ಮಕ್ಕಳು ಈ ದೇಶದ ನಿಜವಾದ ಸಂಪತ್ತು-ಸಚಿವ ಈಶ್ವರ ಬಿ.ಖಂಡ್ರೆ


ಬೀದರ.23.ಜನವರಿ.25:- ಮಕ್ಕಳು ಈ ದೇಶದ ನಿಜವಾದ ಸಂಪತ್ತು, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮತ್ತು ದೇಶವನ್ನು ಮುನ್ನಡಿಸುವರು ಆಗಿದ್ದಾರೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.


ಅವರು ಇಂದು ಬೀದರನ ಇಂದಿರಾಬಾಯಿ ಗುರುತ್ತಪ್ಪ ಶೇಟಿಕಾರ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಮತ್ತು ಶಾಲಾ ಶಿಕ್ಷಣ ಇಲಾಖೆ ಬೀದರ ಅವರು ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮಕ್ಕಳು ಪಾಠದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು. ಪ್ರಶಸ್ತಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಬಹಳ ಮುಖ್ಯ,ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಇದು ಒಂದು ಉತ್ತಮ ವೇದಿಕೆಯಾಗಿದೆ, ಇಲ್ಲಿಂದ ಮುಂದೆ ರಾಜ್ಯ ಮಟ್ಟದಲ್ಲಿ ಭಾಗವಹಿಸಬಹುದು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಪೂಜ್ಯ ಶ್ರೀ ಡಾ. ಶಿವುಕುಮಾರ ಮಹಾಸ್ವಾಮಿಗಳು ಶ್ರೀ ಸಿದ್ಧಾರೂಢ ಮಠ(ಚಿದಾಂಬರ ಆಶ್ರಮ) ಬೀದರ, ಬೀದರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕರಾದ ಪ್ರಸನ್ನ ಕುಮಾರ, ಬೀದರ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ, ಬೀದರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ದೊಡ್ಡೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಕ್ಕಳ ಭವಿಷ್ಯ ದೇಶದ ಭವಿಷ್ಯ…

prajaprabhat

Recent Posts

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

16 minutes ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

32 minutes ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

42 minutes ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

2 hours ago

ಆ.6 ರಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮ

ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…

3 hours ago

ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ

ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…

3 hours ago