ರಾಜ್ಯದಲ್ಲಿ ಮೈನಡುಗಿಸುವ ಚಳಿ! 18 ಜಿಲ್ಲೆಗಳಲ್ಲಿ ಉಷ್ಣಾಂಶ ತೀವ್ರ ಕುಸಿತ.!

05.ಜಿ.25.ಬೆಂಗಳೂರು: ಭಾರತೀಯ ಹವಾಮಾನ ಇಲಾಖೆಯು ವರದಿ ಪ್ರಕಾರ ಬೆಂಗಳೂರು ನಗರ ಸೇರಿ ರಾಜ್ಯದ 18 ಜಿಲ್ಲೆಗಳಲ್ಲಿ ಉಷ್ಣಾಂಶ ಕುಸಿತದಿಂದ ಚಳಿ ತೀವ್ರಗೊಂಡಿದೆೆ. ಬೀದರ್, ಕಲಬುರಗಿ, ವಿಜಯಪುರದಲ್ಲಿ ಮುಂದಿನ 2 ದಿನ ಭಾರಿ ಶೀತ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಕೋಲ್ಡ್ ವೇವ್ ಎಚ್ಚರಿಕೆ ಕೊಟ್ಟಿದೆ.

ಮಳೆ ಕ್ಷೀಣವಾಗಿದ್ದ ಬೆನ್ನಲ್ಲೇ ವಾಡಿಕೆಗಿಂತ ಅಧಿಕವಾಗಿ ಕಾಣಿಸಿಕೊಂಡಿರುವ ಚಳಿ ತಿಂಗಳಿಡೀ ಮುಂದುವರಿಯಲಿದೆ. ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವುದು, ಲಾ ನಿನಾ ಪರಿಣಾಮ ಮುಂಗಾರು, ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು, ಮಣ್ಣು ಮತ್ತು ವಾತಾವರಣದಲ್ಲಿ ಹೆಚ್ಚು ತೇವಾಂಶ ಇರುವುದೂ ಸೇರಿ ಇತರ ಕಾರಣಗಳಿಂದ ವಾಡಿಕೆಗಿಂತ ಅಧಿಕ ಚಳಿ ಇದೆ.

ಹಗಲು ಮತ್ತು ರಾತ್ರಿ ವೇಳೆ ತಣ್ಣನೆ ಗಾಳಿ ಬೀಸುತ್ತಿದ್ದು, ಜನರಿಗೆ ಮೈ ನಡುಗುವ ಅನುಭವವಾಗುತ್ತಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಪ್ರಬಲವಾಗಿ ಶೀತ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾನೆ 4ರಿಂದ 7ಗಂಟೆ ಅವಧಿಯಲ್ಲಿ ಚಳಿ ತೀವ್ರತೆ ಹೆಚ್ಚಿರಲಿದೆ.

ಕನಿಷ್ಠ ತಾಪಮಾನ ಕುಸಿತ: ಕನಿಷ್ಠ ತಾಪಮಾನದಲ್ಲಿ ವಿಜಯಪುರ 9, ಹಾಸನ, 10.3, ಬೆಳಗಾವಿ 10.4, ಚಿಂತಾಮಣಿ 10.4, ಧಾರವಾಡ 10.6, ಹಾವೇರಿ 11, ದಾವಣಗೆರೆ 11, ಚಾಮರಾಜನಗರ 11.1, ಚಿಕ್ಕಮಗಳೂರು 11.2, ಬೀದರ್ 11.5, ಬಾಗಲಕೋಟೆ 11.8, ಮಂಡ್ಯ 11.9, ರಾಯಚೂರು 12, ಬೆಂಗಳೂರು 12.6, ಶಿವಮೊಗ್ಗ 12.8, ಕಲಬುರಗಿ 13.6 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಸರಾಸರಿ 3ರಿಂದ 6 ಡಿ.ಸೆ. ಉಷ್ಣಾಂಶ ಕುಸಿತವಾಗಿದೆ. ಕೆಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿಯೂ 1-2 ಡಿ.ಸೆ. ಇಳಿಮುಖ ವಾಗಿದೆ. ಈ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಚಳಿ ಅಧಿಕವಾಗಿದ್ದು, ಸಂಜೆ, ಮುಂಜಾನೆ ಇಬ್ಬನಿ ಬೀಳುತ್ತಿದೆ.

ಇಂದಿನ ವಾರ್ಧಿ ಪ್ರಕಾಶ ತೀವ್ರ ಚಳಿ ಗಾಳಿ ಬೀಸುವ ಸಂಭಾವನೆ ಇದೆ.

ರಾಜಧಾನಿಯಲ್ಲಿ 14 ವರ್ಷ ಬಳಿಕ ತೀವ್ರ ಚಳಿ ಕಾಣಿಸಿಕೊಂಡಿದೆ. ಶನಿವಾರ ಕನಿಷ್ಠ ತಾಪಮಾನ ಬೆಂಗಳೂರಿನಲ್ಲಿ 12.6 ಡಿ.ಸೆ.ಉಷ್ಣಾಂಶ ದಾಖಲಾಗಿದೆ. 2011ರ ಡಿ.24ರ ರಾತ್ರಿ 12.8 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಜನವರಿಯಲ್ಲಿ ಕನಿಷ್ಠ ತಾಪಮಾನದಲ್ಲಿ ವಾಡಿಕೆಯಂತೆ 16 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಆದರೆ, ಈ ಬಾರಿ ಸೈಕ್ಲೋನ್ ಬಂದು ಹೋಗಿರುವುದು ಸೇರಿ ವಿವಿಧ ಕಾರಣಗಳಿಂದ ನಗರದಲ್ಲಿ ವಾಡಿಕೆಗಿಂತ 2-3 ಡಿ.ಸೆ.ಉಷ್ಣಾಂಶ ಕುಸಿದಿದೆ.

ರಾಜ್ಯದಲ್ಲಿ ಚಳಿ ಹೆಚ್ಚು ಆಗಿನ ಕಾರಣಕ್ಕೆ ಹೆಚ್ಚಿದ ವಿದ್ಯುತ್ ಬೇಡಿಕೆ…ರಾಜ್ಯದಲ್ಲಿ ಎಲ್ಲೆಡೆ ತಾಪಮಾನ ಕುಸಿತ ಕಂಡಿದ್ದರೂ ವಿದ್ಯುತ್ ಬಳಕೆ ಮಾತ್ರ ಕುಗ್ಗಿಲ್ಲ. ಕೃಷಿ-ವಾಣಿಜ್ಯ ಬಳಕೆ ಹೆಚ್ಚಳದಿಂದ ಚಳಿಗಾಲದಲ್ಲೂ ವಿದ್ಯುತ್ ಬೇಡಿಕೆ ಹೆಚ್ಚಳ ಕಂಡಿದ್ದು, ಕೆಪಿಸಿ (ಕರ್ನಾಟಕ ಪವರ್ ಕಾಪೋರೇಷನ್) ಒತ್ತಡಕ್ಕೆ ಸಿಲುಕಿದೆ.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಸಾಮಾನ್ಯವಾಗಿ ಬೇಸಿಗೆ ಆರಂಭದಿಂದ ಏರಿಕೆ ಕಾಣುವುದು ಸಹಜ. ಆದರೆ, ಈ ಸಲ ಅದಕ್ಕೂ ಮುನ್ನವೇ ಹೆಚ್ಚಳ ಕಂಡುಬರುತ್ತಿದೆ.

ಬೇಸಿಗೆ ದಿನಗಳಲ್ಲಿ ಸಾಮಾನ್ಯವಾಗಿ ವಿದ್ಯುತ್ ಬೇಡಿಕೆ 13,000 ಮೆವಾ ಮೀರಿರುತ್ತದೆ. ಚಳಿಗಾಲದಲ್ಲಿ ಎಂಟರಿಂದ ಒಂಬತ್ತು ಸಾವಿರ ಬೇಡಿಕೆ ಇರುವುದು ಸಾಮಾನ್ಯ. ಆದರೆ, ಈಗಲೇ ಬೇಡಿಕೆ 15700 ಮೆವಾವರೆಗೆ ಬಂದು ತಲುಪಿದೆ.

ಹೀಗಾಗಿ ಉತ್ಪಾದನೆ ಪ್ರಮಾಣ ಹೆಚ್ಚಿಸುವ ಒತ್ತಡಕ್ಕೆ ಕೆಪಿಸಿಗೆ ಸಿಲುಕಿಸಿದೆ. ರಾಜ್ಯದ ಥರ್ಮಲ್, ಜಲವಿದ್ಯುತ್, ಪವನ ಹಾಗೂ ಸೌರ ವಿದ್ಯುತ್ ಮೂಲಗಳಿಂದ ಸದ್ಯ 14,500 ಮೆವಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಥರ್ಮಲ್ನಿಂದ 2100 ಮೆವಾ, ಜಲವಿದ್ಯುತ್ ಘಟಕಗಳಿಂದ 1200 ಮೆವಾ ದೊರೆಯುತ್ತಿದೆ. ಸೌರ ವಿದ್ಯುತ್ನಿಂದ 6500 ಮೆವಾ, ಪವನ ವಿದ್ಯುತ್ನಿಂದ 1700 ಮೆವಾ ಲಭ್ಯವಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ತಾಂತ್ರಿಕ ನೆಪವೊಡ್ಡಿ ವಿದ್ಯುತ್ ಕಡಿತಗೊಳಿಸುವ ಕಾರ್ಯಕ್ಕೆ ಎಸ್ಕಾಂಗಳು ಮುಂದಾಗಿವೆ. ಕೆಲ ತಾಲೂಕು ಕೇಂದ್ರಗಳಲ್ಲೂ ಆಗಾಗ್ಗೆ ವಿದ್ಯುತ್ ಕಡಿತಗೊಳಿಸುವುದು ನಡೆದಿದೆ. ರಾಜ್ಯದಲ್ಲಿ ಹಿಂಗಾರು ಮಳೆ ಅಬ್ಬರ ಕಾಣುತ್ತಿಲ್ಲ. ಹೀಗಾಗಿ ರೈತರು ಬೆಳೆ ಸಂರಕ್ಷಣೆಗೆ ಪಂಪ್ಸೆಟ್ ಮೊರೆ ಹೋಗಿದ್ದು, ವಾಣಿಜ್ಯ ಬಳಕೆ ಪ್ರಮಾಣವೂ ಏರಿಕೆಯಾಗಿದೆ.

prajaprabhat

Recent Posts

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…

2 hours ago

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…

3 hours ago

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

3 hours ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

4 hours ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

4 hours ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

5 hours ago