ರಾಜ್ಯ ಸರ್ಕಾರದಿಂದ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಬಿಗ್ ಶಾಕ್: ಈ ಗುಣಮಟ್ಟ ಮಾನದಂಡ ಗುರಿ ಸಾಧಿಸದಿದ್ದರೇ ಕ್ರಮ ಫಿಕ್ಸ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯವ್ಯಾಪ್ತಿಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಗುಣಮಟ್ಟ ಮಾನದಂಡಗಳನ್ನು ಅನುಷ್ಠಾನಗೊಳಿಸಲು ಹೊಣೆಗಾರಿಕೆ ನಿಗದಿಪಡಿಸಿದೆ. ಈ ಗುಣಮಟ್ಟದ ಮಾನದಂಡ ಸಾಧಿಸದಿದ್ದರೇ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಈ ಕುರಿತು ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಿದ್ದು, 2021-2030ರ ದಶಕವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸೇವೆಗಳ ದಶಕವೆಂದು ಘೋಷಿಸಲಾಗಿದೆ. ಆರೋಗ್ಯ ಸೇವೆಯಲ್ಲಿ ಚಿಕಿತ್ಸೆಯ ಗುಣಮಟ್ಟ ಅಥವಾ ವಿಳಂಬದಿಂದಾಗಿ ಹಾಗೂ ಔಷಧಿ ಸೇವನೆಯ ಕುರಿತು ಸಮಾಲೋಚನೆಯ ಕೊರತೆಯೂ ಇದ್ದು, ಈ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ, 50%ಕ್ಕಿಂತಲೂ ಹೆಚ್ಚಿನ ಅನಾರೋಗ್ಯದ ಗುಣಮಟ್ಟವಿದೆಯೆಂದು ವರದಿಯಾಗಿದೆ.
ರೋಗ ಪೀಡಿತರ ಆರೋಗ್ಯ ಸುಧಾರಣೆಗಾಗಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು ಇಲಾಖೆಯ ಮೂಲತತ್ವವಾಗಿದೆ. ಸಾರ್ವಜನಿಕರು ಬಳಸುವ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಇಲಾಖೆಯು ರೋಗಗಳನ್ನು ತಡೆಗಟ್ಟಿ, ಗುಣಪಡಿಸಲು ಸಾಧ್ಯವಾಗುತ್ತದೆ.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕರ ಆರೋಗ್ಯ ಸುಧಾರಣೆಯು ಭಾರತ ಸರ್ಕಾರ ಅಭಿವೃದ್ಧಿಪಡಿಸಿದ NQAS ಮಾನದಂಡವಾಗಿದ್ದು, ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಇತರ ಆರೋಗ್ಯ ಸಂಸ್ಥೆಗಳನ್ನು ನಿರ್ಣಯಿಸುವ ಮತ್ತು ಪ್ರಮಾಣೀಕರಿಸುವ ಸಮಗ್ರ ವ್ಯವಸ್ಥೆಯಾಗಿದೆ. ಉತ್ತಮ ಕಾರ್ಯಕ್ಷಮತೆಯ ಆರೋಗ್ಯ ಕೇಂದ್ರಗಳನ್ನು ಗುರುತಿಸುವುದು, ಸಾರ್ವಜನಿಕ ಆರೋಗ್ಯ ರಕ್ಷಣೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದು ಮತ್ತು ರೋಗಿಗಳಿಗೆ ಒದಗಿಸಲಾದ ಆರೈಕೆಯ ಗುಣಮಟ್ಟವನ್ನು ಸುಧಾರಿಸುವುದು NQAS ನ ಗುರಿಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯವ್ಯಾಪ್ತಿಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ದಿನಾಂಕ : 02/06/2025ರಂದು ಇದ್ದಂತೆ ಸಾಧಿಸಲಾದ NQAS ಪ್ರಮಾಣೀಕರಣದ ಅಂಕಿ-ಅಂಶಗಳನ್ನು ಈ ಕೆಳಕಂಡಂತೆ ಪ್ರಸ್ತಾಪಿಸುತ್ತಾ, ನಿರೀಕ್ಷಿತ NQAS ಪ್ರಮಾಣಿಕರಣವನ್ನು ಸಾಧಿಸಲು ಹೊಣೆಗಾರಿಕೆ ನಿಗದಿಪಡಿಸುವ ಸಂಬಂಧ ಕೋರಲಾಗಿದೆ.

ಈ ಮೇಲಿನ ಅಂಶಗಳನ್ನು ಪರಿಶೀಲಿಸಲಾಯಿತು. ಭಾರತ ಸರ್ಕಾರವು ಅಭಿವೃದ್ಧಿಪಡಿಸಿದ NQAS ಮಾನದಂಡದಡಿ, ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಇತರ ಆರೋಗ್ಯ ಕೇಂದ್ರಗಳಲ್ಲಿ ನಿರೀಕ್ಷಿತ NQAS ಪ್ರಮಾಣಿಕರಣವನ್ನು ಸಾಧಿಸಲು ಹೊಣೆಗಾರಿಕೆಯನ್ನು ನಿಗದಿಪಡಿಸಲು ಈ ಕೆಳಕಂಡಂತೆ ಆದೇಶಿಸಿದೆ.

ಪುಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಇತರ ಆರೋಗ್ಯ ಕೇಂದ್ರಗಳಲ್ಲಿ ಭಾರತ ಸರ್ಕಾರವು ಅಭಿವೃದ್ಧಿಪಡಿಸಿದ ರಾಷ್ಟ್ರೀಯಗು ಣಮಟ್ಟ ಮಾನದಂಡಗಳನ್ನು ನಿರೀಕ್ಷಿತ ಮಟ್ಟದಲ್ಲಿ ಗುರಿಸಾಧಿಸಲು ವಿಫಲರಾದ ಆಸ್ಪತ್ರೆಯ ಸಂಬಂಧಿಸಿದ ವೈದ್ಯಕೀಯ/ಅರೆ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಈ ಕೆಳಕಂಡಂತೆ ಕ್ರಮವಹಿಸತಕ್ಕದ್ದು ಎಂದಿದೆ.

1. ಯಾವ ಆರೋಗ್ಯ ಸಂಸ್ಥೆಯು 3 ತಿಂಗಳ ಒಳಗೆ ನಿರೀಕ್ಷಿತ ಮಟ್ಟದಲ್ಲಿ ಗುರಿ ಸಾಧಿಸಲು ವಿಫಲವಾಗುವುದೋ, ಅಂತಹ ವಿಫಲವಾದ ತಂಡಕ್ಕೆ AB-ArK ಅಡಿಯ ತಂಡದ ಪ್ರೋತ್ಸಾಹಧನಕ್ಕೆ ಅನರ್ಹಗೊಳಿಸುವುದು (AB- Ark ಪ್ರೋತ್ಸಾಹಕಗಳಲ್ಲಿ ಶೇಕಡ 30% ತಂಡಕ್ಕೆ ಮತ್ತು ಉಳಿದ ಶೇಕಡ 70% ಆಸ್ಪತ್ರೆಯು Health Benefit Package ಪಡೆಯಲು ಅರ್ಹರಿರುತ್ತಾರೆ).

2. NQAS ನ ಸಾಧನೆಯನ್ನು 6 ತಿಂಗಳ ಒಳಗೆ ನಿರೀಕ್ಷಿತ ಮಟ್ಟದಲ್ಲಿ ಸಾಧಿಸತಕ್ಕದ್ದು ಇಲ್ಲವೆ ಆರೋಗ್ಯ ಕೇಂದ್ರದ ಅಂತಹ ಮುಖ್ಯಸ್ಥರ ಮತ್ತು ವೈದ್ಯಕೀಯ/ಅರೆ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯಲ್ಲಿ ಷರಾ ದಾಖಲಿಸತಕ್ಕದ್ದು ಜೊತೆಗೆ ಅಂತಹ ಮುಖ್ಯಸ್ಥರ ವರ್ಗಾವಣೆಗೆ ಲಿಂಕ್ ಮಾಡುವುದು.

3. ಇಂದಿನಿಂದ 9 ತಿಂಗಳೊಳಗೆ ಯಾವುದೇ ಸಾಧನೆಯಾಗದಿದ್ದರೆ, ಅಂತಹ ಆರೋಗ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಮುಖ್ಯಸ್ಥರ ಮತ್ತು ವೈದ್ಯಕೀಯ/ಅರೆ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆ ಹಿಡಿಯುವುದು.

4. ಮೇಲಿನ ಎಲ್ಲಾ ಕ್ರಮಗಳ ಹೊರತಾಗಿಯೂ, ಯಾವುದೇ ಪ್ರಗತಿ ಇಲ್ಲದಿದ್ದರೆ, ಆರೋಗ್ಯ ಸಂಸ್ಥೆಗಳ ಸಿಬ್ಬಂದಿಯನ್ನು ಕಳಪೆ ಗುಣಮಟ್ಟದ ಆರೈಕೆ/ಚಿಕಿತ್ಸೆ ಇತ್ಯಾದಿಗಳಿಗೆ ಹೊಣೆಗಾರರನ್ನಾಗಿ ಮಾಡುವುದು. ಮೇಲಿನ ಕ್ರಮಗಳನ್ನು ಜಾರಿಗೆ ತರಲು, ಅಂತಹ ಆರೋಗ್ಯ ಸಂಸ್ಥೆಗಳಿಗೆ 3 ತಿಂಗಳ ಮುಂಗಡ ಅವಧಿ (Lead Period)ಯನ್ನು ನೀಡುವುದು.

prajaprabhat

Recent Posts

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…

8 hours ago

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…

9 hours ago

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

9 hours ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

10 hours ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

10 hours ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

11 hours ago