ಬೆಂಗಳೂರು.13.ಜೂನ್ .25:- ರಾಜ್ಯ ಸರ್ಕಾರಿ ನೌಕರರಿಗೆ 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
(1) ರಲ್ಲಿ ಓದಲಾದ 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ-146 ರಲ್ಲಿ ಶ್ರವಣ ಸಂಜೀವಿನಿ ಯೋಜನೆಯಡಿ ಮಕ್ಕಳಲ್ಲಿ ಕಂಡುಬರುವ ಶ್ರವಣ ದೋಷವನ್ನು ಆರಂಭದಲ್ಲಿಯೇ ಗುರುತಿಸಿ ಕಾಕ್ಷಿಯಾರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ಹಾಗೂ ಇಂಪ್ಲಾಂಟ್‌ಗಳ ಬಿಡಿ ಭಾಗಗಳ ನಿರ್ವಹಣೆ, ದುರಸ್ತಿ ಮತ್ತು ಬದಲಾವಣೆ ಮಾಡಲು ರೂ.12.00 ಕೋಟಿ ಒದಗಿಸಲಾಗುವುದು ಎಂದು ಘೋಷಿಸಲಾಗಿರುತ್ತದೆ.
(2) ರಲ್ಲಿ ಓದಲಾದ ಏಕ-ಕಡತದಲ್ಲಿ ಪ್ರಸ್ತುತ ನಡೆಯುತ್ತಿರುವ ಯೋಜನೆಯನ್ನು ಮುಂದುವರೆಸಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಯೋಜನೆಯನ್ನು ಮರು ವಿನ್ಯಾಸಗೊಳಿಸಿದ್ದು, ಈ ಕೆಳಕಂಡ ಪ್ರಮುಖ ವೈಶಿಷ್ಟ್ಯ ಒಳಗೊಂಡ ಯೋಜನೆಯ ಅನುಷ್ಠಾನಗೊಳಿಸಲು ಅನುಮೋದನೆ ನೀಡುವಂತೆ ಪ್ರಸ್ತಾಪಿಸಲಾಗಿದೆ.
1. ಎರಡು ವರ್ಷದವರೆಗಿನ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಿರ್ಬಂಧಿಸುವುದು, ಕೆಲವು ಅತೀ ಅಗತ್ಯವಿರುವ ಉನ್ನತ ಮಟ್ಟದ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದ ಪ್ರಕರಣ ಹೊರತುಪಡಿಸಿ
2. ಸಾಮಾನ್ಯವಾಗಿ ಕಾಕ್ಷಿಯಾರ್ ಇಂಪ್ಲಾಂಟ್ ಅವಧಿಯು 4 ವರ್ಷಗಳ ಸಮಗ್ರ ಕನಿಷ್ಠ ಖಾತರಿ ಮತ್ತು 8-10 ವರ್ಷಗಳ ಒಟ್ಟು ಅವಧಿಯನ್ನು ಒಳಗೊಂಡಿರುವ ವಿಸ್ತ್ರತ ಖಾತರಿ.
3. ಒಟ್ಟು ಖಾತರಿ ಅವಧಿಯಲ್ಲಿ ಸುರುಳಿಗಳು ಮತ್ತು ಬ್ಯಾಟರಿಗಳಂತಹ ಬಿಡಿ ಭಾಗಗಳನ್ನು ಬದಲಾಯಿಸಿ ಒದಗಿಸುವುದು.
4. ಒಟ್ಟು ಖಾತರಿ ಅವಧಿಯಲ್ಲಿ ಪೊಸೆಸರ್ಗಗಳ ಬದಲಿಗಾಗಿ ಭಾಗಶ: ಬೆಂಬಲವನ್ನು ಒದಗಿಸಲು
5. ಪ್ರತಿ ಪ್ರಕರಣಕ್ಕೂ ಅಗತ್ಯತೆಗಳ ಪ್ರಕಾರ AVT ಚಿಕಿತ್ಸೆಯನ್ನು 3 ವರ್ಷಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಸ್ತರಿಸಲು.
6. ಆರಂಭಿಕವಾಗಿ 18 ತಿಂಗಳ ವಯಸ್ಸಿನೊಳಗೆ ಗುರುತಿಸಲಾದ ಮಕ್ಕಳಿಗೆ ದ್ವಿಪಕ್ಷೀಯ ಕಾಕ್ಷಿಯರ್ ಇಂಪ್ಲಾಂಟ್‌ಗಳನ್ನು ಒದಗಿಸಲು ಅನುಮತಿಸಲಾಗುವುದು, ಕಾಕ್ಲಿಯರ್ ಇಂಪ್ಲಾಂಟ್‌ಗಳ ಹೆಚ್ಚುವರಿ ಇಂಪ್ಲಾಂಟ್ ವೆಚ್ಚವನ್ನು ಮಗುವಿನ ಕುಟುಂಬವು ಭರಿಸಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ ಆದರೆ ಹೆಚ್ಚುವರಿ ಶಸ್ತ್ರಚಿಕಿತ್ಸೆಯ
ವೆಚ್ಚವನ್ನು ಸರ್ಕಾರವು ನೀಡುವ ಕಾರ್ಯವಿಧಾನದ ವೆಚ್ಚದಲ್ಲಿ SAST ಮೂಲಕ ಭರಿಸಲು
7. ಸದರಿ ಯೋಜನೆಯನ್ನು ಕಟ್ಟುನಿಟ್ನಾದ ಕಾರ್ಯಕ್ಷಮತೆ ಷರತ್ತುಗಳ ಅಡಿಯಲ್ಲಿ ಎಂಪನೇಲ್ ಮಾಡಲಾದ ಆಸ್ಪತ್ರೆಗಳಲ್ಲಿ ಜಾರಿಗೊಳಿಸಲು
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…