯಗಳು ಆರ್ಥಿಕವಾಗಿ ಬಲಗೊಳ್ಳುತ್ತಿವೆ ಎಂದರು.

ರಾಜನಹಳ್ಳಿ ವಾಲ್ಮೀಕಿ ಜಾತ್ರೆಯು ಈ ಭಾಗದ ವಿಶಿಷ್ಟ ಜಾತ್ರೆಗಳಲ್ಲಿ ಒಂದಾಗಿದ್ದು ದಾವಣಗೆರೆ ಸೀಮೆಯ ಸಾಂಸ್ಕೃತಿಕ ಹಿರಿಮೆಯ ಸಂಕೇತವಾಗಿದೆ ಮತ್ತು ವಾಲ್ಮೀಕಿಯಂತಹ ಮೇರು ವ್ಯಕ್ತಿತ್ವದ ಕವಿಯ ಹೆಸರಲ್ಲಿ ನಾವು ಮಾಡುತ್ತಿರುವ ಈ ಜಾತ್ರೆ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ. ನಮಗೆಲ್ಲಾ ವಾಲ್ಮೀಕಿಯವರ ಬಗ್ಗೆ ಗೊತ್ತೇ ಇದೆ. ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣವನ್ನು ರಚಿಸಿದವರು ವಾಲ್ಮೀಕಿಯವರು.

ರಾಮಾಯಣವನ್ನು ಓದುತ್ತಿದ್ದರೆ, ಅದರ ಒಂದೊಂದು ಮಾತಿನಲ್ಲೂ ವಾಲ್ಮೀಕಿಗಳ ವ್ಯಕ್ತಿತ್ವವೇ ಎದ್ದುಕಾಣುತ್ತದೆ. ವಾಲ್ಮೀಕಿಗಳ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಆದದ್ದು ಅವರು ರಾಮನ ಬಗ್ಗೆ ನಾರದರು ಹೇಳಿದ ಮಾತುಗಳನ್ನು ಕೇಳಿದ ಮೇಲೆಯೇ.

ಮೊದಲಿಗೆ ಅವರು ತಮ್ಮ ಮೋಕ್ಷವನ್ನು ಬಯಸಿ ಸಾಧನೆಯಲ್ಲಿ ನಿರತ ತಪಸ್ವಿಗಳಷ್ಟೇ ಆಗಿದ್ದರು; ಆದರೆ ರಾಮನ ಕಥೆಯನ್ನು ಕೇಳಿ ಅವರು ಜಗತ್ತಿನ ಸಂಕಟಕ್ಕೆ ಸ್ಪಂದಿಸಬಲ್ಲ ಕವಿಗಳೇ ಆದರು

ನಾವಿಂದು ಧಾರ್ಮಿಕತೆಯನ್ನು ಅನುಕೂಲಸಿಂಧುವನ್ನಾಗಿಸಿಕೊಳ್ಳುತ್ತಿದ್ದೇವೆ. ಆದರೆ ದಿಟವಾದ ಧರ್ಮಶ್ರದ್ಧೆಯ ಆಕಾರವನ್ನು ನಮಗೆ ಒದಗಿಸಿದವರು ವಾಲ್ಮೀಕಿಯವರು.

ಧರ್ಮ ಎನ್ನುವುದು ಸನಾತನವಾದುದು; ಅದು ನಮ್ಮ ಸ್ವಾರ್ಥ, ಬುದ್ಧಿ, ಅನುಕೂಲ, ದೇಶ, ಕಾಲಗಳನ್ನು ಮೀರಿದ ಶಾಶ್ವತ ತತ್ತ್ವ ಎಂಬುದರ ಮೀಮಾಂಸೆಯನ್ನು ರಾಮಾಯಣದ ಆರಂಭದಿಂದ ಕೊನೆಯ ತನಕ ಅವರು ನಿರೂಪಿಸಿದ್ದಾರೆ. ದಿಟವಾದ ಧಾರ್ಮಿಕ ಹೇಗಿರುತ್ತಾನೆ ಎಂಬುದಕ್ಕೆ ಒಂದು ಉದಾಹರಣೆಯನ್ನು ನೋಡಬಹುದು.

ರಾಮನು ಪಟ್ಟಾಭಿಷೇಕಕ್ಕೆ ಸಿದ್ಧನಾಗುತ್ತಿದ್ದಾನೆ. ಆದರೆ ಮುಂದೆ ಸ್ವಲ್ಪವೇ ಸಮಯದ ಅಂತರದಲ್ಲಿ ಕಾಡಿಗೆ ಹೋಗಲು ಅವನು ಸಿದ್ಧನಾಗಬೇಕಾಗುತ್ತದೆ.

ಆಗ ರಾಮನ ಮುಖ ಹೇಗಿತ್ತು ಎಂಬುದನ್ನು ವಾಲ್ಮೀಕಿಗಳು ವರ್ಣಿಸುತ್ತಾರೆ: ‘ಅವನು ಪಟ್ಟಾಭಿಷೇಕಕ್ಕೆ ಸಿದ್ಧವಾಗುತ್ತಿದ್ದಾಗ ಅವನ ಮುಖ ಹೇಗಿದ್ದಿತೋ, ಈಗ ಕಾಡಿಗೆ ಹೋಗಲು ಸಿದ್ಧವಾಗಬೇಕಾದರೂ ಹಾಗೆಯೇ ಇದ್ದಿತು; ಸ್ವಲ್ಪವೂ ವ್ಯತ್ಯಾಸ ಇರಲಿಲ್ಲ.’

ಧರ್ಮದಲ್ಲಿ ನಿರತನಾದವನಿಗೆ ನಾಡಾದರೂ ಒಂದೇ, ಕಾಡಾದರೂ ಒಂದೇ; ಅವನಿಗೆ ಧರ್ಮಮಾರ್ಗ ಮುಖ್ಯವೇ ಹೊರತು ಸಿಂಹಾಸನ-ವನವಾಸಗಳು ಅಲ್ಲ – ಎಂಬುದನ್ನು ತುಂಬ ಅದ್ಭುತವಾಗಿ ವಾಲ್ಮೀಕಿಗಳು ಸೂಚಿಸಿದ್ದಾರೆ.

‘ಯಾವುದೇ ಕಾರಣಕ್ಕೂ ಅಧರ್ಮಮಾರ್ಗದಿಂದ ನಾನು ರಾಜ್ಯವನ್ನು ದಕ್ಕಿಸಿಕೊಳ್ಳಲಾರೆ’ ಎಂದು ರಾಮ ನೇರವಾಗಿಯೇ ಘೋಷಿಸುತ್ತಾನೆ ಕೂಡ. ನಮಗಿಂದು ರಾಮಾಯಣ ಮತ್ತು ವಾಲ್ಮೀಕಿ ಮಹರ್ಷಿ ಪ್ರಸ್ತುತ ಆಗಬೇಕಾದ್ದು ಈ ಕಾರಣಕ್ಕಾಗಿ ಎಂಬುದನ್ನು ನಾವು ಅರಿಯಬೇಕು.

ಈ ದಿನ ರಾಮ ರಾಜಕೀಯ ಸರಕು ಆಗಿದ್ದಾನೆ. ಆದರೆ ವಾಲ್ಮೀಕಿ ಹೇಳಿದಂತೆ ನಾವು ರಾಮನನ್ನು ಅರಿತರೆ ಧರ್ಮದ ನಿಜವಾದ ಉದ್ದೇಶವೂ ನಮಗೆ ಅರ್ಥವಾಗುತ್ತದೆ ಮತ್ತು ಆ ಕಾರಣಕ್ಕಾಗಿ ನಡೆಯುತ್ತಿರುವ ಕಲಹಗಳೂ ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.

ಈ ಮಹತ್ವದ ಜಾತ್ರಾ ಸಭೆಯಲ್ಲಿ ಸಚಿವರಾದ ಡಾ ಜಿ ಪರಮೇಶ್ವರ್, ಸತೀಶ್ ಜಾರಕೀಹೊಳಿ, ವಿಧಾನ ಪರಿಷತ್ ಸದಸ್ಯರಾದ ಡಾ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಅನಿಲ್ ಚಿಕ್ಕಮಾದು, ಬಸಂತಪ್ಪ, ದರ್ಶನ್ ಧೃವ ನಾರಾಯಣ್, ಸಂಸದರಾದ ತುಕಾರಾಂ, ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

prajaprabhat

Recent Posts

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

3 hours ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

5 hours ago

ಉತ್ತರಾಖಂಡದಲ್ಲಿ ಸೇನಾ ಸನ್ನದ್ಧತೆಯನ್ನು ಪರಿಶೀಲಿಸಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಐಬೆಕ್ಸ್ ತರಾನಾ 88.4 ಎಫ್‌ಎಂ ಅನ್ನು ಉದ್ಘಾಟಿಸಿದರು.

ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…

7 hours ago

ಮಿಥಿ ನದಿ ಹೂಳೆತ್ತುವ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ದಾಳಿ ನಡೆಸಿದೆ.

ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…

7 hours ago

ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಉತ್ತರ ರೈಲ್ವೆ ಪ್ರಾರಂಭಿಸಿದೆ

ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…

7 hours ago

ಭೂಕುಸಿತದಿಂದ ಹಾನಿಗೊಳಗಾದ ಚಾಟೆನ್‌ನಿಂದ ಸಿಕ್ಕಿಬಿದ್ದ ಸ್ಥಳೀಯರು ಮತ್ತು ಟ್ಯಾಕ್ಸಿ ಚಾಲಕರನ್ನು ಸಿಕ್ಕಿಂ ಸರ್ಕಾರ ವಿಶೇಷ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ

ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…

7 hours ago