ಬೆಂಗಳೂರು.01.ಜೂನ್.25:- ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಾರ್ವತ್ರಿಕ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರವು ಹೊರಡಿಸಿದೆ.
ಸರ್ಕಾರದ ಉಲ್ಲೇಖಿತ 09 ರ ಆದೇಶದಲ್ಲಿ ವರ್ಗಾವಣೆಯ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸದರಿ ಆದೇಶದಲ್ಲಿ ನಮೂದಿಸಿರುವ ಷರತ್ತುಗಳೊಂದಿಗೆ ಪ್ರಸ್ತುತ 2025-26 ನೇ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಸಂಬಂಧಿಸಿದ ವೃಂದದ ಕಾರ್ಯನಿರತ ವೃಂದ ಬಲದ (working strength) ಶೇಕಡ 6 ಕ್ಕೆ ಸೀಮಿತಗೊಳಿಸಿ ದಿನಾಂಕ: 14-06-2025 ರೊಳಗೆ ಪೂರ್ಣಗೊಳಿಸಲು ಆದೇಶಿಸಲಾಗಿದೆ.
2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ವೃಂದದ ಸಿಬ್ಬಂದಿಗಳ ವರ್ಗಾವಣೆಯನ್ನು, ಒಂದೇ ಸ್ಥಳದಲ್ಲಿ ಸಲ್ಲಿಸಿರುವ ಸೇವಾ ಅವಧಿಯ ಆಧಾರದಲ್ಲಿನ ಗ್ರೇಸ್ ಅಂಕಗಳ ಜೇಷ್ಮತೆಯನ್ನು ಪರಿಗಣಿಸಿ, ಆನ್ ಲೈನ್ ಮುಖಾಂತರದಲ್ಲಿ, ಏಕ ಪಟ್ಟಿ ಮಾದರಿಯಲ್ಲಿ ಕೌನ್ಸಿಲಿಂಗ್ ಮುಖೇನ ನಿಗದಿತ ಮಿತಿಯೊಳಗೆ ವರ್ಗಾವಣೆ ಮಾಡಲು ನಿರ್ಧರಿಸಲಾಗಿದ್ದು, ಮಾರ್ಗಸೂಚಿಯನ್ವಯ ಅಗತ್ಯ ಕ್ರಮ ತೆಗೆದುಕೊಳ್ಳಲು ಮೈಸೂರು ಮತ್ತು ಬೆಂಗಳೂರು ವಿಭಾಗಗಳ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿದ.
ಸಕಮ ಪ್ರಾಧಿಕಾರ ಮತ್ತು ವರ್ಗಾವಣೆ ಮಿತಿ:
ಈ ಕೆಳಕಂಡಂತೆ ನಿಗಧಿಪಡಿಸಿರುವ ಸಕ್ಷಮ ಪ್ರಾಧಿಕಾರವು ಜೇಷ್ಟತಾ ಘಟಕದ ವ್ಯಾಪ್ತಿಯಲ್ಲಿ ಬೋಧಕೇತರ ಸಿಬ್ಬಂದಿಯ ವರ್ಗಾವಣೆಯನ್ನು ಕಂಡಿಕೆ 04 ರಲ್ಲಿ ನಿಗದಿಪಡಿಸಿರುವ ಶೇಕಡಾವಾರು ಪ್ರಮಾಣ ಮೀರದಂತೆ ನಿರ್ದಿಷ್ಟಪಡಿಸಿದ ದಿನಾಂಕದಂದು ಕೌನ್ಸಿಲಿಂಗ್ ಮುಖೇನ ಮಾರ್ಗಸೂಚಿಯನ್ನು ಅನುಸರಿಸಿ ವರ್ಗಾವಣೆಗೆ ಕ್ರಮ ವಹಿಸಲು ತಿಳಿಸಲಾಗಿದೆ.
ವರ್ಗಾವಣೆಗಳು ಸಂಪೂರ್ಣವಾಗಿ ಆನ್ ಲೈನ್ ಮಾದರಿಯಲ್ಲಿರುತ್ತವೆ. ಪುಯುಕ್ತ ಅರ್ಜಿದಾರರ ಎಲ್ಲಾ ಸೇವಾ ವಿವರಗಳು, ಆದ್ಯತೆ/ ಕೋರಿಕೆ ವಿವರಗಳು, ಮತ್ತಿತರೆ ಎಲ್ಲಾ ಪೂರಕ ವಿವರಗಳನ್ನು ಕಡ್ಡಾಯವಾಗಿ ಇಇಡಿಎಸ್ ನಿಂದಲೇ ಪಡೆಯಲಾಗುವುದರಿಂದ ಇಇಡಿಎಸ್‌ನಲ್ಲಿ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ಇಇಡಿಎಸ್ ವೇಳಾಪಟ್ಟಿಯಂತೆ ಎಲ್ಲಾ ಸಿಬ್ಬಂದಿಗಳು ಇಂದೀಕರಿಸಿರತಕ್ಕದ್ದು. ಅರ್ಜಿ ಸಲ್ಲಿಸಲು ಅರ್ಹತೆಗೆ ಕನಿಷ್ಟ ಸೇವಾ ಅವಧಿ ಇತ್ಯಾದಿ ಎಲ್ಲಾ ಲೆಕ್ಕಾಚಾರಕ್ಕೆ ಅಧಿಸೂಚನೆಯ ದಿನಾಂಕವನ್ನು ಪರಿಗಣಿಸಲಾಗುವುದು.
ಸಕಮ ಪ್ರಾಧಿಕಾರಿಗಳು, ವರ್ಗಾವಣೆಯ ಪ್ರಮಾಣ ಹಾಗೂ ವರ್ಗಾವಣೆಯ ಅನುಕ್ರಮಣಿಕೆ.
ಸರ್ಕಾರದ ಉಲ್ಲೇಖಿತ (9) ರ ಆದೇಶದಂತೆ 2025-26 ನೇ ಸಾಲಿನಲ್ಲಿ ಇಲಾಖೆಯಿಂದ ಬೋಧಕೇತರ ‘ಸಿ’ ಮತ್ತು ‘ಡಿ’ ವೃಂದಗಳ ಕಾರ್ಯನಿರತ ವೃಂದ ಬಲದ ಒಟ್ಟು ಶೇ 6 ರನ್ನು ಮೀರದಂತೆ ವರ್ಗಾವಣೆಗಳನ್ನು ಮಾಡಲು ಆದೇಶಿಸಲಾಗಿದೆ.
ವರ್ಗಾವಣೆಯನ್ನು ಕೋರುವ ಆಯಾ ವೃಂದದ ಎಲ್ಲಾ ಅರ್ಜಿಗಳ ಕುರಿತಂತೆ ಒಂದೇ ಪಟ್ಟಿಯಂತೆ ಅಂಕಗಳ ಜೇಷ್ಟತೆಯನ್ನು ಪರಿಗಣಿಸಿ, ROUND ROBIN ಮಾದರಿಯಲ್ಲಿ ನಡೆಸಲಾಗುವುದು. ಆಯಾ ಜಿಲ್ಲಾ ಕೇಂದ್ರಗಳಲ್ಲಿಯೇ ಆಯಾ ಅರ್ಜಿದಾರರು ಹಾಜರಾಗಿ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಿದೆ.
ಆನ್‌ಲೈನ್ ನಲ್ಲಿ ಕೌನ್ಸಿಲಿಂಗ್ ಕೈಗೊಂಡು, ಆಯಾ ವೃಂದಗಳ ಮತ್ತು ವ್ಯಾಪ್ತಿಗೆ ಸಂಬಂಧಿಸಿದ ಪ್ರಾಧಿಕಾರಿಯವರು ಆನ್‌ಲೈನ್ ಪೋರ್ಟ್‌ಲ್‌ನಿಂದ, ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ವರ್ಗಾವಣಾ ಆದೇಶಗಳನ್ನು (ಪರಸ್ಪರ ವರ್ಗಾವಣೆಗಳು ಸೇರಿದಂತೆ] ಜನರೇಟ್ ಮಾಡಿಕೊಂಡು ನಿಯಮಾನುಸಾರ ನಿಗದಿತ ವೇಳೆಯೊಳಗೆ ವಿತರಿಸಲು ಕ್ರಮವಹಿಸತಕ್ಕದ್ದು.
ಈ ಮೇಲ್ಕಂಡ ರೀತ್ಯ ನಿಗದಿಪಡಿಸಿರುವ (ಪ್ರತಿಶತ 6) ವರ್ಗಾವಣೆಗಳಲ್ಲಿ, ಕೋರಿಕೆ, ದೂರು ಹಾಗೂ ಒಂದೇ ಕಛೇರಿಯಲ್ಲಿ ಗರಿಷ್ಠ ಅವಧಿಯಲ್ಲಿರುವವರು ಸೇರಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡುವ ವರ್ಗಾವಣೆಗಳು ಇರುತ್ತವೆ.
ಕೋರಿಕೆ ವರ್ಗಾವಣೆಗಳು ಆಯಾ ನಿಗದಿತ ಪ್ರಮಾಣದೊಳಗೆ ಗರಿಷ್ಠ ಶೇ. 80 ರಷ್ಟು ಇರುತ್ತವೆ. ದೀರ್ಘಾವಧಿ ಒಂದೇ ಸ್ಥಳದಲ್ಲಿರುವ ಪ್ರಕರಣಗಳಿಗೆ ಪ್ರತ್ಯೇಕವಾಗಿ ಶೇ 80ರ ಕೋರಿಕೆ ವರ್ಗಾವಣೆಗಳ ನಂತರದಲ್ಲಿ ಕೌನ್ಸಿಲಿಂಗ್ ಮುಖಾಂತರ ಇಲಾಖಾ ವತಿಯಿಂದಲೇ ಶೇಕಡ 20ರ ಮಿತಿಯಲ್ಲಿ ಕೈಗೊಳ್ಳಲಾಗುವುದು.
ಯಾವುದೇ ದೀರ್ಘಾವಧಿ ಸೇವಾ ಅವಧಿಯಲ್ಲಿರುವ ಸಿಬ್ಬಂದಿಗಳ ಪಟ್ಟಿಯನ್ನು ತಯಾರಿಸಿಕೊಂಡು ಗ್ರೇಸ್ ಅಂಕಗಳ ಆಧಾರದ ಮಾದರಿಯಲ್ಲಿಯೇ ಆದ್ಯತೆ /ವಿನಾಯಿತಿಗಳನ್ನು ಪರಿಗಣಿಸಿ, ಕೌನ್ಸಿಲಿಂಗ್‌ಗೆ ಮಾತ್ರ ಸಿಬ್ಬಂದಿಗಳನ್ನು ಇಲಾಖಾವತಿಯಿಂದಲೇ ಕರೆಯಲಾಗುತ್ತದೆ. ಈ ಕೌನ್ಸಿಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳದಿದ್ದಲ್ಲಿ ಡಮ್ಮಿ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗುವುದು.
ಈ ಕುರಿತಂತೆಯೂ ಇಇಡಿಎಸ್ ನಿಂದಲೇ ಸೇವಾ ಮಾಹಿತಿಗಳನ್ನು /ಆದ್ಯತೆ ಮಾಹಿತಿಗಳನ್ನು ಪಡೆಯಲಾಗುವುದರಿಂದ ಇಇಡಿಎಸ್ ನಲ್ಲಿ ಇಂದೀಕೃತ ಮಾಹಿತ ಲಭ್ಯವಿರತಕ್ಕದ್ದು. ಇಂದೀಕರಿಸದೇ ಇದ್ದಲ್ಲಿ ಆದ್ಯತೆ/ ವಿನಾಯಿತಿಗಳು ತಪ್ಪಿದಲ್ಲಿ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ.
ದೂರಿನ ಮೇಲೆ ವರ್ಗಾವಣೆಗಳಿದ್ದಲ್ಲಿ ಅವುಗಳಿಗೆ ಕೌನ್ಸಿಲಿಂಗ್ ಇರುವುದಿಲ್ಲ. ಇಲಾಖೆಯ ವತಿಯಿಂದಲೇ ಸ್ಥಳ ನಿಯುಕ್ತಿ ನೀಡಲಾಗುತ್ತದೆ. ಹಾಗೆಯೇ, ಸ್ಥಳೀಯ ವರ್ಗಾವಣೆಗಳನ್ನು (ಚಲನ-ವಲನ) ಕೋರುವ ಅರ್ಜಿದಾರರು ಆನ್ ಲೈನ್ ಅರ್ಜಿಯಲ್ಲಿ ಸದರಿ ಆಯ್ಕೆಯನ್ನು ಸೂಚಿಸಬೇಕಾಗುತ್ತದೆ. ಸ್ಥಳೀಯ ವರ್ಗಾವಣೆಗಳಿಗೆ ಸ್ಥಳೀಯ ಕಛೇರಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
ಆನ್-ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸುವಾಗ 1) ಚಲನವಲನ (ಸ್ಥಳೀಯ ವರ್ಗಾವಣೆಯೇ?) 2) ಆಯುಕ್ತಾಲಯದ ಒಳಗಿನ ವರ್ಗಾವಣೆಯೇ? 3) ಅಂತರ ವರ್ಗಾವಣೆಯೇ? ಎಂಬುದರ ಆಯ್ಕೆಯನ್ನು ಅರ್ಜಿದಾರರು ತೋರಿಸಬೇಕಾಗುತ್ತದೆ.
ಬೆಂಗಳೂರು.06.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ನಕಲಿ M.Phil ಮತ್ತು PH.D…
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…
ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…
ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…