ಬೆಂಗಳೂರು.22.ಜೂನ್.25:- ಬೆಂಗಳೂರು ನಗರದ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಶನಿವಾರ ಸಾಯಂಕಾಲ ನಾಪತ್ತೆಯಾಗಿದ್ದ ಆರು ವರೇ ವರ್ಷದ ಮಗು ಪ್ರಕರಣವನ್ನು 24 ಗಂಟೆಗಳಲ್ಲಿ ಬಗೆಹರಿಸಿದ ಮಹತ್ತರ ಸಾಧನೆಗೆ ಬೆಂಗಳೂರು ಪೊಲೀಸರು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶ್ವಾನದಳದ ಸಹಕಾರದೊಂದಿಗೆ ಅವರು ಮಗುವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ವಾಸಿಸುತ್ತಿರುವ ರಾಯಚೂರು ಮೂಲದ ವೀರಮ್ಮ ಮತ್ತು ಸಿದ್ದಪ್ಪ ಎಂಬ ದಂಪತಿಗಳ ಸಿಂಚನಾ(5)ಎಂಬ ಮಗು ಜೂ.21ರ ಶನಿವಾರ ಮಧ್ಯಾಹ್ನ 2.00ರ ವೇಳೆಗೆ ನಾಪತ್ತೆಯಾಗಿತ್ತು. ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವೀರಮ್ಮ ಮತ್ತು ಸಿದ್ದಪ್ಪ ದಂಪತಿಗಳ ಪುತ್ರಿ ಸಿಂಚನಾ (6) ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತಿದ್ದಾಗ ಅಷ್ಟವಾಗಿ ಕಾಣೆಯಾಗಿದ್ದಳು.
ವೀರಮ್ಮ ಮತ್ತು ಸಿದ್ದಪ್ಪ ದಂಪತಿಗಳ ರಾಯಚೂರು ಮೂಲದವರು.
ಮಗುವು ನಾಪತ್ತೆಯಾಗಿದ್ದ ಸುದ್ದಿ ತಿಳಿದ ಪೋಷಕರು ತಕ್ಷಣವೇ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ತಕ್ಷಣವೇ ಧಾವಿಸಿದ ಪೊಲೀಸರು ಪರಿಶೀಲನೆ ಆರಂಭಿಸಿದರು.
ಆದರೆ ಅದೇ ದಿನ ಬಡಾವಣೆಯಲ್ಲಿ ಬೆಸ್ಕಾಂ ಕಾಮಗಾರಿಯ ಕಾರಣ ವಿದ್ಯುತ್ ಸರಬರಾಜು ಕಡಿತಗೊಂಡಿದ್ದರಿಂದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾವುದೇ ವಿಡಿಯೋ ದಾಖಲಾಗಿರಲಿಲ್ಲ.
ಈ ಸ್ಥಿತಿಯಲ್ಲಿ ಪೊಲೀಸರು ಶ್ವಾನದಳದ ಸಹಾಯವನ್ನು ಪಡೆದರು. ಶ್ವಾನದಳದ ನಾಯಿಗಳು ಮಗುವಿನ ಬಳಕೆಯ ಬಟ್ಟೆಯ ವಾಸನೆ ಹಿಡಿದು ಜಾಡು ಹಿಡಿಯಲಾರಂಭಿಸಿತು. ಈ ನಾಯಿಗಳು ನಾಪತ್ತೆಯಾದ ಸ್ಥಳದಿಂದ ಸುಮಾರು 600 ಮೀಟರ್ ದೂರದಲ್ಲಿದ್ದ ಮನೆಯವರೆಗೆ ಕರೆದುಕೊಂಡುಹೋದವು. ಆ ಮನೆ ರಾಯಚೂರಿನ ಬನಮ್ಮ (55) ಎಂಬ ಮಹಿಳೆಯದ್ದಾಗಿದ್ದು, ಮಗುವಿನ ಪೋಷಕರ ಆಪ್ತರಾಗಿ ಪರಿಗಣಿಸಲ್ಪಡುತ್ತಿದ್ದರು.
ಪ್ರಾರಂಭದಲ್ಲಿ ತನಿಖೆಗೆ ಸಹಕಾರ ನೀಡದ ಬಸಮ್ಮ ಪೊಲೀಸರು ಗಂಭೀರವಾಗಿ ವಿಚಾರಣೆ ನಡೆಸಿದಾಗ ನಿಜ ಬಾಯಿಗೆ ಬಂದಿತು. ಮಗುವನ್ನು ಕಿಡ್ನಾಪ್ ಮಾಡಿದುದಾಗಿ ಒಪ್ಪಿಕೊಂಡ ಮಗಳನ್ನು ಚಿನ್ನೂರಿನ ಕಡೆಗೆ ಕರೆದೊಯ್ಯಲಾಗುತ್ತಿದ್ದ ಕಾರಣ ಕೂಡಲೇ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿತು. ಈ ಪೈಕಿ ಮಗುವನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಡೀ ಪ್ರಕರಣವನ್ನು ಕ್ಷಿಪ್ರವಾಗಿ ಬಗೆಹರಿಸಿರುವ ಬೆಂಗಳೂರು ಪೊಲೀಸರು ಹಾಗೂ ಶ್ವಾನದಳದ ಕಾರ್ಯಕ್ಷಮತೆಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. +
ಬೆಂಗಳೂರು.13.ಆಗಸ್ಟ್.25:- ರಾಜ್ಯಾದ್ಯಂತ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ವೇಳೆ 'DJ' ನಿಷೇಧ ಮುಂಜಾಗ್ರತಾ ಕ್ರಮವಾಗಿ…
ಕೊಪ್ಪಳ.13.ಆಗಸ್ಟ್.25: ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರಾಧನೆ ಜರುಗಿತು. ಆರಾಧನೆಯ ಕೊನೆಯ ದಿನವಾಗಿದ್ದರಿಂದ ಮಧ್ಯಾಹ್ನ ನಡೆದ…
ಬೆಂಗಳೂರು.13.ಆಗಸ್ಟ.25:- ರಾಜ್ಯ ಸರ್ಕಾರ ಹೊಸ 310 ಪ್ರಾಂಶುಪಾಲರ ಹುದ್ದೆಗಳಿಗೆ ಶೀಘ್ರವೇ ಅರ್ಹರಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ ಪ್ರಥಮ ದರ್ಜೆ ಕಾಲೇಜುಗಳಿಗೆ…
2025-26ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವ ವಿದ್ಯಾಲಯವು (ಯುವಿಸಿಇ)/…
ಶಿಕ್ಷಣ ವ್ಯವಸ್ಥೆಯ ಬದಲಾವಣೆಯು ಗುಣಮಟ್ಟವನ್ನು ದುರ್ಬಲಗೊಳಿಸಬಾರದು. ಆದ್ದರಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತನ್ನ ಕರಡು ನಿಯಮಾವಳಿಗಳನ್ನು ಪುನರ್ ಪರಿಶೀಲಿಸಬೇಕು'…
ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ ಚುನಾವಣಾ ಆಯೋಗವು 'ಒಬ್ಬ ವ್ಯಕ್ತಿ,…