ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಕಡ್ಡಾಯ: ಅತಿಥಿ ಉಪನ್ಯಾಸಕರ ?

ಅತಿಥಿ ಉಪನ್ಯಾಸಕರ ಹುದ್ದೆಗೆ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೂ ಮುನ್ನ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಪಿ) ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆ ನಿಯಮಾವಳಿ ಅನುಸರಿಸುವಂತೆಹೈಕೋರ್ಟ್ ಉನ್ನತ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಆತ್ಮೀಯ ಅತಿಥಿ ಉಪನ್ಯಾಸಕ ಬಂಧುಗಳೇ,


        ನಮ್ಮ ಈ ಸಮಸ್ಯೆಗಳಿಗೆ ನೇರವಾಗಿ ಸರ್ಕಾರಗಳ ಇಬ್ಬಗೆಯ ನೀತಿಯನ್ನು ಅನಿಸರಿಸುವುದರ ಮೂಲಕ ಒಂದು ಸಮಸ್ಯೆಯನ್ನು ಸೃಷ್ಟಿಸಿದರೆ ಮತ್ತೊಂದೆಡೆ ನಮ್ಮಲ್ಲಿ ಇರುವ ನಾಯಕತ್ವದ ಕೊರತೆಯಿಂದಾಗಿ ಅತಿಥಿ ಉಪನ್ಯಾಸಕರ ಸಮಸ್ಯೆ ದಿನೇ ದಿನೇ ಚಟಿಲವಾಗುತ್ತಿದೆ,  2013 ರಿಂದ 2017ರವರೆಗೆ ಬಿ ರಾಜಶೇಖರ್ ಮೂರ್ತಿ ಅವರ ನಾಯಕತ್ವದ ನೇತೃತ್ವವನ್ನು ವಹಿಸಿದಾಗ ಯಾವುದೇ ಸರ್ಕಾರ ಇದ್ದರೂ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಎಲ್ಲರನ್ನ ಸಮಾನ ರೀತಿಯಲ್ಲಿ ನೋಡುವ ಆದೇಶಗಳನ್ನ ಮಾಡಿಸುವಂತಹ ಒಂದು ದೂರ ದೃಷ್ಟಿ ನಾಯಕತ್ವ ನಮ್ಮಲ್ಲಿತ್ತು, ಆದರೆ ನಮ್ಮಲ್ಲಿ ಹುಟ್ಟಿಕೊಂಡ ಕೆಲ ಸಾಂದರ್ಭಿಕ ನಾಯಕರ ಪಿತೂರಿಗಳಿಂದ ನಮ್ಮ ನೇತೃತ್ವವನ್ನು ವಹಿಸಿರುವಂತಹ ಬಿ ರಾಜಶೇಖರ್ ಮೂರ್ತಿ ನಾಯಕತ್ವಕ್ಕೆ ಅನುಮಾನಗಳನ್ನು ವ್ಯಕ್ತಪಡಿಸಿದಾಗ ಅವರು ಸಂಘಟನೆಯಿಂದ ತಟಸ್ಥರಾದರು.


      ಅಲ್ಲಿಂದ ಇಲ್ಲಿಯವರೆಗೆ ಸರ್ಕಾರದ ಒಡೆದು ಆಳುವ ನೀತಿಗಳಿಂದ ಜೊತೆಗೆ ಕಾಲಕಾಲಕ್ಕೆ ಬದಲಾಗುವ ಆದೇಶಗಳಿಂದ ಸರಿಸುಮಾರು 7,000 ಜನ ಕೆಲಸವನ್ನ ಕಳೆದುಕೊಂಡಿದ್ದಾರೆ ಈಗ ನಮ್ಮಲ್ಲಿಯೇ UGC ಮತ್ತೆ NON UGC* ಎಂಬ ಎರಡು ವರ್ಗಗಳು ಸೃಷ್ಟಿಸಿ ನಮ್ಮಲ್ಲಿಯೇ ಭಿನ್ನಾಭಿಪ್ರಾಯಗಳನ್ನ ಮೂಡಿಸಿದ್ದಲ್ಲದೆ, ಯಾರಿಗೂ ಉದ್ಯೋಗದ ಭದ್ರತೆಯಿಲ್ಲದೆ ಸರ್ಕಾರಗಳು ನಮ್ಮನ್ನ ಬೀದಿ ಪಾಲು ಮಾಡುತ್ತಿದೆ.


ಸಂಗಾತಿಗಳೇ ಈಗಲಾದರೂ ಎಚ್ಚೆತ್ತುಕೊಂಡು ಬಿ ರಾಜಶೇಖರ್ ಮೂರ್ತಿ ಅವರನ್ನ ಮತ್ತೆ ಸಂಘಟನೆಯ ವಿಷಯದಲ್ಲಿ ಅವರಿಗೆ ಮನವೊಲಿಸಿ ಪುನರ್ ಸಂಘಟನೆಯನ್ನು ಬಲಪಡಿಸುವ ಪ್ರಯತ್ನಗಳು ಆಗಬೇಕಾಗಿದೆ,


           ಯಾಕೆಂದರೆ ಬಿ ರಾಜಶೇಖರ ಮೂರ್ತಿ ಅವರು ಜಸ್ಟಿಸ್ ನಾಗಮೋಹನ್ ದಾಸ್ ಅವರ ಆಪ್ತರು ಮತ್ತು ನಾಡೋಜ ಬರಗೂರು ರಾಮಚಂದ್ರಪ್ಪನವರ* ಆತ್ಮೀಯರಾಗಿರುವ ಕಾರಣ ನಮಗೆ ಯಾವುದಾದರೂ ಉದ್ಯೋಗದ ಆಸರೆಯ ವರದಿಯನ್ನು ನೀಡಲಿಕ್ಕೆ ಇವರು ಮನಸ್ಸು ಮಾಡಿಸಿದರೆ ಖಂಡಿತವಾಗಿಯೂ ನಮಗೆ ಉದ್ಯೋಗದ ಭದ್ರತೆ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ನಾವೆಲ್ಲರೂ ಸೇರಿ ಆಲೋಚಿಸಬೇಕಿದೆ, ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಯ ನಾಯಕರುಗಳು ಹಾಗೂ ಅತಿಥಿ ಉಪನ್ಯಾಸಕ ಬಂಧುಗಳು ಸಹಕರಿಸಿ ಯೋಚಿಸಿ ಒಂದು ನಿರ್ಣಯಕ್ಕೆ ಬರಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ…


(2013 ರಿಂದ 2017ರವರೆಗೆ ಆಯಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸುವ ಆದೇಶಗಳನ್ನು ಮಾಡಿಸಿದ್ದು  ಅಂದಿನ ಅತಿಥಿ ಉಪನ್ಯಾಸಕರ ನಾಯಕತ್ವವನ್ನು ವಹಿಸಿದ್ದ ಇದೇ ರಾಜಶೇಖರ್ ಮೂರ್ತಿ ಅವರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ)*

ಆಯ್ಕೆ ಇದೆ ನಮ್ಮ ಕೈಯಲ್ಲಿ

prajaprabhat

Recent Posts

ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಈ ಪ್ರಕಾರ ನಡೆಯಲಿದೆ.

ಬೆಂಗಳೂರು.03.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ  ಕಾಲೇಜು ಶಿಕ್ಷಣ ಇಲಾಖೆಯು…

2 hours ago

ಆ.10ರೊಳಗೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ಕುರ್ಚಿ ಬಿಟ್ಟು ಕೆಳಗಿಳಿಯಿರಿ.

ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್‌ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…

3 hours ago

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕಡ್ಡಾಯ- ಡಾ. ಸುರೇಶ ಇಟ್ನಾಳ

ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…

4 hours ago

Free Couching ಅಲ್ಪಸಂಖ್ಯಾತರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…

4 hours ago

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ: ಆಸಕ್ತರು ಭಾಗವಹಿಸಿ

ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…

4 hours ago

ನ್ಯಾಯಾಲಯಗಳಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಸೇವೆ ಪೂರೈಕೆಗೆ ಅರ್ಜಿ ಆಹ್ವಾನ<br>

ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…

4 hours ago