ಯಳಂದೂರು: ಪಟ್ಟಣದ ತಾಲ್ಲೂಕು ಕಛೇರಿಯ ಸುತ್ತಲೂ ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ ವಸ್ತುಗಳಿಂದ ಕೂಡಿದೆ ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ಪ್ರತಿನಿತ್ಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುತ್ತಿದ್ದಾರೆ. ಕಛೇರಿಯ ಸುತ್ತಲೂ ಅಶಿಸ್ತುನಿಂದ ಕೂಡಿರುವುದನ್ನು ನೋಡಿ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ ಆದರೂ ತಾಲ್ಲೂಕು ಆಡಳಿತ ನಿರ್ಜೀವ ವಸ್ತುವಿನಂತಾಗಿದೆ. ಇದರಿಂದ ತನ್ನ ನಿರ್ಲಕ್ಷ್ಯ ತನವನ್ನು ತೋರಿಸುತ್ತದೆ.
ಗಿಡದ ಬಳ್ಳಿಗಳು ತಾಲ್ಲೂಕು ಆಡಳಿತ ಕಟ್ಟಡದ ಮೇಲೆ ಏರಿದೆ ಗಿಡದ ಬಳ್ಳಿಯ ಮೂಲಕ ಹಾವು ಚೇಳುಗಳು ಕಟ್ಟಡದೊಳಗೆ ಪ್ರವೇಶ ಮಾಡಿ ಇವುಗಳ ವಾಸಸ್ಥಾನವಾಗಿದೆ.
ಚಾಮರಾಜನಗರ ಜಿಲ್ಲಾಧಿಕಾರಿಗಳು ಪ್ಲಾಸ್ಟಿಕ್ ಮುಕ್ತ ಮಾಡಬೇಕೆಂದು ಪಣತೊಟ್ಟಿದ್ದಾರೆ ಆದರೆ ತಾಲ್ಲೂಕು ಕಛೇರಿಯ ಸುತ್ತಲೂ ಬರೀ ಪ್ಲಾಸ್ಟಿಕ್ ನಿಂದಲೇ ಕೂಡಿ ಅನೈರ್ಮಲ್ಯ ಸೃಷ್ಟಿಯಾಗಿದೆ.
ಸಾರ್ವಜನಿಕರಿಗೆ ಶಿಸ್ತಿನ ಬಗ್ಗೆ ತಿಳಿಸುವಂತಹ ಆಡಳಿತವೇ ಅಶಿಸ್ತಿನಿಂದ ಕೂಡಿದೆ.
ಬೇಸಿಗೆ ಹಿನ್ನಲೆಯಾದರೂ ಸಹ ಸಾರ್ವಜನಿಕರಿಗೆ ಕುಡಿಯುವ ನೀರುನ್ನು ಪೂರೈಸುವಂತಹ ಕೆಲಸ ಮಾಡಿಲ್ಲ. ಎಷ್ಟೋ ಸಾರ್ವಜನಿಕರು ಕುಡಿಯುವ ನೀರಿನ ಬಾಟಲಿಗಳ ಮೊರೆಹೋಗಿದ್ದಾರೆ
ಕಾಟಾಚಾರಕ್ಕೆ ಇಲ್ಲಿನ ಆಡಳಿತ ಕಾರ್ಯ ನಿರ್ವಹಿಸುತ್ತದೆ ಎಂದರೆ ತಪ್ಪಾಗಲಾರದು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಾರ್ವಜನಿಕರು ದೂರಿದರು.
_ಜಿ ಪ್ರಸನ್ನ ಕುಮಾರ್ ಕಿತ್ತೂರು
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…