ಬೆಂಗಳೂರು.05.ಮಾರ್ಚ.25:- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 2,76,386 ಹುದ್ದೆಗಳು ಖಾಲಿ ಇವೆ. ಒಟ್ಟು 7,80,748 ಮಂಜೂರಾದ ಹುದ್ದೆಗಳ ಪೈಕಿ 5,04,362 ಹುದ್ದೆಗಳು ಮಾತ್ರ ಭರ್ತಿ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಗೆ ಮಂಗಳವಾರ ತಿಳಿಸಿದ್ದಾರೆ.
ಕಾಂಗ್ರೆಸ್‌ನ ರವಿಕುಮಾರಗೌಡ (ಗಣಿಗ) ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ, ‘ಎ’ ದರ್ಜೆಯ 16,017, ‘ಬಿ’ ದರ್ಜೆಯ 16,734, ‘ಸಿ’ ದರ್ಜೆಯ 1,66,021 ಮತ್ತು ‘ಡಿ’ ದರ್ಜೆಯ 77,614 ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಒದಗಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅತ್ಯಧಿಕ 70,727 ಹುದ್ದೆಗಳು ಖಾಲಿ ಇವೆ.
ಈ ಇಲಾಖೆಯಲ್ಲಿ ಒಟ್ಟು 2,84,086 ಹುದ್ದೆಗಳ ಮಂಜೂರಾತಿ ಇದೆ.
ಈ ಪೈಕಿ ‘ಸಿ’ ದರ್ಜೆ ಒಂದರಲ್ಲೇ 60,219 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ.
ಗೃಹ ಇಲಾಖೆಯಲ್ಲಿ 26,168,
ಉನ್ನತ ಶಿಕ್ಷಣ ಇಲಾಖೆಯಲ್ಲಿ 13,227,
ಕಂದಾಯ ಇಲಾಖೆಯಲ್ಲಿ 11,145,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 10,898,
ಪಶುಸಂಗೋಪನಾ ಇಲಾಖೆಯಲ್ಲಿ 10,755,
ಸಮಾಜ ಕಲ್ಯಾಣ ಇಲಾಖೆಯಲ್ಲಿ 9,980,
ಆರ್ಥಿಕ ಇಲಾಖೆಯಲ್ಲಿ 9,536,
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು.11.ಆಗಸ್ಟ್.25:-ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಗುರುತಿಸಲಾಗಿರುವ ಅನರ್ಹ ಪಡಿತರದಾರರನ್ನು ಎಪಿಎಲ್‍ಗೆ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಲಾಗುವಾದು ಅಂದು…
ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತಯುವಕರು…
ಕೊಪ್ಪಳ.11.ಆಗಸ್ಟ್.25: 2025-26 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…
ರಾಯಚೂರು.11.ಆಗಸ್ಟ್.25: ಇಲ್ಲಿನ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್…
ಬೆಂಗಳೂರು.11.ಆಗಸ್ಟ್.25:- ರಾಜ್ಯದ ಸರ್ಕಾರಿ ಹಾಗೂ ಅನುದಾನಿತ್ ಶಾಲೆಗಳ SSLC ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಾಜ್ಯ…
ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ…