ರಾಜ್ಯದಲ್ಲಿ40 ಸಾವಿರ ಚಿತ್ರಕಲಾ ಶಿಕ್ಷಕರ ಹುದ್ದೆ ಖಾಲಿ: ಎಸ್‌.ಸಿ.ಪಾಟೀಲ

ಕಲಬುರಗಿ.08.ಫೆ.25:- ರಾಜ್ಯದ ಕಲಬುರಗಿಯೆಲ್ಲಿ ಜಿಲ್ಲಾ ಪ್ರಥಮ ದೃಶ್ಯಕಲಾ ಸಾಹಿತ್ಯ ಸಮ್ಮೇಳನಅಖಿಲ ಭಾರತ ಸಾಹಿತ್ಯ ಸಮ್ಮೇಳನದಂತೆ ಅಖಿಲ ಭಾರತ ಲಲಿತ ಕಲಾ ಸಮ್ಮೇಳನವೂ ನಡೆಯಲಿ’ ಎಂದು ಕಲಬುರಗಿ ಜಿಲ್ಲಾ ಪ್ರಥಮ ದೃಶ್ಯಕಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಕರ್ನಾಟಕ ಲಲಿತಕಲಾ ವಿವಿಯ ವಿಶ್ರಾಂತ ವಿಶೇಷಾಧಿಕಾರಿ ಎಸ್‌.ಸಿ.ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡಭವನದಲ್ಲಿ ನಡೆದ ಕಲಬುರಗಿ ಜಿಲ್ಲಾ ಪ್ರಥಮ ದೃಶ್ಯಕಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ದೃಶ್ಯಕಲೆಯೂ ಸಾಹಿತ್ಯದ ಒಂದು ಪ್ರಕಾರವಾಗಿದ್ದು, 1902ರಲ್ಲಿ ಪಠ್ಯಕ್ರಮದಲ್ಲಿ ಚಿತ್ರಕಲೆಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಯಿತು.

ಆದರೆ ಕಲಾಶಾಲೆಗಳು ಮುಚ್ಚಿಹೋಗುತ್ತಿರುವುದು ಬೇಸರದ ಸಂಗತಿ. 40 ಸಾವಿರ ಚಿತ್ರಕಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಬೇಕು. ಜಿಲ್ಲೆಗೊಂದು ಗ್ಯಾಲರಿ, ಎಲ್ಲ ವಿವಿಗಳಲ್ಲಿ ಅಧ್ಯಯನ ವಿಭಾಗ, ರಾಷ್ಟ್ರೀಯ ಟ್ರಸ್ಟ್ ನಿರ್ಮಾಣವಾಗಬೇಕು. ಪ್ರತಿ ವರ್ಷ ದೃಶ್ಯಕಲಾ ಸಾಹಿತ್ಯ ಸಮ್ಮೇಳನ, ಶಿಲ್ಪಕಲಾ ಸಾಹಿತ್ಯ ಸಮ್ಮೇಳನ, ವೃತ್ತಿರಂಗಭೂಮಿ ಸಮ್ಮೇಳನಗಳೂ ಆಯೋಜನೆಗೊಳ್ಳಲಿ’ ಎಂದು ಆಶಿಸಿದರು.

ದೃಶ್ಯಕಲಾ ಸಿರಿ, ದೃಶ್ಯಕಲಾ ದೀಪ್ತಿ ಕೃತಿಗಳು ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶರಣಬಸವ ವಿವಿ ದೃಶ್ಯಕಲಾ ವಿಭಾಗದ ಗೌರವ ಡೀನ್‌ ಶಾಂತಲಾ ನಿಷ್ಠಿ, ‘ಸಮಾಜದ ವಿಕಾಸದಲ್ಲಿ ಕಲೆಗಳ ಪಾತ್ರ ಬಹುಮುಖ್ಯ. ಎಲ್ಲ ಕಲೆಗಳ ಪೋಷಣೆ ಅತ್ಯವಶ್ಯ’ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ, ಬೆಂಬಲ ಕೊಡುವ ಉದ್ದೇಶದಿಂದ ಪರಿಷತ್ತು ಇಂತಹ ಸಮ್ಮೇಳನಗಳನ್ನು ಆಯೋಜಿಸುತ್ತಿದೆ’ ಎಂದು ಹೇಳಿದರು.

ಬಣ್ಣ ಬೆಳಕು ಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ‘ಚಿತ್ರ ಕಲಾವಿದರ ಜೀವನ ಬಣ್ಣದ ಬದುಕಾಗಿದೆ. ಆ ಬಣ್ಣದ ಬದುಕು ಸಾರ್ಥಕವಾಗಲಿ’ ಎಂದು ಆಶಿಸಿದರು. ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ಶಿವಾನಂದ ಭಂಟನೂರ, ಮೋಹನರಾವ ಪಂಚಾಳ ಮಾತನಾಡಿದರು.

ಕಾವ್ಯ ಕುಂಚ ಗಾಯನ ಗೋಷ್ಠಿಯಲ್ಲಿ ಸಾಹಿತಿ ಸ್ವಾಮಿರಾವ ಕುಲಕರ್ಣಿ, ಶಕುಂತಲಾ ಪಾಟೀಲ, ಸಂತೋಷಕುಮಾರ ಕರಹರಿ, ಪರ್ವೀನ್ ಸುಲ್ತಾನಾ ಅವರ ಕವನಗಳಿಗೆ ಶ್ರೀಧರ ಹೊಸಮನಿ ರಾಗ ಸಂಯೋಜನೆ ಮಾಡಿದರು.

ನಾಗರಾಜ ಕುಲಕರ್ಣಿ, ಬಿ.ಎನ್.ಪಾಟೀಲ, ಕವಿತಾ ಕಟ್ಟೆ, ಸೂರ್ಯಕಾಂತ ನಂದೂರ, ರಜನಿ ತಳವಾರ ಚಿತ್ರ ಬಿಡಿಸಿದರು.

ಸಮಾರೋಪದಲ್ಲಿ ಅಕಾಡೆಮಿ ಸದಸ್ಯ ಬಸವರಾಜ ಎಲ್ ಜಾನೆ, ಎಸ್.ಎಂ.ನೀಲಾ, ಬಸವರಾಜ ತೋಟದ ಮಾತನಾಡಿದರು. ದಿ ಆರ್ಟ್ ಇಂಟಿಗ್ರೇಷನ್ ಫೈನ್ ಆರ್ಟ್‌ ಕಾಲೇಜಿನ ಪ್ರಿನ್ಸಿಪಾಲ್ ಎಂ.ಎಚ್. ಬೆಳಮಗಿ ಮೆರವಣಿಗೆಗೆ ಚಾಲನೆ ನೀಡಿದರು.

ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರೆಹಮಾನ್ ಪಟೇಲ್, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ, ಬಸವರಾಜ ಉಪ್ಪಿನ, ಶಿವಾನಂದ ಕೊಪ್ಪದ, ಮಂಜುಳಾ ಜಾನೆ, ರಾಜಶೇಖರ ಶಾಮಣ್ಣ, ರಮೇಶ ಡಿ.ಬಡಿಗೇರ ಸೇರಿ ಹಲವರು ಪಾಲ್ಗೊಂಡಿದ್ದರು.

ಬಸವರಾಜ ಕಲೆಗಾರ ಲಲಿತಕಲಾ ಅಕಾಡೆಮಿ ಸದಸ್ಯ ಚಿತ್ರಕಲೆ ಸಮಾಜದಲ್ಲಿ ಬಹುತೇಕ ನಿರ್ಲಕ್ಷ್ಯಕ್ಕೊಳಗಾದ ಕ್ಷೇತ್ರ. ಚಿತ್ರ ಬದುಕಿನ ಸಂಗತಿಗಳನ್ನು ಅನಾವರಣಗೊಳಿಸುವಂಥಹದು.

ಚಿತ್ರಕಲೆ ಮತ್ತು ಸಾಹಿತ್ಯ ಪೂರಕವಾಗಿವೆ’ಬಹು ದಿನಗಳ ಬೇಡಿಕೆಯಾಗಿರುವ ಲಲಿತಕಲಾ ವಿಶ್ವವಿದ್ಯಾಲಯ ಕಲಬುರಗಿ ಜಿಲ್ಲೆಯಲ್ಲಿಯೇ ಸ್ಥಾಪಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಪತ್ರಕರ್ತ ಶ್ರೀನಿವಾಸ ಸಿರನೂರಕರ್ ಒತ್ತಾಯಿಸಿದರು.

ದೃಶ್ಯಕಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ‘ಈ ಭಾಗದಲ್ಲಿ ಅನೇಕ ಕಲಾವಿದರದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಮುಂದಿನ ಪೀಳಿಗೆಗೆ ಕಲೆಗಳ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಉಳಿಸಿ ಬೆಳೆಸಲು ವಿಶ್ವವಿದ್ಯಾಲಯಗಳ ಅವಶ್ಯಕತೆಯಿದೆ. ಅಂತರರಾಷ್ಟ್ರೀಯ ಕಲಾವಿದ ಡಾ. ಎಸ್.ಎಂ. ಪಂಡಿತ ಅವರ ಹೆಸರಿನಲ್ಲಿ ರಾಷ್ಟಮಟ್ಟದ ಪ್ರಶಸ್ತಿ ರಾಜ್ಯ ಸರ್ಕಾರ ಸ್ಥಾಪಿಸಬೇಕು’ ಎಂದು ಅವರು ಮನವಿ ಮಾಡಿದರು.ಕಲಬುರಗಿಯಲ್ಲಿಯೇ ಲಲಿತಕಲಾ ವಿವಿ ಸ್ಥಾಪಿತವಾಗಲಿ’

Source: prajavani

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

3 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

8 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

9 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

9 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

9 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

10 hours ago