ರಾಜ್ಯದ ಶಾಲೆಗಳಲ್ಲಿ ‘RTE’ ಅಡಿ ಪ್ರವೇಶಾತಿ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು.26.ಮೇ.25:- ರಾಜ್ಯದ ಶಾಲೆಗಳಲ್ಲಿ RTE Right to Education ಅಡಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಹಾಗೂ ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು 2012 ರಿಂದ ಜಾರಿಗೆ ಬಂದಿರುತ್ತದೆ.

ಈ ಕಾಯ್ದೆಯ ಪ್ರಕಾರ ಶಿಕ್ಷಣವು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿರುತ್ತದೆ. ಎಲ್ಲಾ ಮಕ್ಕಳಿಗೂ ಗುಣಾತ್ಮಕ ಶಿಕ್ಷಣವನ್ನು ಒದಗಿಸುವುದು ಸರ್ಕಾರದ, ಪೋಷಕರ ಮತ್ತು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. 6-14 ವಯೋಮಾನದ ಎಲ್ಲಾ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು, ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗುವುದು ಹಾಗೂ ದಾಖಲಾದ ಎಲ್ಲಾ ಮಕ್ಕಳು ಶಾಲೆಯಲ್ಲಿ ಉಳಿಯಬೇಕು ಎನ್ನುವುದು ಶಿಕ್ಷಣ ಹಕ್ಕು ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.

2024-25 ನೇ ಸಾಲಿನಲ್ಲಿ ಮೊಬೈಲ್ ಆಪ್ ಮೂಲಕ RDPR, UDD ಹಾಗೂ BBMP ವತಿಯಿಂದ ನಡೆಸಲಾದ ಮನೆ-ಮನೆ ಸಮೀಕ್ಷೆಯ ವರದಿಯನ್ನು ಜಿಲ್ಲೆಯ ಎಲ್ಲಾ OoSC Nodal ಅಧಿಕಾರಿಗಳು ನೀಡಿರುವ ಮೊಬೈಲ್ ಸಂಖ್ಯೆಗೆ link ಮಾಡಿ down load option https://childrensurvey.karnataka.gov.in/web/Signin ಅನ್ನು ໖໖. link ನಲ್ಲಿ ಶಾಲೆಯಿಂದ ಹೊರಗುಳಿದ ಹಾಗೂ ದಾಖಲಾಗದ ಮಕ್ಕಳ ಸಮೀಕ್ಷೆ ಮಾಹಿತಿ ಪಡೆದು ಸಮೀಕ್ಷೆಯಲ್ಲಿ ಲಭ್ಯವಿರುವ ಅಂಕಿ-ಅಂಶಗಳನ್ನು ಮತ್ತೊಮ್ಮೆ SATS/UDISE ಮಾಹಿತಿಯೊಂದಿಗೆ ಮರು ಪರಿಶೀಲಿಸುವುದು.

ಶಾಲೆಯಿಂದ ಹೊರಗುಳಿದ ಹಾಗೂ ಶಾಲೆಗೆ ದಾಖಲಾದ ಎಲ್ಲಾ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರುವುದು ದಾಖಲಾತಿ ಆಂದೋಲನದ ಮುಖ್ಯ ಉದ್ದೇಶವಾಗಿದೆ. ಇದರೊಂದಿಗೆ ಅರ್ಹ ವಯೋಮಾನದ ಎಲ್ಲಾ ಮಕ್ಕಳನ್ನು ಗುರುತಿಸಿ, ನೇರವಾಗಿ ಶಾಲೆಗೆ ದಾಖಲಿಸುವುದು ಹಾಗೂ ಶಾಲೆಗೆ ಬರುತ್ತಿರುವ ಎಲ್ಲಾ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಂದೇ ಶಾಲೆಗೆ ಹಾಜರಾಗುವಂತೆ ಮಾಡುವ ಉದ್ದೇಶದಿಂದ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ.

ಈ ಸಂಬಂಧ ಉಪನಿರ್ದೇಶಕರು(ಆಡಳಿತ ಮತ್ತು ಅಭಿವೃದ್ಧಿ) ರವರು ವೈಯಕ್ತಿಕ ಕಾಳಜಿ ವಹಿಸಿ ಈ ಕೆಳಕಂಡಂತೆ ವಿಶೇಷ ದಾಖಲಾತಿ ಆಂದೋಲನಕ್ಕೆ ಸಿದ್ಧತೆ ಮಾಡಿಕೊಂಡು ಕಾರ್ಯನಿರ್ವಹಿಸುವುದು ಎಂದು ಸೂಚಿಸಲಾಗಿದೆ.

prajaprabhat

Recent Posts

ವಿದ್ಯುತ್ ಕಂಬ ಬಿದ್ದು ಲೈನ್‌ಮ್ಯಾನ್ ಮೃತ ಪ್ರಕರಣ: ಆರೋಪಿಗೆ ಶಿಕ್ಷೆ

ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್‌ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.…

5 hours ago

ಗೃಹಲಕ್ಷ್ಮೀ 3ನೇ ಕಂತಿನ ಹಣ ಬಿಡುಗಡೆ- ರೆಡ್ಡಿ ಶ್ರೀ ನಿವಾಸ

ಕೊಪ್ಪಳ.07.ಆಗಸ್ಟ್.25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ…

6 hours ago

ಕಮ್ಯುನಿಟಿ ಮೊಬಿಲೈಜರ್ ಹುದ್ದೆಗೆ ಅರ್ಜಿ ಆಹ್ವಾನ

ರಾಯಚೂರು.07.ಆಗಸ್ಟ್.25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ 2 ವರ್ಷಗಳ ಅವಧಿಗೆ ಸ್ವಚ್ಛ ಭಾರತ್ ಮಿಷನ್ 2.0ನ ಐಇಸಿ…

6 hours ago

ಡಿ.ದೇವರಾಜು ಅರಸು ಜಯಂತಿ: ಅರ್ಥಪೂರ್ಣ ಆಚರಣೆಗೆ ಸೂಚನೆ

ರಾಯಚೂರು.07.ಆಗಸ್ಟ್.25: ಜಿಲ್ಲೆಯಲ್ಲಿ ಆಗಸ್ಟ್ 20 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು…

6 hours ago

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಕೆಪಿಎಂಇ, ಪಿಸಿಪಿಎನ್‌ಡಿಟಿ ಕಾಯ್ದೆಗಳ ಮಾರ್ಗಸೂಚಿ ಪಾಲನೆಯಾಗಲಿ

ರಾಯಚೂರು.07.ಆಗಸ್ಟ್ .25: ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ…

6 hours ago

ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ<br>ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿoದ ಆರಂಭ.

ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ ಶಿಸ್ತಿನ ಸಿಪಾಯಿಗಳ ಶಾಲೆಯಂತಾದ ರಾಯಚೂರಿನ ಕೃಷಿ ವಿಜ್ಞಾನಿಗಳ…

6 hours ago