ಮದ್ಯ ಪ್ರಿಯರಿಗೆ ಬಿಗ್ ಶಾಕ್- ದುಬಾರಿ ಎಣ್ಣೆ.!

====================================
ಪ್ರಜಾ ಪ್ರಭಾತ ಸುದ್ಧಿ:
https://prajaprabhat.com
====================================

ಬೆಂಗಳೂರು.07.ಮಾರ್ಚ್.25:-  ರಾಜ್ಯದ ಮುಖ್ಯಮಂತ್ರಿಯಾದ ಶ್ರೀಸಿದ್ದರಾಮಯ್ಯ ಇಂದು ತಮ್ಮ 16ನೇ ಬಜೆಟ್ ಮಂಡನೆಯ ವೇಳೆ ಕೆಲವರಿಗೆ ಸಿಹಿ ನೀಡಿದರೆ ಕೆಲವರಿಗೆ ಕಹಿ ಸುದ್ದಿಗಳನ್ನು ನೀಡಿದ್ದಾರೆ. ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದರು.

ಬಜೆಟ್‌ನಲ್ಲಿ ಜನತೆ ಪಾಲಿಗೆ ಸಿಹಿ ಮಾತ್ರ ನೀಡಬೇಕು ಎಂಬ ಉದ್ದೇಶವಿದ್ದರೂ ಗ್ಯಾರಂಟಿಗಳ ಹೊರೆ, ಬದ್ಧತಾ ವೆಚ್ಚ ಹೆಚ್ಚಳ, ಸಾಲದ ಹೊರೆ ನಡುವೆಯೂ ಅಭಿವೃದ್ಧಿಗೆ ಒತ್ತು ನೀಡಬೇಕಾದ ಅನಿವಾರ್ಯತೆಯಿಂದಾಗಿ ಮದ್ಯ ಪ್ರಿಯರಿಗೆ ಈ ಬಾರಿ ಬಜೆಟ್ ಕಹಿಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 36,500 ಕೋಟಿ ರೂ. ಆದಾಯದ ಗುರಿ ನಿಗದಿ ಮಾಡಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಾಗಲಿದೆ. ರಾಜ್ಯ ಸರ್ಕಾರ ಅಬಕಾರಿ ಸ್ಲ್ಯಾಬ್ ಪರಿಷ್ಕರಣೆಗೆ ನಿರ್ಧರಿಸಿದೆ ಎಂದು ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಪ್ರೀಮಿಯಂ ಮಧ್ಯದ ಬೆಲೆಗಳನ್ನು ನೆರೆಯ ರಾಜ್ಯಗಳಲ್ಲಿ ವಿಧಿಸುತ್ತಿರುವ ಬೆಲೆಗಳಿಗೆ ಅನುಸಾರವಾಗಿ ಪರಿಷ್ಕರಿಸುವುದರೊಂದಿಗೆ ಸರ್ಕಾರವು ಅಬಕಾರಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸಿದೆ. 2025-26ರಲ್ಲಿಯೂ ಅಬಕಾರಿ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು.

ಖಾಲಿ ಅಥವಾ ಲಭ್ಯವಿರುವ ಮದ್ಯದ ಪರವಾನಗಿಗಳನ್ನು ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಇದರಿಂದ ಹೆಚ್ಚುವರಿ ರಾಜಸ್ವ ಸಂಗ್ರಹಣೆಯಾಗುವ ನಿರೀಕ್ಷೆಯಿದೆ.

2024-25ರ ಪರಿಷ್ಕೃತ ಅಂದಾಜಿನಲ್ಲಿ ಅಬಕಾರಿ ತೆರಿಗೆಯಿಂದ ಒಟ್ಟು 36,500 ಕೋಟಿ ರೂಪಾಯಿಗಳ ರಾಜಸ್ವವನ್ನು ನಿರೀಕ್ಷಿಸಲಾಗಿದೆ.

2025-26ನೇ ಸಾಲಿಗೆ 40,000 ಕೋಟಿ ರೂಪಾಯಿಗಳ ಸಂಗ್ರಹಣಾ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ.

ಆದರೆ ಈಗಾಗಲೇ ಆದಾಯ ಸಂಗ್ರಹ ಹೆಚ್ಚಳಕ್ಕಾಗಿ ಸರ್ಕಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗುರಿ ನೀಡಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದ ಚಟ ಹೆಚ್ಚಳವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. 2024-25ರಲ್ಲಿ ಈ ಸಂಬಂಧ 17,390 ಪ್ರಕರಣಗಳನ್ನು ದಾಖಲಿಸಿ, 18,253 ಮಂದಿಯನ್ನು ಬಂಧಿಸಲಾಗಿದೆ ಎಂದು ವಿಪಕ್ಷಗಳು ಕೆಲ ದಿನಗಳಿಂದ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿವೆ.

ಸರ್ಕಾರದ ಈ ನಿಲುವನ್ನು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ವಿರೋಧಿಸಿ, ಅಬಕಾರಿ ಇಲಾಖೆಯವರು ಪ್ರತಿ ಮದ್ಯದಂಗಡಿಗೂ ಮಾರಾಟದ ಗುರಿ ನಿಗದಿಪಡಿಸಿದೆ. ಗುರಿ ತಲುಪುವುದಕ್ಕಾಗಿ ಹಳ್ಳಿ ಹಳ್ಳಿಗೂ ಬೈಕ್‌ಗಳಲ್ಲಿ ಮದ್ಯ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೆ ಅಬಕಾರಿ ಇಲಾಖೆ ಅಧಿಕಾರಿಗಳು, ಪೊಲೀಸರಿಗೆ ಗೊತ್ತಿಲ್ಲದೇ ಹಳ್ಳಿಗಳಲ್ಲಿ ಮದ್ಯ ಮಾರಾಟ ಆಗುವುದಿಲ್ಲ. ಮಾಮೂಲಿ ತೆಗೆದುಕೊಂಡು ಮದ್ಯದ ಅಕ್ರಮ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಾರೆ. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ಅಧಿಕೃತ ಪರವಾನಗಿ ಕೊಡಿ.

ಸರ್ಕಾರಕ್ಕೂ ತೆರಿಗೆ ಬರುತ್ತದೆ. ಕಳಪೆ ಗುಣಮಟ್ಟದ ಮದ್ಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೊನಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಆ ಕಾಲೋನಿಗಳಲ್ಲಿ 35ರಿಂದ 40 ವರ್ಷದೊಳಗಿನ ಯುವಕರೂ ಸಾಯುತ್ತಿದ್ದಾರೆಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಕಿಡಿ ಕಾರಿದ್ದರು.

====================================
ವೀಕ್ಷಕರೇ ನಮ್ಮ ಚಾನೆಲ್ ಜಾಹಿರಾತು ಹಾಗೂ ಸುದ್ದಿಗಾಗಿ
ಕರೆ ಮಾಡಿ ಅಥವಾ ವಾಟ್ಸಪ್ಪ್ ಮಾಡಿ: 9481611151
E_Mail ID: prajaprabhat24@gmail.com
====================================

prajaprabhat

Recent Posts

ಅಭಿ ಪಿಕ್ಚರ್ ಬಾಕಿ ಹೈ; ರಾಹುಲ್ ಗಾಂಧಿ ಹೇಳಿಕೆ ಕುತೂಹಲಕೆ ಕಾರಣ.

ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ ಚುನಾವಣಾ ಆಯೋಗವು 'ಒಬ್ಬ ವ್ಯಕ್ತಿ,…

56 minutes ago

ನವದೆಹಲಿ: ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ NHRC ಎರಡು ವಾರಗಳ ಆನ್‌ಲೈನ್ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಇಂದು ನವದೆಹಲಿಯಲ್ಲಿ ತನ್ನ ಎರಡು ವಾರಗಳ ಆನ್‌ಲೈನ್ ಅಲ್ಪಾವಧಿಯ ಇಂಟರ್ನ್‌ಶಿಪ್…

1 hour ago

ಕರಾವಳಿ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತೀಯ ಬಂದರು ಮಸೂದೆ, 2025 ಅನ್ನು ಲೋಕಸಭೆ ಅಂಗೀಕರಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ಲೋಕಸಭೆಯು ಭಾರತೀಯ ಬಂದರುಗಳ ಮಸೂದೆ, 2025 ಅನ್ನು ಅಂಗೀಕರಿಸಿದೆ. ಈ ಮಸೂದೆಯು ಬಂದರುಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು,…

1 hour ago

ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ನಾಲ್ಕು ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ ₹4,594 ಕೋಟಿಗೆ ಸರ್ಕಾರ ಅನುಮೋದನೆ ನೀಡಿದೆ.

ಹೊಸ ದೆಹಲಿ.12.ಆಗಸ್ಟ್.25:- ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಅಂದಾಜು ನಾಲ್ಕು ಸಾವಿರದ 594 ಕೋಟಿ ರೂಪಾಯಿಗಳ ನಾಲ್ಕು ಹೊಸ ಸೆಮಿಕಂಡಕ್ಟರ್…

1 hour ago

ಕಚ್ಚಾ ತೈಲ ಬೆಲೆ ಇಳಿಕೆ; ಬ್ರೆಂಟ್ ಮತ್ತು $66.31, WTI ಪ್ರತಿ ಬ್ಯಾರೆಲ್‌ಗೆ $63.53

ಹೊಸ ದೆಹಲಿ.12.ಆಗಸ್ಟ್.25:- ಕಚ್ಚಾ ತೈಲ ಬೆಲೆ ಇಂದು ಕುಸಿದಿದೆ. ಕೊನೆಯದಾಗಿ ವರದಿಗಳು ಬಂದಾಗ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 66…

1 hour ago

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಸಂಸತ್ತು ಹಲವು ಬಾರಿ ಮುಂದೂಡಿಕೆ, 18 ರಂದು ಪುನರಾರಂಭ

ಹೊಸ ದೆಹಲಿ.12.ಆಗಸ್ಟ್.25:- ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆ ಮತ್ತು ರಾಜ್ಯಸಭೆ ಹಲವು…

2 hours ago