ಮಾರ್ಚ 8 ರಂದು ಬೃಹತ್ ಲೋಕ ಆದಾಲತ್-ನ್ಯಾ.ಪ್ರಕಾಶ ಬನಸೋಡೆ

ಬೀದರ.13.ಫೆಬ್ರುವರಿ.25:-ಗೌರವಾನ್ವಿತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮಾರ್ಚ.8 ರಂದು ಬೀದರ ಜಿಲ್ಲೆಯಲ್ಲಿ ಬೃಹತ್ ಲೋಕ ಅದಾಲತನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ  ಬನಸೋಡೆ ಹೇಳಿದರು.


ಅವರು ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 


ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ ಜೀವನಾಂಶ, ಚೆಕ್ ಬೌನ್ಸ, ವಿದ್ಯುತ್ ಪ್ರಕರಣಗಳು ಕಂದಾಯ ಅಪರಾಧಿತ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವಂತಹ ಪ್ರಕರಣಗಳು, ಕಾರ್ಮಿಕರ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆ.  ಇದರ ಸದುಪಯೋಗವನ್ನು ಜಿಲ್ಲೆಯ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.


ಈ ಹಿಂದೆ ದಿನಾಂಕ 14-12-2024 ರಂದು ರಾಷ್ಟ್ರೀಯ ಲೋಕ ಅದಾಲತನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಾಂತ ಒಟ್ಟು 73,628 ಪ್ರಕರಣಗಳನ್ನು ಲೋಕ ಆದಲಾತನಲ್ಲಿ ಇತ್ಯರ್ಥಗೊಳಿಸಲಾಗಿರುತ್ತದೆ. ಒಟ್ಟು 10.191 (ಪೆಂಡಿಂಗನಲ್ಲಿನ) ಪ್ರಕರಣಗಳು ಹಾಗೂ 63,437 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿರುತ್ತದೆ ಎಂದರು.


ಈ ಬಾರಿ ಲೋಕ ಅದಾಲತನಲ್ಲಿ ನ್ಯಾಯಾಲಯದಲ್ಲಿ ಬಾಕಿ(ಪೇಂಡಿಂಗ) ಇರುವ ಪ್ರಕರಣಗಳನ್ನು ಹೆಚ್ಚು ಹೆಚ್ಚು ಇತ್ಯಾರ್ಥಗೊಳಿಸಲು ಯೋಜನೆ ರೂಪಿಸಲಾಗಿದೆ. ಈ ಬಾರಿಯ ಲೋಕ ಅದಾಲತನಲ್ಲಿ ಹೆಚ್ಚು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ.

ದಿನಾಂಕ 11-02-2025 ಪ್ರಕಾರ ನಮ್ಮ ಜಿಲ್ಲೆಯಲ್ಲಿ ಒಟ್ಟು 28,781 ಪ್ರಕರಣಗಳು ವೆಂಡಿಂಗ ಇದ್ದು.ಹೆಚ್ಚು ಪ್ರಕರಣಗಳನ್ನು ರಾಜಿ ಮಾಡುವ ಗುರಿ ಹೊಂದಿದ್ದೇವೆಂದರು.


ಪ್ರಕರಣ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯ ಶುಲ್ಕ ವಾಪಸ್ ಸಿಗಲಿದೆ ಮೇಲ್ಮನವಿ ಮಾಡಲು ಅವಕಾಶ ಇರುವುದಿಲ್ಲ. ಇಬ್ಬರೂ ಪಕ್ಷಗಾರರು ತಮ್ಮ ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದುವ ಅವಕಾಶ ಇರುತ್ತದೆ ಹಾಗೆ ಯಾವುದೇ ಖರ್ಚು ವೆಚ್ಚ ಇಲ್ಲದೆ ಶೀಘ್ರವಾಗಿ ಪ್ರಕರಣಗಳು ಇತ್ಯರ್ಥವಾಗುತ್ತದೆ.  ಕಾರಣ ಮಾರ್ಚ.8 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಆದಾಲತ್ ನಡೆಯಲಿದ್ದು, ಜಿಲ್ಲೆಯ ಹೆಚ್ಚಿನ ಜನರು ಈ ಲೋಕ ಆದಾಲತ್‍ನಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.


ಈ ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ವರ ದೊರೆ, ಆಕಾಶ ಸಜ್ಜನ, ನಾಗರಾಜ, ಪ್ರೀತಿ, ಜೀವನ ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

ಪ್ರಯಾಣದ ಸಂಧರ್ಭದಲ್ಲಿ ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು ಸಾಂದರ್ಭಿಕ ಚಿತ್ರ.

ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ  ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…

5 hours ago

ಹಳದಿ ಮೆಟ್ರೋ ನಾಳೆಯಿಂದ ಸಂಚಾರ ಪ್ರಾರಂಭ.

ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್‌.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ  ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…

6 hours ago

ಗೃಹಲಕ್ಷ್ಮೀ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಒಟ್ಟಿಗೆ 2 ಕಂತಿನ 4,000 ರೂ. ಖಾತೆಗೆ ಜಮೆ.!

ಬೆಂಗಳೂರು.10.ಆಗಸ್ಟ್.25:- ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ…

6 hours ago

ರಾಜ್ಯ ಸರ್ಕಾರದಿಂದ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ…

11 hours ago

ಶ್ರೀ ನುಲಿಯ ಚಂದಯ್ಯ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

12 hours ago

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ದೊಡ್ಡ ಬದಲಾವಣೆಯನ್ನ ಮಾಡಲು ನಿರ್ಧರಿಸಿದೆ.

ಹೊಸ ದೆಹಲಿ.10.ಆಗಸ್ಟ್.25:- ನೀವು 9 ರಿಂದ 12 ನೇ ತರಗತಿಯ ಶಿಕ್ಷಕರಾಗುವ ಕನಸು ಕಾಣುತ್ತಿದ್ದರೆ, ಆಕಾಂಕ್ಷಿಗಳು ನೀವು ಸ್ವಲ್ಪ ಹೆಚ್ಚು…

13 hours ago