ಕೊಪ್ಪಳ.16.ಜುಲೈ.25:- ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ (ಸಾಮಾನ್ಯ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 2025-26 ನೇ ಸಾಲಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು https://shp.karnataka.gov.in/bcwd ಪೋರ್ಟಲ್‌ನಲ್ಲಿ ಆಗಸ್ಟ್ 14 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ ಪ್ರವರ್ಗ-1, ಎಸ್.ಸಿ. ಮತ್ತು ಎಸ್.ಟಿ. ವರ್ಗಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ ವರ್ಗದವರಿಗೆ ರೂ.1 ಲಕ್ಷ ಮೀರಿರಬಾರದು.
ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‌ಸೈಟ್ www.bcwd.karnataka.gov.in ನ್ನು ನೋಡಬಹುದು.
ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ ಇ-ಮೇಲ್ ವಿಳಾಸ: bcwdhelpline@gmail.com ಅಥವಾ ಜಿಲ್ಲಾ, ತಾಲ್ಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಥವಾ ಸಹಾಯವಾಣಿ ಸಂಖ್ಯೆ: 8050770004, 8050770005 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…