ಬೆಂಗಳೂರು.15.ಜುಲೈ.25: ರಾಜ್ಯ ಸರ್ಕಾರ ಈಗಾಗಲೇ ರಾಜ್ಯದ ಜನತೆಗೆ ಸರ್ಕಾರ ಶಾಕ್ ನೀಡಲಿದೆ ಶೀಘ್ರವೇ ವಿದ್ಯುತ್ ದರ ಏರಿಕೆ ಆಗುವ ಸಾಧ್ಯತೆ ಇದೆ. ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಈ ನಡುವೆಯೇ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಎಸ್ಕಾಂಗಳ ಆದಾಯದ ಅಂತರವನ್ನ ಸರಿದೂಗಿಸಲು ಜನರ ಜೇಬು ಸುಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ದರವನ್ನ ಹೆಚ್ಚಿಸುವ ಮೂಲಕ ತಮ್ಮ 4,620 ಕೋಟಿ ರೂಪಾಯಿಗಳ ಆದಾಯದ ಅಂತರವನ್ನು ಸರಿದೂಗಿಸಲು ವಿದ್ಯುತ್ ಸರಬರಾಜು ನಿಗಮ ನಿಯಮಿತ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ (ಕೆಇಆರ್‌ಸಿ) ತಿದ್ದುಪಡಿ ಕೋರಿದೆ ಎಂದು ತಿಳಿದುಬಂದಿದೆ.
ತಮ್ಮ ಆದಾಯದ ಅಂತರವನ್ನು ಸರಿ ಮಾಡಿಕೊಳ್ಳಲು ಎಸ್ಕಾಂಗಳು ಮಾರ್ಚ್ 23, 2025ರಂದು ಮೊದಲ ಬಾರಿಗೆ ಕೆಇಆರ್‌ಸಿಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದವು. ಈ ಕುರಿತ ಚರ್ಚೆಯನ್ನು ಜುಲೈ 8ರಂದು ನಡೆಸಲಾಯಿತು. 30 ದಿನಗಳೊಳಗೆ ಎಲ್ಲಾ ಪಾಲುದಾರರಿಂದ ಸಾರ್ವಜನಿಕ ಅಭಿಪ್ರಾಯವ ಸಂಗ್ರಹಿಸಲು ಮತ್ತು ಅಫಿಡವಿಟ್ ಮೂಲಕ ಆಯೋಗಕ್ಕೆ ವಿವರಗಳನ್ನು ಸಲ್ಲಿಕೆ ಮಾಡಲು ವಿದ್ಯುತ್ ಸರಬರಾಜು ನಿಗಮ ನಿಯಮಿತಕ್ಕೆ ಅನುಮತಿ ನೀಡಿದೆ.
ಆದರೆ, ಈ ರೀತಿಯ ಪರಿಷ್ಕರಣೆ ಕೋರಿರುವುದು ಇದೇ ಮೊದಲು, ಯಾಕಂದ್ರೆ ಸರ್ಕಾರಕ್ಕೆ ಬಾಕಿ ಹಣವನ್ನ ತೆರವುಗೊಳಿಸಲು ಕಷ್ಟವರ ಆಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿ ಆಗಿದೆ.
ಇನ್ನು ಖ್ಯಾತ ಇಂಧನ ತಜ್ಞ ಎಂ.ಜಿ. ಪ್ರಭಾಕರ್ ಅವರು ಮಾತನಾಡಿ, ಕಾನೂನು ಎಸ್ಕಾಂಗಳು ಅಂತಹ ತಿದ್ದುಪಡಿಗಳನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ ಅಂತಾ ವರದಿಯಾಗಿದೆ. ಸರ್ಕಾರವು ಐಪಿ ಸೆಟ್‌ಗಳಿಗೆ ನೀಡಿರುವ ಸಬ್ಸಿಡಿ ಹೆಚ್ಚಾಗಿದೆ. ಇದನ್ನು ಎಸ್ಕಾಂಗಳು ನಿರ್ವಹಿಸಲು ಕಷ್ಟಕರ ಆಗಿದೆ. ಆದ್ದರಿಂದ ಆದಾಯವನ್ನು ಹೊಂದಿಸಲು, ಎಸ್ಕಾಂಗಳು ಗ್ರಾಹಕರ ಮೇಲೆ ಹೆಚ್ಚಿನ ಸುಂಕ ಹೇರಲು ಬಯಸುತ್ತಿದ್ದಾರೆ.
ಗೃಹ ಜ್ಯೋತಿ ಯೋಜನೆಗೂ ಸಹ ಕ್ರಮೇಣ ಅದೇ ರೀತಿ ಮಾಡುವ ಸಾಧ್ಯತೆಗಳಿವೆ. 2025-26ನೇ ಸಾಲಿಗೆ ಐಪಿ ಸೆಟ್‌ಗಳ ಅನುಮೋದಿತ ಮಾರಾಟವು 24,868.10 ಮಿಲಿಯನ್ ಯೂನಿಟ್‌ಗಳು ಆಗಿದ್ದು, ಅವುಗಳಿಗೆ ಪ್ರತಿ ಯೂನಿಟ್‌ಗೆ 8.30 ರೂಪಾಯಿಗಳಿಗೆ ವಿದ್ಯುತ್ ಪೂರೈಸುವ ಜವಾಬ್ದಾರಿಯನ್ನ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಗೂ ಸಹ ಕ್ರಮೇಣ ಅದೇ ರೀತಿ ಮಾಡುವ ಸಾಧ್ಯತೆಗಳಿವೆ. 2025-26ನೇ ಸಾಲಿಗೆ ಐಪಿ ಸೆಟ್‌ಗಳ ಅನುಮೋದಿತ ಮಾರಾಟವು 24,868.10 ಮಿಲಿಯನ್ ಯೂನಿಟ್‌ಗಳು ಆಗಿದ್ದು, ಅವುಗಳಿಗೆ ಪ್ರತಿ ಯೂನಿಟ್‌ಗೆ 8.30 ರೂಪಾಯಿಗಳಿಗೆ ವಿದ್ಯುತ್ ಪೂರೈಸುವ ಜವಾಬ್ದಾರಿಯನ್ನ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…