ಬೆಂಗಳೂರು: ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಬಾಕಿಯಾಗಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಅರೆಮನಸ್ಸಿನಿಂದ ಸಿದ್ಧತೆ ಆರಂಭಿಸಿದೆ. ಹೀಗಾಗಿ ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವ ಸಾಧ್ಯತೆ ಕುರಿತು ಆಡಳಿತ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ. ರಾಜ್ಯದಲ್ಲಿ ಒಟ್ಟು ಜಿಲ್ಲಾ ಪಂಚಾಯತ 31. ಮತ್ತು ಜಿಲ್ಲಾ ಪಂಚಯತ್ ಒಟ್ಟು ಸ್ಥಂಗಳು 1083 ಹಾಗೂ ತಾಲೂಕಾ ಪಂಚಾಯತಿಗಳ 239. ಸ್ಥಾಂಗಳು 3903 ಇವೇ.
ಚುನಾವಣೆ ವಿಚಾರ ನ್ಯಾಯಾಲಯಗಳ ಮುಂದಿರುವುದರಿಂದ ಅಲ್ಲಿಯೇ ಇತ್ಯರ್ಥವಾಗಬೇಕು. ಚುನಾವಣೆ ನಡೆಸಲು ನಾವಂತೂ ತಯಾರಾಗಿದ್ದೇವೆ’ ಎಂದು
ಸಿಎಂ ಸಿದ್ದರಾಮಯ್ಯ ಎರಡು ದಿನದ ಹಿಂದಷ್ಟೇ ಪ್ರತಿಕ್ರಿಯಿಸಿದ್ದರು. ಇದೀಗ ಜನವರಿ 29ರಂದು ಸರ್ಕಾರದ ನಿಲುವು ಸ್ಪಷ್ಟವಾಗಲಿದೆ. ಅಂದು ಸರ್ಕಾರ ತಾನು ಕೈಗೊಂಡಿರುವ ಕ್ರಮವನ್ನು ನ್ಯಾಯಾಲಯದ ಮುಂದೆ ಸ್ಪಷ್ಟಪಡಿಸಲಿದೆ.
ಈ ಬೆಳವಣಿಗೆಗೆ ಪೂರಕವಾಗಿ, ಚುನಾವಣೆ ಸಂಬಂಧ ಕೋರ್ಟ್ನಲ್ಲಿ ಇರುವ ಪ್ರಕರಣ ಇತ್ಯರ್ಥಕ್ಕೆ ತಕ್ಷಣವೇ ಗಮನ ನೀಡುವುದು, ಚುನಾವಣೆಗೆ ಪೂರಕ ವಾತಾವರಣ ನಿರ್ವಿುಸುವುದು, ಬಜೆಟ್ನಲ್ಲಿ ಈ ನಿಟ್ಟಿನಲ್ಲಿ ಆದ್ಯತೆ, ಮುಖ್ಯವಾಗಿ ಮಾರ್ಚ್ನಲ್ಲಿ ಬಜೆಟ್ ಅಧಿವೇಶನ ಮುಗಿದ ಒಂದು ವಾರದ ಬಳಿಕ ಚುನಾವಣೆ ಪ್ರಕ್ರಿಯೆಗೆ ಅವಕಾಶ ಆಗುವಂತೆ ಮಾಡುವ ಕುರಿತು ಸಮಾಲೋಚನೆ ನಡೆದಿವೆ ಎಂದಕಾಂಗ್ರೆಸ್ನ ಉನ್ನತ ಮೂಲಗಳು ತಿಳಿಸಿವೆ.
ಅವಧಿ ಮುಗಿದರೂ ಕಳೆದ ನಾಲ್ಕು ವರ್ಷಗಳಿಂದ ತಾಲೂಕು, ಜಿಲ್ಲಾ ಪಂಚಾಯಿತಿ ಮತ್ತು ಬಿಬಿಎಂಪಿ ಚುನಾವಣೆ ನಡೆದಿಲ್ಲ ಎಂದು ಚುನಾವಣಾ ಆಯೋಗ ನ್ಯಾಯಾಂಗ ಉಲ್ಲಂಘನೆ ಪ್ರಕರಣ ದಾಖಲಿಸಿತ್ತು. ಕೋರ್ಟ್ನಲ್ಲಿ ವಿಚಾರಣೆಗೆ ಬಂದಾಗ ಸರ್ಕಾರ ಕಾಲಾವಕಾಶ ಕೋರಿತ್ತು. ಜತೆಗೆ ಚುನಾವಣೆ ನಡೆಸಲು ಮೀಸಲು ಮತ್ತು ಕ್ಷೇತ್ರ ಭೌಗೋಳಿಕ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ; ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಹೇಳಿಕೊಂಡಿತ್ತು. ಇದೀಗ ಈ ಕಾರ್ಯ ಮುಗಿದಿದೆ. ಅಧಿಸೂಚನೆ ಪ್ರಕಟವಾಗಬೇಕಾಗಿದೆ. ಈ ನಡುವೆ ಆಯೋಗ ಪುನಃ ಕೋರ್ಟ್ ಕದ ತಟ್ಟಿದ್ದು ಮತ್ತೊಮ್ಮೆ ನಿರ್ದೇಶನ ನೀಡುವಂತೆ ಕೋರಿದೆ. ಜನವರಿ 29ರಂದು ಈ ಪ್ರಕರಣ ವಿಚಾರಣೆಗೆ ಬರುತ್ತಿದ್ದು, ಅಲ್ಲಿ ಸರ್ಕಾರ ತನ್ನ ಅಂತಿಮ ನಿರ್ಧಾರ ತಿಳಿಸಲಿದೆ.
ನಿರ್ಧಾರಕ್ಕೆ ಕಾರಣ?: ಮಾರ್ಚ್- ಏಪ್ರಿಲ್ನಲ್ಲಿ ಬಹುತೇಕ ಪರೀಕ್ಷೆ ಮುಗಿಯುತ್ತವೆ. ಏಪ್ರಿಲ್ನಲ್ಲಿ ಚುನಾವಣೆ ಘೋಷಣೆಯಾದರೆ ಮೇ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬಹುದು, ಹೀಗಾಗಿ ಮೇ ಪ್ರಶಸ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಚುನಾವಣೆ ದಿನಾಂಕ ನಿಗದಿ ಮಾಡುವುದು ಆಯೋಗವಾದರೂ ಈ ಅವಧಿಗೆ ಪೂರಕ ವಾತಾವರಣವನ್ನು ಸರ್ಕಾರ ಸೃಷ್ಟಿಸಿಕೊಡಬೇಕೆಂಬ ತೀರ್ವನಕ್ಕೆ ಬರಲಾಗಿದೆ.
ಮೀಸಲು ಪ್ರಕಟ ಬಾಕಿ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮೀಸಲು ಹಂಚಿಕೆ ಪ್ರಕ್ರಿಯೆ ನಡೆಯಬೇಕು. ಮೀಸಲು ಪಟ್ಟಿ ಸಿದ್ಧವಾಗಿದ್ದು ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಂದಿದೆ. ಮುಖ್ಯಮಂತ್ರಿ ಸೂಚನೆ ಬರುತ್ತಿದ್ದಂತೆ ಸಚಿವರ ಸಹಿ ಬೀಳಲಿದ್ದು, ಕರಡು ಪ್ರಕಟಣೆ ಹೊರಬೀಳಲಿದೆ. ನಂತರ ಆಕ್ಷೇಪಣೆಗೆ ಅವಕಾಶ ನೀಡಲಾಗುತ್ತದೆ. ಅಂತಿಮ ಪಟ್ಟಿ ಪ್ರಕಟಿಸಿದ ಬಳಿಕ ಆಯೋಗವು ಆ ಪಟ್ಟಿಯನ್ನು ಆಧರಿಸಿ ಪ್ರಕ್ರಿಯೆ ನಡೆಸಲು ಒಂದೂವರೆ ತಿಂಗಳು ಕಾಲಾವಕಾಶ ತೆಗೆದುಕೊಂಡು ನಂತರದಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡಲಿ
ಪಂಚಾಯತಿಗಳ ಚುನಾವಣೆ ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ ಇದು ನನ್ನ ಅಭಿಪ್ರಾಯ.
ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…
ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…
ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…
ಬೀದರ.02.ಆಗಸ್ಟ್.25:- ಬೀದರ್ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…
ಹೊಸ ದೆಹಲಿ.02.ಆಗಸ್ಟ್.25:- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿ ಚಿತ್ರ 12ನೇ ಫೇಲ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂದು…