ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ. ಪ್ರದರ್ಶನಕ್ಕಾಗಿ ಮಾಧ್ಯಮ ಪತ್ರಿಕಾ ಫೋಟೊಗ್ರಾಫರ್‌ಗಳಿಂದ ಅರ್ಜಿ  ಆಹ್ವಾನ.!


ಬೀದರ.06.ಫೆಬ್ರುವರಿ.25:-ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾಚಿತ್ರಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಿದೆ.


ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೊದಲ ಮೂರು ಛಾಯಾಚಿತ್ರಗಳಿಗೆ ಕ್ರಮವಾಗಿ ರೂ. 35,000 ರೂ. 25,000 ರೂ. ಹಾಗೂ 15,000 ರೂ. ನಗದು ಬಹುಮಾನ ನೀಡಲಾಗುವುದು. ಆಯ್ದ ಅತ್ಯುತ್ತಮ ಛಾಯಾಚಿತ್ರಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್ ತಿಂಗಳಲ್ಲಿ ಅಕಾಡೆಮಿ ವತಿಯಿಂದ ಏರ್ಪಡಿಸಲಾಗುವ ಸುದ್ದಿ ಛಾಯಾಗ್ರಹಣ ಕುರಿತ ಕಾರ್ಯಾಗಾರದ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಇರಿಸಲಾಗುವುದು.


ಸ್ಪರ್ಧೆಯ ಷರತ್ತುಗಳು: ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, ದಿನಾಂಕ:01-01-2024 ರಿಂದ 31-01-2025 ರ ಅವಧಿಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಪ್ರತಿ ಸುದ್ದಿ ಛಾಯಾಚಿತ್ರ ಗ್ರಾಹಕರು ತಾವೇ ಚಿತ್ರಿಸಿರುವ ಎರಡು ಸುದ್ದಿ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.


ಸುದ್ದಿ ಛಾಯಾಚಿತ್ರಗಳನ್ನು ಚಿತ್ರಿಸಿರುವುದಕ್ಕೆ ಯಾವುದೇ ಭೌಗೋಳಿಕ ಪರಿಮಿತಿ ಇರುವುದಿಲ್ಲ. ಪ್ರತಿ ಸ್ಪರ್ಧಿಯೂ ಅವರು ಸುದ್ದಿ ಛಾಯಾಚಿತ್ರಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಸಂಪಾದಕರಿoದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಅಥವಾ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪತ್ರಕರ್ತರಿಗಾಗಿ ನೀಡುವ ಮಾಧ್ಯಮ ಮಾನ್ಯತಾ ಕಾರ್ಡ ಹೊಂದಿರುವವರು ಅದರ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಲಗತ್ತಿಸಬೇಕು.

ಛಾಯಾಚಿತ್ರಗಳ ಮೇಲೆ ಹೆಸರು, ಶೀರ್ಷಿಕೆ ಹಾಗೂ ವಾಟರ್ ಮಾರ್ಕ್ಗಳು ಇರಬಾರದು. ಸ್ಪರ್ಧೆಗೆ ಕಳಿಸುವ ಛಾಯಾಚಿತ್ರಗಳ ಅಂದರೆ ಡಿಜಿಟಲ್ ಇಮೇಜ್‌ಗಳನ್ನು ಜೆಪಿಇಜಿ ಪಾಮ್ರ‍್ಯಾಟ್  (JPEG format)  ನಲ್ಲಿ ಮಾತ್ರ ಸಲ್ಲಿಸಬೇಕು.


ಪ್ರದರ್ಶನಕ್ಕೆ ಆಯ್ಕೆಯಾಗುವ ಛಾಯಾಚಿತ್ರಗಳನ್ನು  20”x30”    ಅಳತೆಯಲ್ಲಿ ಮುದ್ರಣ ಮಾಡಿಸಬೇಕಾಗಿರುವುದರಿಂದ ನೀವು ಕಳಿಸುವ ಇಮೇಜ್‌ಗಳು 20”x 30” ಅಳತೆಯ 300 ಡಿಪಿಐ ನಲ್ಲಿದ್ದು ಕನಿಷ್ಠ 5 ಎಮ್‌ಬಿ ಗಾತ್ರದಲ್ಲಿರಬೇಕು.


ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಸ್ಪರ್ಧೆಗೆ ಸ್ವೀಕರಿಸಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಸುದ್ದಿ ಛಾಯಾಚಿತ್ರಗಳು ಸಹಜವಾಗಿರಬೇಕು. ಚಿತ್ರದಲ್ಲಿನ ಯಾವುದೇ ಭಾಗವನ್ನು ತೆಗೆಯುವುದಾಗಲಿ ಅಥವಾ ಸೇರಿಸುವುದಾಗಲಿ ಮಾಡಿರಬಾರದು.


ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಛಾಯಾಗ್ರಾಹಕರು  mediaacademy.karnataka.gov.in ವೆಬ್‌ಸೈಟ್‌ನಲ್ಲಿ ಇರುವ ನಿಗದಿತ ಅರ್ಜಿಯನ್ನು  Download  ಮಾಡಿಕೊಂಡು ಭರ್ತಿಮಾಡಿ, ತಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಇಮೇಜ್‌ಗಳನ್ನು  photo.karnatakamediaacademy@gmail.com ಇ-ಮೇಲ್ ವಿಳಾಸಕ್ಕೆ ಫೆಬ್ರವರಿ 15, 2025 ರಂದು ಸಂಜೆ 5 ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು. ನಂತರ ಬಂದ ಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.


ಸ್ಪರ್ಧೆಗೆ ಬಂದಿರುವ ಛಾಯಾಚಿತ್ರಗಳನ್ನು ಪ್ರಶಸ್ತಿಗೆ ಹಾಗೂ ಪ್ರದರ್ಶನಕ್ಕೆ ಆಯ್ಕೆ ಮಾಡಲು ಸುದ್ದಿ ಛಾಯಾಗ್ರಹಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮೂವರು ತೀರ್ಪುಗಾರರಿದ್ದು ಅವರು ತೆಗೆದುಕೊಂಡ ತೀರ್ಮಾನವೇ ಅಂತಿಮವಾಗಿರುತ್ತದೆ.


ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448227768 ಹಾಗೂ 9449245980 ನ್ನು ಸಂಪರ್ಕಿಸಬಹುದು ಎಂದು ಮಾಧ್ಯಮ ಅಕಾಡೆಮಿಚಿiÀÄ ಕಾರ್ಯದರ್ಶಿ ಸಹನಾ ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ಉತ್ತರ ಪ್ರದೇಶದಲ್ಲಿ ಪ್ರವಾಹದ ಅಬ್ಬರ: ಹಲವು ಜಿಲ್ಲೆಗಳಲ್ಲಿ ಗಂಗಾ, ಯಮುನಾ ನದಿಗಳು ಅಪಾಯದ ಮಟ್ಟ ದಾಟಿವೆ.

ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…

8 hours ago

ಭಾವನಗರ-ಅಯೋಧ್ಯಾ ಸಾಪ್ತಾಹಿಕ ರೈಲಿಗೆ ರೈಲ್ವೆ ಸಚಿವರು ಹಸಿರು ನಿಶಾನೆ ತೋರಿಸಿದರು.

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…

8 hours ago

ರಷ್ಯಾದ ಕುರಿಲ್ ದ್ವೀಪಗಳಲ್ಲಿ 6.8 ತೀವ್ರತೆಯ ಭೂಕಂಪನ

ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…

8 hours ago

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಶ್ರೀ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…

8 hours ago

ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ,

ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…

8 hours ago

600 ವರ್ಷಗಳ ನಂತರ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಸ್ಫೋಟಗೊಂಡು, 4 ಕಿ.ಮೀ ಎತ್ತರಕ್ಕೆ ಬೂದಿ ಸುರಿಯುತ್ತಿದೆ.

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…

9 hours ago