ರಾಜ್ಯ ಸರಕಾರ ಒಬಿಸಿ ಮೀಸಲತಿಯೆಲ್ಲಿ: ಭಾರಿ ಬದಲಾವಣೆ

ಬೆಂಗಳೂರು.12.ಏಪ್ರಿಲ್.25:- ರಾಜ್ಯದಲ್ಲಿ (ಒಬಿಸಿ) ಮೀಸಲಾತಿ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಣ ಮಾಡಿ ಆಯಾ ಜಾತಿಯವರ ಜನಸಂಖ್ಯೆಗೆ ಆಧಾರಮೇಲೆ ಅನುಗುಣಗವಾಗಿ ಈಗಿರುವ ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು, ಹಿಂದುಳಿದ ತಳ ಸಮುದಾಯಗಳೂ ಸೇರಿಕೊಂಡಂತೆ ಇತರೆ ಹಿಂದುಳಿದ ಜಾತಿಗಳ ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಕೆ.ಜಯಪ‍್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಈವರೆಗೆ ಶೇಕಡ 32 ಹಾಗೂ ಪರಿಶಿಷ್ಟ ಜಾತಿ-ಪಂಗಡದವರಿಗೆ ಶೇ 24.1ರಷ್ಟು ಮೀಸಲಾತಿ ಇದೆ. ಹಿಂದುಳಿದವರ ಮೀಸಲಾತಿಯನ್ನು ಶೇ 51ಕ್ಕೆ ಏರಿಸುವಂತೆ ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ. ಈಗಿರುವ ಕಾನೂನಿನಂತೆ ಒಟ್ಟು ಮೀಸಲಾತಿ ಶೇ 50ರಷ್ಟನ್ನು ಮೀರುವಂತಿಲ್ಲ. ಹಿಂದುಳಿದವರ ಮೀಸಲು ಪ್ರಮಾಣವನ್ನು ಹೀಗೆ ಹೆಚ್ಚಿಸುವ ಶಿಫಾರಸು ಜಾರಿಯಾಗಬೇಕಾದರೆ ಕೇಂದ್ರ ಸರ್ಕಾರವು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು, ಮೀಸಲಾತಿ ಹೆಚ್ಚಳದ ತೀರ್ಮಾನಕ್ಕೆ ರಕ್ಷಣೆ ಒದಗಿಸಬೇಕಾಗುತ್ತದೆ ಎಂದೂ ಆಯೋಗ ಪ್ರತಿಪಾದಿಸಿದೆ.

ಎಚ್.ಕಾಂತರಾಜ ನೇತೃತ್ವದ ಆಯೋಗ ನಡೆಸಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಜನಗಣತಿ) ಆಧರಿಸಿ ಹೆಗ್ಡೆ ನೇತೃತ್ವದ ಆಯೋಗವು 2024ರ ಫೆಬ್ರುವರಿಯಲ್ಲಿ ಸಲ್ಲಿಸಿದ್ದ ‘2015ರ ದತ್ತಾಂಶಗಳ ಅಧ್ಯಯನ ವರದಿ 2024’ರಲ್ಲಿ ಈ ಶಿಫಾರಸುಗಳಿವೆ ಎಂದು ಗೊತ್ತಾಗಿದೆ.

ಕಾಂತರಾಜ ಆಯೋಗದ ವರದಿ ಹಾಗೂ ಹೆಗ್ಡೆಯವರ ಅಧ್ಯಯನ ವರದಿಯ ಶಿಫಾರಸು ಹಾಗೂ ಮುಖ್ಯಾಂಶಗಳನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು. ಅದರ ವಿವರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಏನಿದೆ ವಿವರ: ಈ ಹಿಂದೆ ನಡೆಸಿದ ಸಮೀಕ್ಷೆಯ ವೇಳೆ ರಾಜ್ಯದಲ್ಲಿ 6.35 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ 5.98 ಕೋಟಿ ಜನರನ್ನು ಸಮೀಕ್ಷೆ ಒಳಗೊಂಡಿತ್ತು. ಸಮೀಕ್ಷೆ ವೇಳೆ ಸಂಗ್ರಹಿಸಲಾದ ಮಾಹಿತಿ ಆಧರಿಸಿ, ವಿವಿಧ ಜಾತಿಯ ಜನಸಂಖ್ಯೆ ಎಷ್ಟಿದೆ? ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಹೇಗಿದೆ? ಉದ್ಯೋಗವಾರು ಎಷ್ಟು ಪಾಲು ಸಿಕ್ಕಿದೆ? ಭೂ ಹಂಚಿಕೆ ಹೇಗಿದೆ ಎಂಬ ಮಾಹಿತಿಯನ್ನು ಸಮೀಕ್ಷೆ ವೇಳೆ ಸಂಗ್ರಹಿಸಲಾಗಿತ್ತು. ಆ ದತ್ತಾಂಶ ಆಧರಿಸಿ, ಮೀಸಲಾತಿಯನ್ನು ಮರು ಹಂಚಿಕೆ ಮಾಡಬೇಕು ಎಂದು ಹೆಗ್ಡೆಯವರ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.

ಹಿಂದುಳಿದಿರುವಿಕೆ, ಕುಲಕಸುಬು, ಈಚಿನ ವರ್ಷಗಳಲ್ಲಿ ಮೇಲುಸ್ತರಕ್ಕೆ ಏರಿದ ಜಾತಿಗಳ ಸ್ಥಿತಿಗೆ ಅನುಗುಣವಾಗಿ ಮೀಸಲಾತಿ ಪಟ್ಟಿಯಲ್ಲಿ ಮರುವರ್ಗೀಕರಣ ಮಾಡಲು ಶಿಫಾರಸು ಮಾಡಲಾಗಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಈವರೆಗೆ ಐದು ಪ್ರವರ್ಗಗಳಿದ್ದು, ಅದನ್ನು ಆರಕ್ಕೆ ಏರಿಸಲು ಶಿಫಾರಸು ಮಾಡಿದೆ. ಪ್ರವರ್ಗ 1, ಪ್ರವರ್ಗ 2 ಎ ಅಡಿ ಇದ್ದ ಜಾತಿಗಳನ್ನು ಮರು ವರ್ಗೀಕರಣ ಮಾಡುವುದಕ್ಕಾಗಿ ಪ್ರವರ್ಗ 1ರ ಬದಲು ಪ್ರವರ್ಗ ‘1 ಎ’ ಎಂದು ಹಾಗೂ ಪ್ರವರ್ಗ ‘1 ಬಿ’ ಎಂಬ ಹೊಸ ವರ್ಗಗಳನ್ನು ಸೃಷ್ಟಿಸುವಂತೆ ಶಿಫಾರಸು ಮಾಡಲಾಗಿದೆ.



ಪ್ರವರ್ಗ 1ರಲ್ಲಿದ್ದ ಹಲವು ಜಾತಿಗಳನ್ನು ಆ ಜಾತಿಯವರ ಕಾಯಕ, ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ‘1 ಎ’ ನಲ್ಲಿ ಇರಿಸಲಾಗಿದೆ. ಪ್ರವರ್ಗ 1 ಹಾಗೂ ‘2 ಎ’ನಲ್ಲಿದ್ದ ಜಾತಿಗಳನ್ನು ಮರು ವರ್ಗೀಕರಿಸಿ, ಕೆಲವು ಜಾತಿಗಳನ್ನು ಒಳಗೊಂಡ ‘1 ಬಿ’ ಪ್ರವರ್ಗ ಸೃಜಿಸಲಾಗಿದೆ. ‘2 ಎ’ನಲ್ಲಿದ್ದ ಕೆಲವು ಜಾತಿಯವರನ್ನು ‘1 ಬಿ’ಯಡಿ ತರಲಾಗಿದೆ. ಹಿಂದುಳಿದ ಜಾತಿಯವರನ್ನು ‘1 ಬಿ’ಯಲ್ಲಿ ಸೇರಿಸಲಾಗಿದ್ದು, ಇವರಲ್ಲಿ ಅಲೆಮಾರಿ, ಅರೆ ಅಲೆಮಾರಿ ಹಾಗೂ ಆ ಗುಣಲಕ್ಷಣವುಳ್ಳ ಜಾತಿಗಳು ಇವೆ. ಕುಶಲಕರ್ಮಿ ಹಾಗೂ ಕುಲಕಸುಬು ಆಧಾರಿತ ವೃತ್ತಿಪರ ಸಮುದಾಯಗಳನ್ನು ‘2 ಎ’ ನಲ್ಲೇ ಇರಿಸಲಾಗಿದೆ.

ಪ್ರವರ್ಗ 1ಕ್ಕೆ ಇದ್ದ ಮೀಸಲಾತಿಯನ್ನು ಶೇ 4ರಿಂದ 6ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ‘2 ಎ’ಗೆ ಶೇ 15ರಷ್ಟಿದ್ದ ಮೀಸಲಾತಿಯನ್ನು ‘1 ಬಿ’ ಹಾಗೂ ‘2 ಎ’ಗೆ ಮರು ಹಂಚಿಕೆ ಮಾಡಲಾಗಿದೆ. ಹೀಗೆ ಮಾಡುವಾಗ, ‘1 ಬಿ’ಗೆ ಶೇ 12 ಹಾಗೂ ‘2 ಎ’ಗೆ ಶೇ 10ರಷ್ಟು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಹಿಂದುಳಿದ ಜಾತಿ( 2 ಎ)ಯವರಿಗೆ ಇದ್ದ ಶೇ 15ರ ಮೀಸಲಾತಿ ಶೇ 22ಕ್ಕೆ ಏರಿಕೆಯಾಗಿದೆ.

ಲಿಂಗಾಯತ-ಒಕ್ಕಲಿಗರಿಗೂ ಲಾಭ

ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಎರಡು ಸಮುದಾಯವರಿಗೆ ಮೀಸಲಾತಿ ಪ್ರಮಾಣವನ್ನು ತಲಾ ಶೇ 3ರಷ್ಟು ಹೆಚ್ಚಿಸುವಂತೆ ಆಯೋಗವು ತನ್ನ ಶಿಫಾರಸಿನಲ್ಲಿ ಹೇಳಿದೆ.

‘3 ಬಿ’ ಪಟ್ಟಿಯಲ್ಲಿರುವ ಲಿಂಗಾಯತ ಹಾಗೂ ಅದರ ಉಪ ಜಾತಿಗಳ ಒಟ್ಟು ಜನಸಂಖ್ಯೆ 81 ಲಕ್ಷದಷ್ಟಿದ್ದು, ಅದರಲ್ಲಿ ಲಿಂಗಾಯತರ ಸಂಖ್ಯೆ 66 ಲಕ್ಷದಷ್ಟಿದೆ. ಮೀಸಲಾತಿ ಪ್ರಮಾಣ ಶೇ 5ರಷ್ಟಿದೆ. ಜನಸಂಖ್ಯೆಗೆ ಅನುಗುಣವಾಗಿ ಅದನ್ನು ಶೇ 8ಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ.

‘3 ಎ’ ಪಟ್ಟಿಯಲ್ಲಿರುವ ಒಕ್ಕಲಿಗ ಮತ್ತು ಅದರ ಉಪ ಜಾತಿಗಳ ಒಟ್ಟು ಜನಸಂಖ್ಯೆ 72 ಲಕ್ಷದಷ್ಟಿದೆ. ಒಕ್ಕಲಿಗರು 61.50 ಲಕ್ಷದಷ್ಟಿದ್ದಾರೆ. ಒಟ್ಟು ಮೀಸಲಾತಿ ಶೇ 4ರಷ್ಟಿದೆ. ಅದನ್ನು ಶೇ 7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.

ಮುಸ್ಲಿಮರ ಮೀಸಲು ಶೇ 8ಕ್ಕೆ?

ಮುಸ್ಲಿಂ ಸಮುದಾಯದವರ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ 4ರಿಂದ ಶೇ 8ಕ್ಕೆ ಏರಿಸುವಂತೆ ಜಯಪ್ರಕಾಶ ಹೆಗ್ಡೆ ಆಯೋಗವು ತನ್ನ ಶಿಫಾರಸಿನಲ್ಲಿ ಹೇಳಿದೆ. ಮುಸ್ಲಿಂ ಸಮುದಾಯವರ ಜನಸಂಖ್ಯೆಯು ಒಂದು ಜಾತಿಯಾಗಿ 75.27 ಲಕ್ಷದಷ್ಟಿದೆ. ಪರಿಶಿಷ್ಟ ಜಾತಿಯವರ ಸಂಖ್ಯೆಯ 1 ಕೋಟಿಗೂ ಹೆಚ್ಚಿದ್ದು, ಈ ಸಮುದಾಯವರನ್ನು ಬಿಟ್ಟರೆ ಏಕ ಜಾತಿಯಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಮುಸ್ಲಿಂ ಸಮುದಾಯವರೇ ಆಗಿದ್ದಾರೆ. ಹೀಗಾಗಿ ಮೀಸಲಾತಿ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ.

17ಕ್ಕೆ ಜಾತಿಗಣತಿ ಭವಿಷ್ಯ?

ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ (ಜಾತಿ ಗಣತಿ) ಕೊನೆಗೂ ‘ಮೋಕ್ಷ’ ಸಿಗುವ ಲಕ್ಷಣಗಳು ಕಾಣಿಸಿದ್ದು, ಇದೇ 17ರ ಗುರುವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ಭವಿಷ್ಯ ನಿರ್ಧಾರವಾಗಲಿದೆ.

prajaprabhat

Recent Posts

ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಇಲ್ಲದೆ ಸಾವಿರಾರು ವಿಧ್ಯಾರ್ಥಿ ಮತ್ತು ಪಾಲಕರಿಗೆ ತುಂಬಾ ಟೆನ್ಷನ್.!

2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್  ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…

31 minutes ago

ಹಂದ್ರಾಳ ಗ್ರಾಮದಲ್ಲಿ ಹೆಸರು ಬೆಳೆಯ ಕ್ಷೇತೋತ್ಸವ

ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…

48 minutes ago

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…

1 hour ago

ಇಫ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ, ರೈತ-ವಿಜ್ಞಾನಿ ಚರ್ಚಾಗೋಷ್ಠಿ

ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…

3 hours ago

ಆಗಸ್ಟ್ 11ರಂದು ಕೊಪ್ಪಳದಲ್ಲಿ ಯೂರಿಯ ರಸಗೊಬ್ಬರದ ವಿತರಣೆ

ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…

4 hours ago

ಅತಿಥಿ ಉಪನ್ಯಾಸಕರ ನೇಮಕ ಅರ್ಜಿ ಆಹ್ವಾನ

ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…

6 hours ago