ಬೀದರ.20.ಜೂನ್.25:- ರಕ್ತದಾನವೇ ಶ್ರೇಷ್ಠದಾನವಾಗಿದ್ದು, ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಜೀವವನ್ನು ಕಾಪಾಡಬಹುದಾಗಿದೆ ಎಂದು ಎಸ್.ವಿ.ಇ.ಟಿ ವೀರಭದ್ರೇಶ್ವರ ಹೋಮಿಯೊಪತಿಕ ಮೆಡಿಕಲ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಇಂದ್ರಜಿತ ಶಾ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಸ್ಪತ್ರೆ ಬೀದರ, ಶ್ರೀ ವಈರಭದ್ರೇಶ್ವರ ಹೋಮಿಯೋಪತಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹುಮನಾಬಾಧ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ವೀರಭದ್ರೇಶ್ವರ ಹೋಮಿಯೊಪತಿಕ ಮೆಡಿಕಲ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆಂದು ತಪ್ಪು ತಿಳುವಳಿಕೆ ಇದೆ. ಆದರೆ ರಕ್ತದಾನ ಮಾಡುವುದರಿಂದ ಆರೋಗ್ಯವನ್ನು ಉತ್ತಮರೀತಿಯಲ್ಲಿ ಕಾಪಾಡಬಹುದಾಗಿದೆಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅನೀಲಕುಮಾರ ಚಿಂತಾಮಣಿ ಮಾತನಾಡಿ, ಯುವಜನತೆಯು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಜೊತೆಗೆ ಎಲ್ಲರಿಗೂ ಅರಿವು ನೀಡಿ, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಹುಮನಾಬಾದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮುಜತಾಬ ಹುಸೈನರವರು ರಕ್ತದಾನ ಮಾಡುವಾಗ ಅನುಸರಿಸಬೇಕಾದ ಮಾರ್ಗಸೂಚಿಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಾದ ಫಾದರ ವಿಕ್ಟೋರಿಯಾರವರು ಎ+ ಗ್ರೂಪನವರಾಗಿದ್ದು (28 ಬಾರಿ), ಆಕಾಶ ತಂದೆ ಸಿದ್ರಾಮೇಶ್ವರರವರು ಎಬಿ+ ಗ್ರೂಪನವರಾಗಿದ್ದು (18 ಬಾರಿ), ಸಾತ್ವಿಕಾ, ಒ+ಗ್ರೂಪನವರಾಗಿದ್ದು (02 ಬಾರಿ), ವೀರಭದ್ರೇಶ್ವರ ಹೋಮಿಯೊಪತಿಕ ಮೆಡಿಕಲ ಕಾಲೇಜಿನ ವಿದ್ಯಾರ್ಥಿಗಳಾದ ಆರಿಫ- ಎ+ಗ್ರೂಪನವರಾಗಿದ್ದು (04 ಬಾರಿ) ಮತ್ತು ಇಬ್ರಾಹಿಂ – ಬಿ+ಗ್ರೂಪನವರಾಗಿದ್ದು (04 ಬಾರಿ) ರಕ್ತದಾನ ಮಾಡಿರುವುದಕ್ಕಾಗಿ ಹಾಗೂ ಸ್ವಯಂ ಪ್ರೇರಿತವಾಗಿ ಮುಂದಾಳ್ವವನ್ನು ವಹಿಸಿ ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ಲಕ್ಷ್ಮಿಕಾಂತ ಹಿಂದೊಡ್ಡಿ, ಶಾಂತಕುಮಾರ ಆಕಾಶ ತಂದೆ ಸಿದ್ರಾಮೇಶ್ವರ ಆಯೋಜಕರಿಗೆ ಅಭಿನಂದನಾ ಪತ್ರವನ್ನು ನೀಡಿ, ಸನ್ಮಾನ ಮಾಡಲಾಯಿತ್ತು. ಶಿಬಿರದಲ್ಲಿ 50 ರಕ್ತದಾನಿಗಳು ರಕ್ತದಾನವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಎಸ್.ವಿ.ಇ.ಟಿ ಶ್ರೀ. ವೀರಭದ್ರೇಶ್ವರ ಹೋಮಿಯೊಪತಿಕ ಮೆಡಿಕಲ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಇಂದ್ರಜಿತ ಶಾರವರು ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ. ಅನೀಲಕುಮಾರ ಚಿಂತಾಮಣಿರವರು, ಹುಮನಾಬಾದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ನಾಗನಾಥ ಹುಲಸೂರೆ, ಹುಮನಾಬಾದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮುಜತಾಬ ಹುಸೈನರವರು ಪಾಲ್ಗೊಂಡಿದರು.
ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿಯನ್ನು ಐಸಿಟಿಸಿ ಜಿಎಚ್ ಹುಮನಾಬಾದನ ಆಪ್ತ ಸಮಾಲೋಚಕರಾದ ಶ್ರೀಮತಿ. ಗೀತಾ ರೆಡ್ಡಿರವರು ಬೋಧಿಸಿದರು.
ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ನಾಗನಾಥ ಹುಲಸೂರೆ, ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಸೂರ್ಯಕಾಂತ, ಬ್ಲಡ ಬ್ಯಾಂಕ ಕೇಂದ್ರದ ಸಿಬ್ಬಂದಿಯವರು, ವೀರಭದ್ರೇಶ್ವರ ಹೋಮಿಯೊಪತಿಕ ಮೆಡಿಕಲ ಕಾಲೇಜು ಮತ್ತು ಆಸ್ಪತ್ರೆಯ ಉಪನ್ಯಾಸಕರು, ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಸಿಬ್ಬಂದಿಯವರು ಸೇರಿದಂತೆ ಇತರರು ಉಪಸ್ಥಿತರಿದ್ದರು. ನಿರೂಪಣೆಯನ್ನು ಡಾ. ಶ್ವೇತ ಮತ್ತು ವಂದರ್ನಾಪಣೆಯನ್ನು ಡಾ. ಭಾಗ್ಯಶ್ರೀ ನೇರವೇರಿಸಿದರು.
2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…
ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…
ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…
ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…
ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…
ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…