ಯಳಂದೂರಿನಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಹಿತರಕ್ಷಣಾ ಸಮಿತಿ ಉದ್ಘಾಟನೆ.

ಯಳಂದೂರು: ಪಟ್ಟಣದ ವಾಲ್ಮೀಕಿ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಹಿತರಕ್ಷಣಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.

ಶಾಸಕ ಎ ಆರ್ ಕೃಷ್ಣಮೂರ್ತಿ ಉದ್ಘಾಟಿಸಿ ಬಳಿಕ ಮಾತನಾಡಿದರು.
ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಹಿತಾರಕ್ಷಣೆ ಸಮಿತಿಯು ಉದ್ಘಾಟನೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತದೆ.‌ ಸಮುದಾಯದ ಹಿತಾದ ಜೊತೆಗೆ ಸರ್ವರ ಹಿತಾವನ್ನು ಕಾಪಡಬೇಕಾಗಿದೆ.

ಪಟ್ಟಣದಲ್ಲಿರುವ ವಾಲ್ಮೀಕಿ ಭವನಕ್ಕೆ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಒಂದು ಕೋಟಿ ಅನುದಾನವನ್ನು ನೀಡಲಾಗಿದೆ
ವಾಲ್ಮೀಕಿ ಪುತ್ಥಳಿಯನ್ನು ಜಿಲ್ಲಾಡಳಿತ ಭವನದ ಮುಂದೆ ನಿರ್ಮಾಣವಾಗುತ್ತದೆ ‌ವಾಲ್ಮೀಕಿಯವರು.
ವಿಶ್ವ ಒಪ್ಪುವಂತಹ ರಾಮಾಯಣ ಬರೆದಿದ್ದಾರೆ.
ಇವರ ವಿಚಾರಗಳು ಜನರಿಗೆ ತಲುಪಬೇಕು.

ನಾಯಕ ಸಮುದಾಯಕ್ಕೆ  ಪ್ರಾತಿನಿಧ್ಯ ಕೊಡಬೇಕು ಎಂಬುವುದು ನನ್ನ ಗುರಿ ಅದಕ್ಕೆ ಚಂದ್ರುರವರನ್ನು ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಸಹಕಾರ ಸಚಿವರಾದ ರಾಜಣ್ಣರವರು ಸಹಕಾರ ಕ್ಷೇತ್ರದಲ್ಲಿ ಎಸ್ಸಿ ಎಸ್ಟಿ ಸಮುದಾಯದವರಿಗೆ  ಮೀಸಲಾತಿ ನೀಡಬೇಕೆಂದು ವಿಧಾನಸಭೆಯಲ್ಲಿ  ಚರ್ಚೆಯಾಗಿದೆ.ಇದರಿಂದ ಎಸ್ಸಿ ಎಸ್ಟಿ ಸಮುದಾಯದವರಿಗೆ ಅನುಕೂಲವಾಗಿದೆ ಎಂದರು.

ಮಾಜಿ ಶಾಸಕ  ಎನ್ ಮಹೇಶ್. ಮಾತನಾಡಿ.
ಪಟ್ಟಣದೊಳಗೆ ಹಳೆಯ ಪಟ್ಟಣ ಪಂಚಾಯತಿ ಜಾಗದಲ್ಲಿ  ವಾಲ್ಮೀಕಿ ಪ್ರತಿಮೆ ಮಾಡಬಹುದು.
ನಾಯಕ ಸಮುದಾಯದ ಸರಕಾರಿ ನೌಕರರು ಒಗ್ಗಟಾಗಿ ಸಮುದಾಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು.ಆರೋಗ್ಯ ಶಿಬಿರ, ಶೈಕ್ಷಣಿಕ ಚಟುವಟಿಕೆಗಳು ಮಾಡಬೇಕಾಗಿದೆ. ನಾಯಕ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು ಎಂದರು.

ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ, ಎಸ್ ಬಾಲರಾಜುರವರು ಮಾತನಾಡಿ’ ಬಸ್ ನಿಲ್ದಾಣ ಬಳಿ ಇರುವ ಹಳೆಯ ಶೌಚಾಲಯವನ್ನು ತೆರವುಗೊಳಿಸಿ‌ಬೇಕು ಇದರಿಂದ ವಾಲ್ಮೀಕಿ ಸಮುದಾಯ ಭವನಕ್ಕೆ ಅನುಕೂಲವಾಗುತ್ತದೆ’ ಇದನ್ನು ಶಾಸಕರು ಗಮನಿಸಿ ಅಂತಿಮ ತೀರ್ಮಾನ ಮಾಡಬೇಕೆಂದು ತಿಳಿಸಿದರು.


ನಂತರ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡಿದರು
ಈ ಸಂದರ್ಭದಲ್ಲಿ.ವೈ ಎನ್ ಮುರುಳಿಕೃಷ್ಣ ಅಧ್ಯಕ್ಷರು ನಾಯಕ‌ ಮಂಡಳಿ, ಹೆಚ್ ವಿ ಚಂದ್ರು ಜಿಲ್ಲಾ ಗ್ಯಾರಂಟಿ ಅಧ್ಯಕ್ಷರು, ವೈ ಡಿ ಸೂರ್ಯನಾರಾಯಣ್, ಪಪಂ ಸದಸ್ಯರಾದ ಮಹೇಶ್,ರವಿ, ರಂಗನಾಥ್, ಪ್ರಭಾವತಿ, ಮಹದೇವನಾಯ್ಕ, ಎಸ್ ಮಂಜು.‌ಪಿ ಎಲ್ ಡಿ ಉಪಾಧ್ಯಕ್ಷ ವೈ ಎಸ್ ಭೀಮಪ್ಪ, ಕಂದಹಳ್ಳಿ ಮಹೇಶ್, ಜಯರಾಮ್, ಪಿ ಮಹೇಶ್, ಸುರೇಶ್ ಕುಮಾರ್, ಆರ್ ರಾಜು, ವೀರೇಶ್, ಪುಟ್ಟಸ್ವಾಮಿ, ಜಯರಾಮ್ ಹಾಗೂ ಎಲ್ಲಾ ಪಟ್ಟಣದ ಯಜಮಾನರು, ಎಲ್ಲಾ ಗ್ರಾಮದ ಯಜಮಾನರು,‌ಮುಖಂಡರು ಹಾಜರಿದ್ದರು

prajaprabhat

Recent Posts

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

4 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

4 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

4 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

4 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

4 hours ago

ಆಗಸ್ಟ್ 7ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…

4 hours ago