ಯಶಸ್ವಿನಿ ಆರೋಗ್ಯ ವಿಮಾ ಯೋಜ ನೆ’ಯು, ರಾಜ್ಯ ಸರಕಾರ ಜಾರಿಗೆ ತಂದಿದೆ.

ಬೆಂಗಳೂರು.18.ಮೇ.25:-ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿ ರುವ “ಯಶಸ್ವಿನಿ ಆರೋಗ್ಯ ವಿಮಾ ಯೋಜ ನೆ’ಯು ಸಹಕಾರಿ ಸಂಘದ ಲಕ್ಷಾಂತರ ಬಡ ಸದಸ್ಯ ರಿಗೆ ಕೈಗೆಟಕುವ ದರಗಳಲ್ಲಿ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲೂ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.

ಗ್ರಾಮೀಣ ಭಾಗದವರು ಕೇವಲ 500 ರೂ. ಪಾವತಿಸಿ ವಾರ್ಷಿಕ 5 ಲಕ್ಷ ರೂ. ವರೆಗಿನ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ.

ರಾಜ್ಯದಲ್ಲಿ ವಿವಿಧ ಮಾದರಿಯ ಹೊಸ ಚಿಕಿತ್ಸೆಗಳನ್ನು ಒಳಗೊಂಡಿರುವ ಹೈಟೆಕ್‌ ಖಾಸಗಿ ಆಸ್ಪತ್ರೆಗಳು ತಲೆ ಎತ್ತುತ್ತಲೇ ಇವೆ. ಆದರೆ ಗಂಭೀರ ಅನಾರೋಗ್ಯಕ್ಕೆ ಒಳಗಾದ ಬಡ, ಮಧ್ಯಮ ವರ್ಗದವರಿಗೆ ದುಬಾರಿ ಹಣ ತೆತ್ತು ಇಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲಾಗದೆ ಅದೆಷ್ಟೊ ಮಂದಿ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ.

ಈ ಸಮಸ್ಯೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ಯಶಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯಲ್ಲಿ 2024-25ನೇ ಸಾಲಿನಲ್ಲಿ ಇಲ್ಲಿಯವರೆಗೆ 38 ಲಕ್ಷ ಸದಸ್ಯರು ನೋಂದಣಿ ಮಾಡಿಕೊಂಡಿದ್ದು, ಸದಸ್ಯರ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. 2023-24ನೇ ಸಾಲಿನಲ್ಲಿ ನೋಂದಣಿಯಾದ ಸದಸ್ಯರಿಗೆ 2024-25ನೇ ಸಾಲಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 587 ಆಸ್ಪತ್ರೆಗಳಿಗೆ 63.40 ಕೋ. ರೂ. ಮೊತ್ತವನ್ನು ಯಶಸ್ವಿನಿ ಟ್ರಸ್ಟ್‌ನಿಂದ ಪಾವತಿಸಲಾಗಿದೆ.

2022-23ರಲ್ಲಿ 590 ಆಸ್ಪತ್ರೆಗಳಿಗೆ 108.75 ಕೋ. ರೂ. ಪಾವತಿಸಲಾಗಿತ್ತು. 2022-23ರಲ್ಲಿ 48.24 ಲಕ್ಷ ಹಾಗೂ 2023-24 ಸಾಲಿನಲ್ಲಿ 41.51 ಲಕ್ಷ ಸದಸ್ಯರು ಈ ಯೋಜನೆಗೆ ನೋಂದಣಿಯಾಗಿದ್ದಾರೆ.

2,128 ಚಿಕಿತ್ಸಾ ಸೌಲಭ್ಯಗಳು ಲಭ್ಯ
ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂ ಧಿಸಿದ ರೋಗಗಳು, ಕಿವಿ, ಮೂಗು, ಗಂಟಲು, ಕರುಳು, ನರ, ಕಣ್ಣು ಹಾಗೂ ಮೂಳೆ ಸಂಬಂಧಿತ ರೋಗಗಳು, ಹೆರಿಗೆ ಹಾಗೂ ಸ್ತ್ರೀಯರಿಗೆ ಸಂಬಂಧಿ ಸಿದ ಕಾಯಿಲೆಗಳು ಮತ್ತು ಇತರ ಅನುಸೂಚಿತ ಸಾಮಾನ್ಯ ರೋಗಗಳಿಗೆ ಸಂಬಂ ಧಿಸಿ ಒಟ್ಟು 1,650 ಮೂಲ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ. ಜತೆಗೆ 478 ಪೂರಕ ಚಿಕಿತ್ಸೆಗಳಾದ ಐಸಿಯು ಮತ್ತು ಎಚ್‌ಡಿಯು ಚಿಕಿತ್ಸೆಗಳೂ ಸಹಿತ ಒಟ್ಟು 2,128 ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ.

ಯಶಸ್ವಿನಿ ಯೋಜನೆಯು ರಾಜ್ಯದ 700 ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾಸನ, ಹಾವೇರಿ, ಶಿವಮೊಗ್ಗ ಸಹಿತ 21ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಹೊಂದಿದೆ.

5 ಲಕ್ಷ ರೂ. ವೆಚ್ಚದ ಚಿಕಿತ್ಸೆ ಉಚಿತ
ರಾಜ್ಯದಲ್ಲಿರುವ ಗ್ರಾಮೀಣ ಮತ್ತು ನಗರದ ಸಹಕಾರ ಸಂಘದ ಸದಸ್ಯರು, ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಬೀಡಿ ಕಾರ್ಮಿಕರು, ಸಹಕಾರಿ ನೇಕಾರರು ಸಹಿತ ಸಹಕಾರಿ ಸದಸ್ಯರಾಗಿ

3 ತಿಂಗಳಾಗಿರಬೇಕು.

4 ಜನರ ಕುಟುಂಬಕ್ಕೆ ವರ್ಷಕ್ಕೆ 500 ರೂ. ಪ್ರತಿ ಹೆಚ್ಚುವರಿ ಸದಸ್ಯರಿಗೆ 100 ರೂ. ಹಾಗೂ ನಗರ ಸದಸ್ಯರಿಗೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 200 ರೂ. ವೆಚ್ಚವಾಗುತ್ತದೆ. ನಿಗದಿತ ವಾರ್ಷಿಕ ವಂತಿಗೆ ಪಾವತಿಸಿ ಯೋಜನೆಯ ಸದಸ್ಯರಾಗಬಹುದು.

ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ 5 ಲಕ್ಷ ರೂ. ಇರಲಿದೆ. ಅನುಮೋದಿತ ಚಿಕಿತ್ಸೆಗಳಿಗಾಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ತಮ್ಮ ಯಶಸ್ವಿನಿ ಕಾರ್ಡ್‌ ನೀಡಬೇಕಾಗುತ್ತದೆ. ತಿಂಗಳಿಗೆ 30 ಸಾ. ರೂ.ಗಿಂತ ಹೆಚ್ಚು ಆದಾಯ ಗಳಿಸುವ ಸರಕಾರಿ ನೌಕರರು ಮತ್ತು ವ್ಯಕ್ತಿಗಳು ಅರ್ಹರಲ್ಲ. ಪ್ರಾಥಮಿಕ ಸದಸ್ಯರ ಅವಲಂಬಿತ ಅರ್ಹ ಕುಟುಂಬ ಸದಸ್ಯರನ್ನು ಸಹ ಈ ಆರೋಗ್ಯ ವಿಮಾ ಯೋಜನೆಯಲ್ಲಿ ಸೇರಿಸಿಕೊಳ್ಳಬಹುದು. ಇದಕ್ಕೆ ಹೆಚ್ಚುವರಿ ಹಣ ಪಾವತಿಸಬೇಕು.

ಮೇಯಿಂದ ಜೂನ್‌ ನಡುವೆ ನವೀಕರಿಸಿಈ ಯೋಜನೆಯನ್ನು ಪ್ರತಿ ವರ್ಷ ಮೇ ತಿಂಗಳಿನಿಂದ ಜೂನ್‌ ನಡುವೆ ನವೀಕರಿಸಲಾಗುತ್ತದೆ. ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಸಹಕಾರಿ ಸಂಘದಲ್ಲಿ ನವೀಕರಿಸಲು ಸದಸ್ಯರು ನವೀಕರಣ ನಮೂನೆ ಭರ್ತಿ ಮಾಡಬಹುದು. ವಾರ್ಷಿಕ ನವೀಕರಣ ಶುಲ್ಕದೊಂದಿಗೆ ಸಹಕಾರಿ ಸಂಘಕ್ಕೆ ಸಲ್ಲಿಸಬೇಕು. ಈ ಯೋಜನೆಗೆ ಸೇರಲು ವಯಸ್ಸಿನ ಅಂತರವಿಲ್ಲ.

prajaprabhat

Recent Posts

ಭಕ್ತಿ ಮತ್ತು ದೃಢಸಂಕಲ್ಪದೊಂದಿಗೆ 30 ನಿಮಿಷದಲ್ಲಿ ಅಂಜನಾದ್ರಿ ಬೆಟ್ಟವೇರಿದ ಕರ್ನಾಟಕದ ರಾಜ್ಯಪಾಲರು

ಕೊಪ್ಪಳ.06.ಆಗಸ್ಟ್.25: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಕುಟುಂಬ ಸದಸ್ಯರೊಂದಿಗೆ ಹನುಮಂತನ ಜನ್ಮಸ್ಥಳವೆಂದೆ…

16 minutes ago

ಚಾಮರಾಜನಗರ  ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜ್ ನ ಬಿ ಎಸ್ ಸಿ ಪದವಿಯಲ್ಲಿ ಮಧು ಸಿ. ಕಾಲೇಜ್ ಗೆ ಟಾಪರ್

ಚಾಮರಾಜನಗರ.06.ಆಗಸ್ಟ್ .25:- ಚಾಮರಾಜನಗರ  ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಗಳವಾರ 2022 -2025 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ…

22 minutes ago

ದೈಹಿಕ ಶಿಕ್ಷಣ ವಿಭಾಗದಲ್ಲಿ ನಕಲಿ ಪಿ.ಎಚ್ ಡಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಬೆಂಗಳೂರು.06.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ನಕಲಿ M.Phil ಮತ್ತು PH.D…

4 hours ago

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.

Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…

15 hours ago

2025- 26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ.!

ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…

1 day ago

ಮಕ್ಕಳ ಮಾಹಿತಿ ಗೌಪ್ಯವಾಗಿಡಲು ಸೂಚನೆ

ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…

1 day ago