ರಾಯಚೂರು.07.ಆಗಸ್ಟ್ .25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯಿಂದ 2019-20, 2021-22, 2023-24 ಹಾಗೂ 2024-25ನೇ ಸಾಲಿನ ಎಸ್.ಎಫ್.ಸಿ ನಿಧಿ ಹಾಗೂ ನಗರಸಭೆ ನಿಧಿಯ ಶೇ.5ರ ಪರಿಷ್ಕೃತ ಕ್ರಿಯಾ ಯೋಜನೆಯಡಿ ವಿಕಲಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶೇ.5ರ ಯೋಜನೆಯಡಿ ಪರಿಶಿಷ್ಟ ಜಾತಿಯ ವಿಕಲಚೇತನರ ಮನೆಯ ಮೇಲ್ಚಾವಣೆ ದುರಸ್ತಿ ಸಾಮಗ್ರಿಗಳು ಅಥವಾ ಅವಶ್ಯಕ ಸಾಮಗ್ರಿಗಳನ್ನು ಖರೀದಿಸಲು ಅವಶ್ಯಕತೆನುಗುಣವಾಗಿ ಒಂದು ಬಾರಿ 40,000 ರೂ.ಗಳ ಧನಸಹಾಯ ನೀಡಲಾಗುವುದು.
ವೈಯಕ್ತಿಕ ಸೌಲಭ್ಯಕ್ಕಾಗಿ 2019-20ನೇ ಸಾಲಿನ ಜೀವ ವಿಮಾ ಹಾಗೂ ಆರೋಗ್ಯ ಯೋಜನೆಯ ವಾರ್ಷಿಕ ಪ್ರೀಮಿಯಂ ಕಂತುಗಳನ್ನು ವಿಕಲಚೇತನರ ಜನರಿಗೆ ವಿಮೆಯನ್ನು ಮಾಡಿಸಿ ಅಥವಾ ನವೀಕರಿಸಿ ವಿಮಾ ಮೊತ್ತವನ್ನು ಪಾವತಿಸಲಾಗುತ್ತಿದೆ.
ದಾಖಲಾತಿಗಳು: ನಿಗದಿತ ನಮೂನೆಯಲ್ಲಿ ಅರ್ಜಿ, ದೃಢೀಕೃತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಪ್ರಸಕ್ತ ಚಾಲ್ತಿ ಸಾಲು), ದೃಢೀಕೃತ ವಾಸಸ್ಥಳಕ್ಕೆ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್, ಪಾಸ್ ಪೋಟೋ ಅಳತೆಯ ಭಾವ ಚಿತ್ರ-2, ಬ್ಯಾಂಕ್ ಪಾಸ್ ಪುಸ್ತಕ್ ಹಾಗು ಐ.ಎಫ್.ಎಸ್.ಸಿ ಕೋಡ್‌ನೊಂದಿಗೆ ಬ್ಯಾಂಕ್ ವಿವರ, ವೈದ್ಯರಿಂದ ಪಡೆದ ಗುರುತಿನ ಚೀಟಿ ಹಾಗೂ ಯು.ಡಿ.ಎ. ಕಾರ್ಡ, ಮನೆಯ ಮೇಲ್ಚಾವಣೆ ಛಾಯಾ ಚಿತ್ರ. ಅಥವಾ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಜಾಗದ ಛಾಯಾಚಿತ್ರ, ಮೊಬೈಲ್ ನಂಬರ್‌ನೊoದಿಗೆ ಆಗಸ್ಟ್ 13ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅವದಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸರಿಯಾದ ದಾಖಲಾತಿಗಳು ಸಲ್ಲಿಸದೇ ಇದ್ದ ಪಕ್ಷದಲ್ಲಿ ತಮಗೆ ಯಾವುದೇ ಹಿಂಬರಹ ಕಳುಹಿಸದೇ ನೇರವಾಗಿ ವಿಭಾಗದ ಸಿಬ್ಬಂದಿಯವರು ತಿರಸ್ಕೃತ ಮಾಡಲಾಗುವುದೆಂದು ಪಾಲಿಕೆಯ ಆಡಳಿತ ವಿಭಾಗದ ಕಚೇರಿ ಸಹಾಯಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…
ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…
ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…
ಬೀದರ.09.ಆಗಸ್ಟ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡಾ ರಸ್ತೆ, ಬೀದರಿನಲ್ಲಿ ಆಗಸ್ಟ್.12 ರಿಂದ…
ಬೀದರ.09.ಆಗಸ್ಟ್.25:- ಗೌರವಾನ್ವಿತ ಕರ್ನಾಟ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ನಿರ್ದೇಶನದಂತೆ ದಿನಾಂಕ: 13-09-2025 ರಂದು ರಾಷ್ಟ್ರೀಯ ಲೋಕ…
ಬೀದರ.09.ಆಗಸ್ಟ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ) ಬೀದರ ಇವರುಗಳ…