ರಾಜ್ಯದ ನ್ಯಾಯಾಲಯ’ಗಳಲ್ಲಿ 566 ಸಿಬ್ಬಂದಿ ಹುದ್ದೆ ಖಾಲಿ

ಕಲಬುರಗಿ.31.ಮೇ.25:- ಕಲ್ಯಾಣ ಕರ್ನಾಟಕದ ಭಾಗದ ನ್ಯಾಯಾಲಯಗಳಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ನ್ಯಾಯಾಲಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುವ ಸಿಬ್ಬಂದಿ ನ್ಯಾಯಾಂಗ, ವಕೀಲರು ಹಾಗೂ ಕಕ್ಷಿದಾರರ ನಡುವೆ ಸಂಪರ್ಕ ಸೇತುವೆಯಾಗಿರುತ್ತಾರೆ. ಆದ ಕಾರಣ ಸಿಬ್ಬಂದಿ ಕೊರತೆ ಪ್ರಕರಣಗಳ ವಿಲೇವಾರಿ ಮೇಲೆ ಪರಿಣಾಮ ಬೀರುತ್ತಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ನ್ಯಾಯಾಲಯಗಳಿಗೆ ಒಟ್ಟು 2,893 ವಿವಿಧ ಹಂತದ ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಆ ಪೈಕಿ 566 ಹುದ್ದೆಗಳು ಖಾಲಿ ಇವೆ.

ಬೀದರ್ ಜಿಲ್ಲೆಗೆ ಒಟ್ಟು 481 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 156 ಹುದ್ದೆಗಳು ಖಾಲಿ ಇವೆ. ಬಳ್ಳಾರಿ-ವಿಜಯನಗರಕ್ಕೆ ಮಂಜೂರಾದ 679 ಹುದ್ದೆಗಳಲ್ಲಿ 133 ಹುದ್ದೆಗಳು ಖಾಲಿ ಇವೆ. ಕಲಬುರಗಿ ಜಿಲ್ಲೆಗೆ ಮಂಜೂರಾದ 722 ಹುದ್ದೆಗಳಲ್ಲಿ 91 ಹುದ್ದೆ ಖಾಲಿ ಇವೆ. ಕೊಪ್ಪಳದಲ್ಲಿ 331 ಹುದ್ದೆಗಳ ಪೈಕಿ 63, ರಾಯಚೂರು 434 ಹುದ್ದೆಗಳಲ್ಲಿ 80 ಹುದ್ದೆ ಮತ್ತು ಯಾದಗಿರಿಯಲ್ಲಿ 246 ಹುದ್ದೆಗಳ ಪೈಕಿ 43 ಹುದ್ದೆಗಳು ಖಾಲಿ ಇವೆ.

ಸಿಬ್ಬಂದಿಯ ಪಾತ್ರ ಏನು?: ನ್ಯಾಯಾಲಯಗಳಲ್ಲಿರುವ ಸಿಬ್ಬಂದಿ ಪ್ರಕರಣ ಪರಿಶೀಲನೆ, ಕಡತ ನಿರ್ವಹಣೆ ಹಾಗೂ ನೋಟಿಸ್ ಸಿದ್ಧಪಡಿಸುವುದು, ಅದನ್ನು ರವಾನಿಸುವುದು ಹಾಗೂ ಇತರ ಕೆಲಸಗಳನ್ನು ಮಾಡುತ್ತಾರೆ.

ನೇಮಕಾತಿ ಪ್ರಕ್ರಿಯೆ ಹೇಗೆ?: ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡುತ್ತದೆ. ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ನೇತೃತ್ವದ ನೇಮಕಾತಿ ಪ್ರಾಧಿಕಾರವು ಉಳಿದ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಕೆಲವು ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲಾಗುತ್ತದೆ.

prajaprabhat

Recent Posts

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

4 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

4 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

4 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

4 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

4 hours ago

ಆಗಸ್ಟ್ 7ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…

4 hours ago