ಮಾದರಿ ಗ್ರಾಮಪಂಚಾಯತಿ ಸದಸ್ಯ ಗುರುಲಿಂಗಯ್ಯ.

ಚಾಮರಾಜನಗರ.18.ಜೂನ್.25:- ಯಳಂದೂರು: ಸರಕಾರಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಕಡು ಬಡವರ ಮಕ್ಕಳಿರುವುದರಿಂದ ಪಂಚಾಯತಿಯ ಅನುದಾನವನ್ನು ಸದ್ಬಳಿಕೆ ಮಾಡಿಕೊಂಡು ಚೇರ್, ಆಟಿಕೆ ಸಾಮಾನುಗಳು ಹಾಗೂ ಸುಸಜ್ಜಿತ ಆಟದ ಮೈದಾನವನ್ನು ಮಾಡಿ ಹಾಗೂ ಗ್ರಾಮದ ಪ್ರಮುಖ ಸರ್ಕಲ್ ಗಳಿಗೆ ಹೈಮಾಸ್ಟ್ ದೀಪವನ್ನು ಅಳವಡಿಸಿರುವ ಯುವ ನಾಯಕ ಕೆಸ್ತೂರು ಗ್ರಾಮಪಂಚಾಯತಿ ಸದಸ್ಯ ಗುರುಲಿಂಗಯ್ಯ ಮಾದರಿ ಗ್ರಾಮಪಂಚಾಯತಿ ಸದಸ್ಯರಾಗಿದ್ದಾರೆ.

ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಗ್ರಾಮಪಂಚಾಯತಿ ಸದಸ್ಯ ಗುರುಲಿಂಗಯ್ಯ ರವರು ನಾಲ್ಕನೇ ವಾರ್ಡ್‌ ನ ಸದಸ್ಯರಾಗಿದ್ದಾರೆ ತುಂಬಾ ಸರಳವಾದ ಜೀವನವನ್ನು ಮಾಡುತ್ತಿದ್ದಾರೆ ಇವರ ಉದ್ದೇಶ ಸರಕಾರಿ ಶಾಲೆ ಮತ್ತು ಅಂಗನವಾಡಿಗಳ ಅಭಿವೃದ್ಧಿ ಜೊತೆಗೆ ಕಡುಬಡವರ ಮಕ್ಕಳಿಗೆ ಬುಕ್ , ನೋಟ್ ಹಾಗೂ ಪೆನ್ನುಗಳನ್ನು ನೀಡಿ ಪ್ರೋತ್ತಾಹಿಸುತ್ತ ಬಂದಿದ್ದಾರೆ.


ಸರಕಾರ ಗ್ರಾಮಪಂಚಾಯತಿಗಳಿಗೆ ಅಭಿವೃದ್ಧಿಗೋಸ್ಕರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತದೆ ಈ ಗುರಿಯನ್ನು ಇಟ್ಟುಕೊಂಡು ಕೆಸ್ತೂರು ಗ್ರಾಮಪಂಚಾಯತಿ ಸದಸ್ಯನಾಗಿ ಸೇವೆಸಲ್ಲಿಸುತ್ತಿದ್ದೇನೆಂದು ಗುರುಲಿಂಗಯ್ಯ ಮಾತನಾಡುತ್ತಿದ್ದಾರೆ.

ಗ್ರಾಮದ ಅಂಬೇಡ್ಕರ್ ಭವನ ಮತ್ತು ಲ್ಯಾಂಡ್ ಆರ್ಮಿ ಭವನದ ಮುಂದೆ ಹೈಮಾಸ್ಟ್ ದೀಪಗಳನ್ನು 15 ನೇ ಹಣಕಾಸಿನ ಹಣ ಬಳಸಿ  ಅಳವಡಿಸಿದ್ದಾರೆ.


ಅದಲ್ಲದೇ ಇವಾಗ ಕೆಸ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಇಲ್ಲಿನ ಮಕ್ಕಳ ಹಿತದೃಷ್ಟಿಯಿಂದ ಇಂಟರ್ ಲ್ಯಾಕ್ ಕಲ್ಲುಗಳನ್ನು ನಾಲ್ಕು ಲಕ್ಷದ ವೆಚ್ಚದಲ್ಲಿ ಕಾಮಗಾರಿಯನ್ನು ಮಾಡಿಸಿದ್ದಾರೆ ಇವರ ಕಾರ್ಯವನ್ನು ಗ್ರಾಮದ ಜನರು  ಶ್ಲಾಘಿಸುತ್ತಿದ್ದಾರೆ ಇವರ ಕಾರ್ಯಕ್ಕೆ ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಹಾಗೂ ಪಿಡಿಒ ಮಹದೇವಸ್ವಾಮಿರವರು ಸಹಕಾರವನ್ನು ನೀಡಿದ್ದಾರೆ.


ಯಳಂದೂರು ತಾಲ್ಲೂಕಿನ ಯಾವುದೇ ಸರಕಾರಿ ಶಾಲೆಯ ಮೈದಾನದಲ್ಲಿ ಇಂಟರ್ ಲ್ಯಾಕ್ ಕಲ್ಲುಗಳಿಂದ ಮೈದಾನ ನಿರ್ಮಾಣವಾಗಿಲ್ಲ ಆದರೆ ನಮ್ಮ ಶಾಲೆಯ ಆವರಣ  ಇಂದು ಇಂಟರ್ ಲ್ಯಾಕ್ ಕಲ್ಲುಗಳಿಂದ ಮೈದಾನ ನಿರ್ಮಾಣವಾಗಿದೆ ಇದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ.


ಈ ಕಾರ್ಯದಲ್ಲಿ ಗುರುಲಿಂಗಯ್ಯ ರವರಿಗೆ ಮತ್ತೊಬ್ಬ ಸದಸ್ಯ ಜೆ ಪ್ರಸಾದ್ ಕೂಡ ಕೈಜೋಡಿಸಿದ್ದಾರೆ.
ಏನೇ ಆಗಲಿ ಗ್ರಾಮ ಅಭಿವೃದ್ಧಿಯಾಗಬೇಕು ಅಷ್ಟೇ
ವರದಿ.ಪ್ರಸನ್ನಕುಮಾರ್ ಕೆಸ್ತೂರು

prajaprabhat

Recent Posts

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

3 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

9 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

9 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

9 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

9 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

10 hours ago