ಬೆಂಗಳೂರು.23.ಜೂನ್.25:- ರಾಜ್ಯದ್ಯಂತ್ 6,598 ಗ್ರಾಮ ಪಂಚಾಯತ’ಗಳಲಿ ಗ್ರಾಮ ಗ್ರಂಥಾಲಯಗಳು ಮಂಜೂರು. ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ರಾಜ್ಯಾಧ್ಯಂತ ಹೊಸದಾಗಿ 6,598 ‘ಗ್ರಾಮ ಗ್ರಂಥಾಲಯ’ಗಳನ್ನು ತೆರೆಯಲು ಮುಂದಾಗಿದೆ.
ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ನೀಡುವ ಹಣಕಾಸು ನೆರವು ಯೋಜನೆಯ (ಎಸ್.ಎ.ಎಸ್.ಸಿ.ಐ) ‘ಮಕ್ಕಳು ಮತ್ತು ಹದಿಹರೆಯದವರಿಗಾಗಿ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ’ ಕಾರ್ಯಕ್ರಮದಡಿ 31 ಜಿಲ್ಲೆಗಳಲ್ಲಿ ‘ಗ್ರಾಮ ಗ್ರಂಥಾಲಯ’ಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಪ್ರತಿ ಗ್ರಂಥಾಲಯಕ್ಕೆ ತಲಾ ₹2 ಲಕ್ಷ ಮೊತ್ತದ ಪುಸ್ತಕಗಳನ್ನು ‘ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ’ದಿಂದ ಖರೀದಿಸಲಾಗಿದ್ದು, ಆಯಾ ಜಿಲ್ಲಾ ಪಂಚಾಯಿತಿಗಳಿಗೆ ಪುಸ್ತಕಗಳು ಸರಬರಾಜಾಗಿವೆ. 2,040 ಕನ್ನಡ, 627 ಇಂಗ್ಲಿಷ್ ಹಾಗೂ 20 ಕಲಿಕಾ ವಿಜ್ಞಾನ ಪುಸ್ತಕಗಳು ಸೇರಿ ಒಟ್ಟು 2,687 ಕೃತಿಗಳು ಪ್ರತಿ ಗ್ರಂಥಾಲಯಕ್ಕೆ ಶೀಘ್ರದಲ್ಲೇ ಹಂಚಿಕೆಯಾಗಲಿವೆ.
ಮಕ್ಕಳ ಕತೆ, ವಿಜ್ಞಾನ ಮತ್ತು ವೈಜ್ಞಾನಿಕ ಚಟುವಟಿಕೆ, ಜೀವನ ಚರಿತ್ರೆ, ಮಕ್ಕಳು ಮತ್ತು ಸಮುದಾಯಕ್ಕಾಗಿ ಚಟುವಟಿಕೆಗಳು ಸೇರಿದಂತೆ ವೈವಿಧ್ಯಮಯ ವಿಷಯಗಳ ಪುಸ್ತಕಗಳು ಗ್ರಂಥಾಲಯಗಳಿಗೆ ಸಿಗಲಿವೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಮತ್ತು ಡಿಜಿಟಲ್ ಕೌಶಲ ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಗ್ರಂಥಾಲಯಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಒದಗಿಸುತ್ತದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.
ಕಂಪ್ಯೂಟರ್, ಪೀಠೋಪಕರಣ:
ನೂತನ ಗ್ರಾಮ ಗ್ರಂಥಾಲಯಗಳಿಗೆ ₹1 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಮತ್ತು ಯುಪಿಎಸ್ ಹಾಗೂ ₹1 ಲಕ್ಷ ವೆಚ್ಚದಲ್ಲಿ ಪಿಠೋಪಕರಣಗಳ ಸೌಲಭ್ಯಗಳು ದೊರಕಲಿವೆ. ಪೀಠೋಪಕರಣಗಳನ್ನು ಖರೀದಿಸಲು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ.
ಕಟ್ಟಡಗಳ ನವೀಕರಣ:
‘ಹೊಸ ಗ್ರಂಥಾಲಯಗಳಿಗೆ ಗುರುತಿಸಲಾದ ಕಟ್ಟಡಗಳಿಗೆ ಅಗತ್ಯವಿರುವ ದುರಸ್ತಿ, ನವೀಕರಣ, ವಿದ್ಯುತ್ ಮತ್ತು ಇಂಟರ್‌ನೆಟ್ ಸಂಪರ್ಕ, ಕುಡಿಯುವ ನೀರು, ಫ್ಯಾನ್ ಸೇರಿ ಮೂಲಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ಅಥವಾ ಲಭ್ಯವಿರುವ ಇತರೆ ಅನುದಾನಗಳನ್ನು ಬಳಸಿ ಕಲ್ಪಿಸಬೇಕು’ ಎಂದು ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಆದೇಶಿಸಿದ್ದಾರೆ.
– ಲಕ್ಷ್ಮಿ ಪಿ. ಉಪ ಕಾರ್ಯದರ್ಶಿ (ಅಭಿವೃದ್ಧಿ) ಮಂಡ್ಯ ಜಿಪಂಮಂಡ್ಯ ಜಿಲ್ಲೆಯಲ್ಲಿ 257 ಕಟ್ಟಡಗಳನ್ನು ಗುರುತಿಸಿದ್ದೇವೆ. ಪುಸ್ತಕ ಮತ್ತು ಪೀಠೋಪಕರಣಗಳನ್ನು ಶೀಘ್ರದಲ್ಲೇ ಗ್ರಾಮ ಗ್ರಂಥಾಲಯಗಳಿಗೆ ಹಂಚಿಕೆ ಮಾಡುತ್ತೇವೆ.
ಬೀದರ.14 ಆಗಸ್ಟ್.25:- 'ಹರ ಘರ ತಿರಂಗಾ" ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.…
ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ…
ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…
ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…
ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…
ಬಂಧುಗಳೇ, ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…