GC NET December 2024: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಯುಜಿಸಿ ನೆಟ್ ಡಿಸೆಂಬರ್ 2024 ಪರೀಕ್ಷೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿದೆ. ನೆಟ್ ಎಗ್ಸಾಮ್ ಬರೆಯಲು ಉದ್ದೇಶಿಸಿರುವವರು ugcnet.nta.ac.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ನೆಟ್ ಎಗ್ಸಾಮ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 10, 2024, ರಾತ್ರಿ 11:50 ಗಂಟೆ
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ: ಡಿಸೆಂಬರ್ 11, 2024, ರಾತ್ರಿ 11:50 ಗಂಟೆ
ಕರೆಕ್ಷನ್ ವಿಂಡೋ ಸಮಯ: ಡಿಸೆಂಬರ್ 12-13, 2024, ರಾತ್ರಿ 11:50 ಗಂಟೆ
ಪರೀಕ್ಷೆ ನಡೆಯುವ ನಗರಗಳು: ಮಾಹಿತಿ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ
ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡುವ ಸಮಯ: ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ
ಪರೀಕ್ಷೆ ದಿನಾಂಕ: ಜನವರಿ 1-19, 2025
ಅರ್ಜಿ ಶುಲ್ಕ ಎಷ್ಟು?
ಜನರಲ್/ ಅನ್‌ರಿಸರ್ವ್ಡ್ ವಿಭಾಗ: 1,150 ರೂ, ಜನರಲ್- ಇಡಬ್ಲ್ಯುಎಸ್, ಒಬಿಸಿ- ಎನ್‌ಸಿಎಲ್‌ಗೆ 600 ರೂ ಮತ್ತು ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ, ತೃತೀಯ ಲಿಂಗ ಅಭ್ಯರ್ಥಿಗಳಿಗೆ 325 ರೂಪಾಯಿ.
ಅರ್ಜಿ ಸಲ್ಲಿಸುವುದು ಹೇಗೆ?
ಯುಜಿಸಿ ನೆಟ್ 2024 ಡಿಸೆಂಬರ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವವರು https://ugcnetdec2024.ntaonline.in/site/login ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಒಬ್ಬರು ಒಂದು ಅರ್ಜಿ ನಮೂನೆ ಭರ್ತಿ ಮಾಡಲು ಮಾರತ್ರ ಅವಕಾಶವಿರುತ್ತದೆ. ಅರ್ಜಿ ಸಲ್ಲಿಸುವ ಹಂತಹಂತದ ಪ್ರಕ್ರಿಯೆ ಈ ಮುಂದೆ ನೀಡಲಾಗಿದೆ.
ಮೊದಲಿಗೆ ugcnet.nta.ac.in ವೆಬ್‌ಸೈಟ್‌ಗೆ ಭೇಟಿ ನೀಡಿ
ಮುಖಪುಟದ ಕೆಳಗೆ ಯುಜಿಸಿ ಅಪ್ಲಿಕೇಷನ್ ಫಾರ್ಮ್ ಲಿಂಕ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ
ನ್ಯೂ ರಿಜಿಸ್ಟ್ರೇಷನ್ ಕ್ಲಿಕ್ ಮಾಡಿ
ಅರ್ಜಿ ನಮೂನೆ ಭರ್ತಿ ಮಾಡಿ.
ಪಾಸ್‌ಪೋರ್ಟ್ ಫೋಟೋಗ್ರಾಫ್, ಸಿಗ್ನೇಚರ್ ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ
ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಕೆ ಮಾಡಿದ ಪ್ರತಿಯನ್ನು ಡೌನ್‌ಲೋಡ್ ಮಾಡಿ
ಹೊಸ ದೆಹಲಿ.09.ಜೂನ್.25:- ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ನಗರದ ಪರಿಸರವನ್ನು ಸುಧಾರಿಸಲು ಈ ಋತುವಿನಲ್ಲಿ 70 ಲಕ್ಷ ಮರಗಳನ್ನು…
ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…
ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…
ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…
ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…
ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…
View Comments
Exm
ಸೂಪರ್