ಮಾಜದ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯ : ಕೇಶವರಾವ್ ತಳಘಟಕರ್

ಹುಮನಾಬಾದ.17.ಜೂನ್.25:- ಹುಮನಾಬಾದ ತಾಲ್ಲೂಕಾ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾಗಿ ಸರ್ವಾನುಮತದಿಂದ  ಭೀಮರಾವ ಕುಲಕರ್ಣಿ ಅವರನ್ನು ನೇಮಕ ಮಾಡಲಾಗಿದೆ. 

ರವಿವಾರದಂದು ಮಾಣಿಕ ನಗರದಲ್ಲಿ  ಜಿಲ್ಲಾ ಗೌರವ ಅಧ್ಯಕ್ಷ  ಕೆಶವರಾವ ತಳಘಟಕರ್ ಹಾಗೂ ಜಿಲ್ಲಾ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಅವರ ಅಧ್ಯಕ್ಷತೆ  ನಡೆದ ಸಭೆಯಲ್ಲಿ ತಾಲ್ಲೂಕಾ ಘಟಕ ರಚನೆ ಮಾಡಲಾಯಿತು.

ಇದೇ ಸಂಧರ್ಭದಲ್ಲಿo  ಕೇಶವರಾವ್ ತಳಘಟ್ಕರ್ ಮಾತನಾಡಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳನ್ನು ಮಾಡಬೇಕಾದರೆ ಸಂಘಟನೆ ಅತ್ಯಂತ ಪ್ರಮುಖವಾಗಿದೆ. ಎಲ್ಲರ ಸಹಕಾರ ಇದ್ದಾಗ ಮಾತ್ರ ಯಶಸ್ವಿಯಾಗುತ್ತದೆ  ಆದ್ದಿçರಿಂದ ಇಂದಿನ ದಿನಗಳಲ್ಲಿ  ಸಮಾಜ ಬಾಂಧವರು ಸಂಘಟಿರಾಗುವುದು  ಜರುರಿ ಇದೆ ಎಂದು ಸಲಹೆ ನೀಡಿದರು.  ಆದ್ದರಿಂದ ಎಲ್ಲರು ಸೇರಿ ಎಕೆಬಿಎಂಎಸ್  ಬಲಪಡಿಸಬೇಕೆಂದರು. 

ಜಿಲ್ಲಾಧ್ಯಕ್ಷ  ವೆಂಕಟೇಶ ಕುಲಕರ್ಣಿ ಮಾತನಾಡಿ ನಾನು ಸರಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ನನ್ನ ಸಮಾಜಕ್ಕೆ ಸಿಗುವಂತೆ ಮಾಡುತ್ತೇನೆ ಆದ್ದರಿಂದ ತಮ್ಮೆಲ್ಲರ ಸಹಕಾರ ಸ್ನೇಹ ಅಗತ್ಯವಾಗಿದೆ ಎಂದು ಹೇಳಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ಮನವಿ ಮಾಡಿದರು.

ಇದೆ ಸಂಧರ್ಭದಲ್ಲಿ ಹುಮ್ನಾಬಾದ್ ತಾಲೂಕಿನ ಬ್ರಾಹ್ಮಣ ಸಮಾಜದ ವತಿಯಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ  ರಾಜ್ಯ ಉಪಾಧ್ಯಕ್ಷರಾಗಿ ಬೀದರ್ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವೆಂಕಟೇಶ್ ಸುಧಾಕರ್‌ರಾವ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು ಈ ಕಾರ್ಯಕ್ರಮದಲ್ಲಿ À ಶ್ರೀ ಕಿಶೋರ್ ಕುಲಕರ್ಣಿ ಮಿಲಿಂದ್ ಕುಲಕರ್ಣಿ ಪ್ರಭಾಕರ್ ರಾವ್ ಕುಲಕರ್ಣಿ ಗುಂಡರಾವ್ ಕುಲಕರ್ಣಿ ಕೃಷ್ಣ ರಾವ್ ಕುಲಕರ್ಣಿ ಪ್ರದೀಪ್ ಕುಲ್ಕರ್ಣಿ ಸೇರಿದಂತೆ ಸಮಾಜದ ಬಾಂಧವರು ಪಾಲ್ಗೊಂಡಿದ್ದರು .


ಪದಾಧಿಕಾರಿಗಳು : ಅಧ್ಯಕ್ಷ : ಭೀಮರಾವ್ ಕುಲಕರ್ಣಿ , ಉಪಾಧ್ಯಕ್ಷರು :  ಮಿಲಿಂದ್ ಕುಲಕರ್ಣಿ, ಸಂದೀಪ್ ತಳಘಟಕರ್ï, ಗುಂಡರಾವ್ ಮಾಣಿಕ್ ರಾವ್ ಕುಲಕರ್ಣಿ ಕಾರ್ಯದರ್ಶಿ :  ಪ್ರಭಾಕರ ಕುಲಕರ್ಣಿ ಸಹ ಕಾರ್ಯದರ್ಶಿ : ದಿನಕರ್‌ರಾವ್ ಕುಲಕರ್ಣಿ ,ವೆಂಕಟರರಾವ್ ಸಂಘಟನಾ ಕಾರ್ಯದರ್ಶಿ :  ರಮೇಶ ಕುಲಕರ್ಣಿ ಬೆಲೆಕೆರಾ ನಿರ್ದೇಶಕರು : ರವಿ ಎಲಮಡಗಿ ,ಭೀಮಸೇನ್ ಸಾಮ್ರಾಣಿ,  ಸದಾನಂದ ಪತ್ತಗಿ ಹಳ್ಳಖೇಡ ಸಂಘಟನಾ ಕಾರ್ಯದರ್ಶಿ ಸುನೀಲ ಕುಲಕರ್ಣಿ

prajaprabhat

Recent Posts

ಪ್ರಯಾಣದ ಸಂಧರ್ಭದಲ್ಲಿ ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು ಸಾಂದರ್ಭಿಕ ಚಿತ್ರ.

ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ  ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…

3 hours ago

ಹಳದಿ ಮೆಟ್ರೋ ನಾಳೆಯಿಂದ ಸಂಚಾರ ಪ್ರಾರಂಭ.

ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್‌.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ  ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…

3 hours ago

ಗೃಹಲಕ್ಷ್ಮೀ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಒಟ್ಟಿಗೆ 2 ಕಂತಿನ 4,000 ರೂ. ಖಾತೆಗೆ ಜಮೆ.!

ಬೆಂಗಳೂರು.10.ಆಗಸ್ಟ್.25:- ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ…

4 hours ago

ರಾಜ್ಯ ಸರ್ಕಾರದಿಂದ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ…

9 hours ago

ಶ್ರೀ ನುಲಿಯ ಚಂದಯ್ಯ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

9 hours ago

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ದೊಡ್ಡ ಬದಲಾವಣೆಯನ್ನ ಮಾಡಲು ನಿರ್ಧರಿಸಿದೆ.

ಹೊಸ ದೆಹಲಿ.10.ಆಗಸ್ಟ್.25:- ನೀವು 9 ರಿಂದ 12 ನೇ ತರಗತಿಯ ಶಿಕ್ಷಕರಾಗುವ ಕನಸು ಕಾಣುತ್ತಿದ್ದರೆ, ಆಕಾಂಕ್ಷಿಗಳು ನೀವು ಸ್ವಲ್ಪ ಹೆಚ್ಚು…

11 hours ago