ಯಳಂದೂರಿನಲ್ಲಿ ಅದ್ದೂರಿಯಾಗಿ ಡಾ ಬಿ ಆರ್  ಅಂಬೇಡ್ಕರ್ ಜಯಂತಿ ಆಚರಣೆ.

ಚಾಮರಾಜನಗರ.18.ಮೇ.25:- ಯಳಂದೂರು : ತಾಲ್ಲೂಕು ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ. ವಿಶ್ವರತ್ನ, ವಿಶ್ವ ಜ್ಞಾನಿ, ಮಹಾನಾಯಕ, ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ. ಆರ್ ಅಂಬೇಡ್ಕರ್ ರವರ 134  ನೇ  ಜನ್ಮ ದಿನಾಚರಣೆ ಸಮಾರಂಭವನ್ನು  ಶನಿವಾರ ನಡೆಸಲಾಯಿತು.

ಬೆಳಿಗ್ಗೆ 10 ರಿಂದ ತಾಲ್ಲೂಕು ಕಛೇರಿ ಮುಂಭಾಗ ಬೆಳ್ಳಿರಥದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಲಾಯಿತು ಜೊತೆಗೆ ಪ್ರತಿ ಗ್ರಾಮದಿಂದಲೂ ಅಂಬೇಡ್ಕರ್ ಬುದ್ದ ಬಸವ, ಕೋರೆಗಾಂವ್ ನೊಳಗೊಂಡ   ಸ್ತಬ್ಧ ಚಿತ್ರಗಳು ಹಾಗೂ ಮಂಗಳವಾದ್ಯ, ವಿವಿಧ ಕಲಾತಂಡಗಳು ಆಗಿಮಿಸದವು.

ಮೆರವಣಿಗೆಯು ಮುಖ್ಯರಸ್ತೆಯ ಮುಖಾಂತರ ಎಸ್ ಬಿ ಐ ಸರ್ಕಲ್, ಹಾಗೂ ಬಳೇಪೇಟೆಗೆ ತೆರಳಿ ವಾಲ್ಮೀಕಿ ವೃತದ ಮೂಲಕ ನಾಡುಮೇಗಲಮ್ಮ ದೇವಸ್ಥಾನದಿಂದ ಬಸ್ ನಿಲ್ದಾಣದಿಂದ ಸಾಗಿತು. ಮೂವತ್ತು ಮೂರು ಹಳ್ಳಿಗಳಿಂದ
10 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಯಶಸ್ವಿಗೊಳಿಸಿದರು.
ಯುವಕರು ಡಿಜೆ ಸಾಂಗ್ಸ್ ಮತ್ತು ಮಾರಿಕುಣಿತಕ್ಕೆ ಹೆಜ್ಜೆಯಾಕಿದರು ಯಳಂದೂರು ಸಂಪೂರ್ಣ ನೀಲಿ ತೋರಣಗಳಿಂದ ಅಲಂಕೃತ ಗೊಂಡಿತು.
ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದರಿಂದ  ಬಿ ಆರ್ ಹಿಲ್ಸ್ ರಸ್ತೆ, ಮುಖ್ಯ ರಸ್ತೆಗಳು  ಟ್ರಾಫಿಕ್ ಜಾಮ್ ಉಂಟಾಯಿತು ಕೊಳ್ಳೇಗಾಲ ಮತ್ತು ಚಾಮರಾಜನಗರಕ್ಕೆ ತೆರಳುವ  ವಾಹನಗಳು ಬೈಪಾಸ್ ಮೂಲಕ ತೆರಳಿದವು.



ಮೆರವಣಿಗೆಯು ಮುಖ್ಯರಸ್ತೆಯ ಮುಖಾಂತರ ಎಸ್ ಬಿ ಐ ಸರ್ಕಲ್, ಹಾಗೂ ಬಳೇಪೇಟೆಗೆ ತೆರಳಿ ವಾಲ್ಮೀಕಿ ವೃತದ ಮೂಲಕ ನಾಡುಮೇಗಲಮ್ಮ ದೇವಸ್ಥಾನದಿಂದ ಬಸ್ ನಿಲ್ದಾಣದಿಂದ ಸಾಗಿತು. ಮೂವತ್ತು ಮೂರು ಹಳ್ಳಿಗಳಿಂದ
10 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ಯಶಸ್ವಿಗೊಳಿಸಿದರು.
ಯುವಕರು ಡಿಜೆ ಸಾಂಗ್ಸ್ ಮತ್ತು ಮಾರಿಕುಣಿತಕ್ಕೆ ಹೆಜ್ಜೆಯಾಕಿದರು ಯಳಂದೂರು ಸಂಪೂರ್ಣ ನೀಲಿ ತೋರಣಗಳಿಂದ ಅಲಂಕೃತ ಗೊಂಡಿತು.
ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದರಿಂದ  ಬಿ ಆರ್ ಹಿಲ್ಸ್ ರಸ್ತೆ, ಮುಖ್ಯ ರಸ್ತೆಗಳು  ಟ್ರಾಫಿಕ್ ಜಾಮ್ ಉಂಟಾಯಿತು ಕೊಳ್ಳೇಗಾಲ ಮತ್ತು ಚಾಮರಾಜನಗರಕ್ಕೆ ತೆರಳುವ  ವಾಹನಗಳು ಬೈಪಾಸ್ ಮೂಲಕ ತೆರಳಿದವು.

ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ರವರು ಉದ್ಘಾಟಿಸಿದರು.
ನಂಜುಂಡಪ್ಪವರದಿ ಪ್ರಕಾರ ಚಾಮರಾಜನಗರ ಹಿಂದುಳಿದಿದೆ ನಮ್ಮ ಗುರಿ ಈ ಭಾಗವನ್ನು ಅಭಿವೃದ್ಧಿ ಪಡಿಸಬೇಕೆಂದು ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಸಲಾಗಿದೆ ಏಕೆಂದರೆ ಹೆಚ್ಚು ಅನುದಾನ ಈ ಭಾಗಕ್ಕೆ ಸಿಗಲಿ ಅಂತ.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಡಾ ಬಿ ಆರ್ ಅಂಬೇಡ್ಕರ್ ರವರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಂವಿಧಾನವನ್ನು ಉಳಿಸಿ ಗೌರವಿಸಬೇಕಾಗಿದೆ. ಪ್ರಜಾಪ್ರಭುತ್ವದಿಂದ ಮಾತ್ರ ಸಮಾನತೆ ಸಾಧ್ಯ.


ಸಂವಿಧಾನ ಪರಾಮರ್ಶೆಯನ್ನು ನಾನು ಮತ್ತು ಎನ್ ಮಹೇಶ್ ರವರು ವಿರೋಧ ಮಾಡಿದೆವು ಸಂವಿಧಾನವೆಂಬುವುದು ತಾಯಿ ಇದ್ದಾಗೆ ಸರಕಾರವೆಂಬುವುದು ಕೂಸು ಇದ್ಸಾಗೆ. ತಾಯಿಯನ್ನು ಕೂಸು ವಿಮರ್ಶೆ ಮಾಡುವುದಕ್ಕೆ ಸಾಧ್ಯನಾ ಎಂದು ನಾವು ಇದಕ್ಕೆ ವಿರೋಧ ಮಾಡಿದೆವು. ನಮ್ಮ ಸಂವಿಧಾನ ಮೌಲ್ಯಯತವಾಗಿದೆ.
ನಮಗೆಲ್ಲಾ ಪ್ರೇರಣೆ ಅಂಬೇಡ್ಕರ್ ರವರು . ಸಂವಿಧಾನ ಉಳುವಿಗೋಸ್ಕರ ಸಂವಿಧಾನ ಜಾಗೃತಿ ಕಾರ್ಯಕ್ರಮ ಹಾಗೂ ಶಾಲಾ ಕಾಲೇಜುಗಳಲ್ಲಿ ಪ್ರಸ್ತಾವನೆಯನ್ನು ಓದಿಸಲಾಗಿದೆ.
ಜಿಲ್ಲಾ ಅಭಿವೃದ್ಧಿಗೆ ನಾನು ಸದಾ ಸಿದ್ದವೆಂದರು.

ಪ್ರಾಚೀನ ಕಾಲದಿಂದಲೂ ಈ ದೇಶದಲ್ಲಿ ಮಹಿಳೆಯರು ಶೋಷಣೆ ಒಳಗಾಗಿದ್ದರು . ಅಂಬೇಡ್ಕರ್ ರವರು ಸಂವಿಧಾನದಲ್ಲಿ ಎಲ್ಲಾರೂ ಸಮಾನರು ಎಂದು ಕಾನೂನು ಮಾಡಿದ್ದಾರೆ. ನಾವು ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ಕಾಣಬೇಕಾಗಿದೆ ಹಾಗೂ ನಾವೆಲ್ಲ ಒಂದಾಗಿ ಭಾರತವನ್ನು ಮುನ್ನಡೆಸ ಬೇಕಾಗಿದೆ ಎಂದು ತಿಳಿಸಿದರು.

ಸಂಸದ ಸುನೀಲ್ ಬೋಸ್ ಮಾತನಾಡಿ  ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಒತ್ತು ನೀಡಿದರು. ಅಂಬೇಡ್ಕರ್ ರವರು ಬರೆದಿರುವ ಸಂವಿಧಾನವನ್ನು ನಾವು ಉಳಿಸಿ ಗೌರವಿಸಬೇಕಾಗಿದೆ. ಇಂದು ಇಂತಹ ಮಹಾನ್ ವ್ಯಕ್ತಿಗೆ ಕೆಲವು ಕಡೆ ಅಪಮಾನಮಾಡುತ್ತಿದ್ದಾರೆ. ಎಷ್ಟೇ ಅಪಮಾನ ಮಾಡಿದರು ಕೀರ್ತಿ ಕಡಿಮೆಯಾಗುವುದಿಲ್ಲ ಎಂದರು.

ಶಾಸಕ ಎ ಆರ್ ಕೃಷ್ಣಮೂರ್ತಿ ಉದ್ಘಾಟಿಸಿ ಮಾತನಾಡಿದರು.ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ ಇಲ್ಲಿ ಪೈಪೋಟಿ ಇದೆ ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಇದರಲ್ಲಿ ಉಪ ಜಾತಿಗಳನ್ನು ಹೊಲೆಯ ಮಾದಿಗ ಅಂತ ನೋಂದಾಯಿಸಬೇಕು ಇದರಿಂದ ಜಾತಿಗೆ ಅನುಗುಣವಾಗಿ ಸವಲತ್ತುಗಳು ಸಿಗುತ್ತವೆ ದಯವಿಟ್ಟು ಸಮೀಕ್ಷೆ ಗೆ ಸರಿಯಾಗಿ ಮಾಹಿತಿ ನೀಡಬೇಕು.
ಹೊಲೆಯ ಅಂತನೇ ನೀವು ನೋಂದಾಯಸಬೇಕು ಎಂದರು.
ಡಾ. ಬಿ ಆರ್ ಅಂಬೇಡ್ಕರ್ ರವರು ವ್ಯಕ್ತಿತ್ವವನ್ನು ಇಡೀ ಜಗತ್ತು ಗೌರವಿಸುತ್ತಾರೆ ಏಕೆಂದರೆ ಅವರು ಬಾಲ್ಯದಲ್ಲಿ ಅನುಭವಿಸಿದ ಶೋಷಣೆಯೇ ಅವರು ಎತ್ತರಕ್ಕೆ ಬೆಳೆಯುವುದಕ್ಕೆ ಕಾರಣವಾಯಿತು. ಶೋಷಣೆ ಮಾಡಿದವರ ವಿರುದ್ದ ಪ್ರತಿಕ್ರಿಯೆ ನೀಡದೆ ಬೆಳದು ಮಹಾನಾಯಕರಾದರು. ಇವರು ನೀಡಿದ ಬೃಹತ್ ಸಂವಿಧಾನದ ಫಲದಿಂದ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಿದೆ. ಅನೇಕ ಭಾಷೆ, ಧರ್ಮ, ಜಾತಿ, ಸಂಸ್ಕ್ರತಿ ಹೊಂದಿರಿವ ಈ ರಾಷ್ಟ್ರಕ್ಕೆ ಸರ್ವರು ಸಮಾನರು ಎಂಬ ತತ್ವದಡಿ ಸಂವಿಧಾನವನ್ನು ನೀಡಿದರು. ತಲಾ ತಲಾಂತರ ಕಾಲದಿಂದಲೂ ಭಾರತದ ಸಾಮಾಜಿಕ ವ್ಯವಸ್ಥೆ  ಜಿಡ್ಡುಗಟ್ಟಿತ್ತು ಇದನ್ನು ಅಂಬೇಡ್ಕರ್ ರವರು ಸಂವಿಧಾನದ ಮೂಲಕ ನಾಶ ಮಾಡಿದರು.

ಜ್ಞಾನಪ್ರಕಾಶ್ ಮಾತನಾಡಿ  ನಮಗೆ ಧರ್ಮ ಮುಖ್ಯವಲ್ಲ ನಮಗೆ ದೇಶ ಮುಖ್ಯ ನಾವೆಲ್ಲರೂ ಸಮಾನತೆಯಿಂದ ಬದುಕಬೇಕು.
ಡಾ ಬಿ ಆರ್ ಅಂಬೇಡ್ಕರ್ ರವರ ಅಖಂಡ ಭಾರತವನ್ನು ಸಂವಿಧಾನದ ಮೂಲಕ ಕಟ್ಡಿದ್ದಾರೆ.
ನಾವೆಲ್ಲರೂ ಸಹೋದರರಂತೆ ಇರಬೇಕು ನಮಗೆ ಜಾತಿ, ಧರ್ಮ ಮುಖ್ಯವಲ್ಲ.
ಗುಲಾಮರಾಗಿ ಬದುಕಬಾರದು ಸ್ವಾಭಿಮಾನದಿಂದ ಬದುಕಿ ಎಂದು ಅಂಬೇಡ್ಕರ್ ತಿಳಿಸಿದರು.
ಸಮುದಾಯದ ಹಿತಕ್ಕೆ ಪಕ್ಷಬೇದ ಮಾಡಬಾರದು.
ಜಾಗೃತಿ ಮತ್ತು ಜ್ಞಾನಕ್ಕೆ ಆದ್ಯತೆ ನೀಡಬೇಕು.ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಡಬೇಕು.

ಶಾಸಕ ಎನ್ ಮಹೇಶ್ ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್   ಜ್ಞಾನ ಸಂಕೇತದ ಹಂತಕ್ಕೆ ಹೋಗುವುದಕ್ಕೆ ಕಾರಣ ಅವರು ಜೀವನದಲ್ಲಿ ಅನುಭವಿಸಿದ ನೋವು. ವಿಶ್ವ ಸಂಸ್ಥೆ ಘೋಷಣೆ ಮಾಡಿದೆ ಅಂದರೆ ಅವರ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕು.
ಸಮಸ್ಯೆ ಮತ್ತು ಪ್ರಶ್ನೆಗಳನ್ನು ಉತ್ತರಗಳನ್ನು ನೀಡುತ್ತಾ ಹೋದರು ಇವರೆ ನಮಗೆ ಪ್ರೇರಣೆ ಎಂದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.


ಈ ಸಂದರ್ಭದಲ್ಲಿ  ಮಾಜಿ ಶಾಸಕರಾದ, ಜಿ ಎನ್ ನಂಜುಂಡಸ್ವಾಮಿ, ಪಪಂ ಅಧ್ಯಕ್ಷ ಲಕ್ಷ್ಮೀ, ದಲಿತ ಮುಖಂಡ ವಡೆಗೆರೆ ದಾಸ್, ಕಿನಕಹಳ್ಳಿರಾಚಯ್ಯ, ಹೊನ್ನೂರು ರೇವಣ್ಣ,  ಜೆ ಯೋಗೇಶ್, ಸೇವಾ ಸಮಿತಿಯ ಪದಾಧಿಕಾರಿಗಳಾದ ಕೆಸ್ತೂರು ಸಿದ್ದರಾಜು, ಗುಂಬಳ್ಳಿ ಮಹದೇವ್, ಯರಿಯೂರು ರಾಜಣ್ಣ, ಯರಿಯೂರು ನಾಗೇಂದ್ರ, ಶ್ರೀನಿವಾಸ್ , ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್. ಡಾ ಶ್ರೀಧರ್, ಕಮಲ್ ನಾಗರಾಜು, ಸಾಹಿತಿ  ಶಂಕನಪುರ ಮಹದೇವ್  ಹಾಗೂ ಅಂಬೇಡ್ಕರ್ ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಗ್ರಾಮದ ಯಜಮಾನರು, ಮುಖಂಡರು, ಯುವಕರು ಹಾಜರಿದ್ದರು.
ವರದಿ ಪ್ರಸನ್ನಕುಮಾರ್ ಕೆಸ್ತೂರು

prajaprabhat

Recent Posts

ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಇಲ್ಲದೆ ಸಾವಿರಾರು ವಿಧ್ಯಾರ್ಥಿ ಮತ್ತು ಪಾಲಕರಿಗೆ ತುಂಬಾ ಟೆನ್ಷನ್.!

2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್  ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…

7 hours ago

ಹಂದ್ರಾಳ ಗ್ರಾಮದಲ್ಲಿ ಹೆಸರು ಬೆಳೆಯ ಕ್ಷೇತೋತ್ಸವ

ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…

8 hours ago

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…

8 hours ago

ಇಫ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ, ರೈತ-ವಿಜ್ಞಾನಿ ಚರ್ಚಾಗೋಷ್ಠಿ

ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…

10 hours ago

ಆಗಸ್ಟ್ 11ರಂದು ಕೊಪ್ಪಳದಲ್ಲಿ ಯೂರಿಯ ರಸಗೊಬ್ಬರದ ವಿತರಣೆ

ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…

10 hours ago

ಅತಿಥಿ ಉಪನ್ಯಾಸಕರ ನೇಮಕ ಅರ್ಜಿ ಆಹ್ವಾನ

ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…

13 hours ago