ಮಂಗಳೂರು, ಜು. 02. ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಿಗೆ ಅಗತ್ಯವಿರುವ ಪದವಿ ಮಟ್ಟದ (UG) ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಸಂದರ್ಶನ ಕೊಣಾಜೆ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಸಿಂಡಿಕೇಟ್ ಸಭಾಂಗಣದಲ್ಲಿ ಜುಲೈ 3, 4 ಮತ್ತು 5 ರಂದು ನಡೆಯಲಿದೆ.
ವಿಷಯವಾರು ಸಂದರ್ಶನದ ದಿನಾಂಕ ಮತ್ತು ಸಮಯ:
ಜುಲೈ 3 – ಬೆಳಿಗ್ಗೆ 10 ರಿಂದ 11:45ರ ವರೆಗೆ ಕನ್ನಡ, 11:45 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಇಂಗ್ಲಿಷ್, 1 ಗಂಟೆಯಿಂದ 1:30 ರವರೆಗೆ ಹಿಂದಿ, 2:30 ರಿಂದ 2:45 ಸಂಸ್ಕೃತ, 2:45 ರಿಂದ 3:45 ಇತಿಹಾಸ, 3:45 ರಿಂದ 5:30ರ ವರೆಗೆ ಅರ್ಥಶಾಸ್ತ್ರ.
ಜುಲೈ 4 – ಬೆಳಿಗ್ಗೆ 10 ರಿಂದ 11:45 ರವರೆಗೆ ರಾಜ್ಯಶಾಸ್ತ್ರ, 11:45 ರಿಂದ 11:50 ಸಮಾಜಶಾಸ್ತ್ರ, 11:50 ರಿಂದ 12:30 ಭೂಗೋಳಶಾಸ್ತ್ರ, 12:30 ರಿಂದ 1ರ ವರೆಗೆ ಪತ್ರಿಕೋದ್ಯಮ, 1 ರಿಂದ 1:30ರ ವರೆಗೆ ದೈಹಿಕ ಶಿಕ್ಷಣ/ಕ್ರೀಡೆ, 2:30 ರಿಂದ 3 ರವರೆಗೆ ಕಂಪ್ಯೂಟರ್ ಸೈನ್ಸ್/ಬಿ.ಸಿ.ಎ, 3 ರಿಂದ 3:10 ಫಿಸಿಕ್ಸ್ , 3:10 ರಿಂದ 4 ರವರೆಗೆ ಕೆಮಿಸ್ಟ್ರಿ, 4 ರಿಂದ 4:30 ರವರೆಗೆ ಮ್ಯಾಥ್ಸ್, 4:30 ರಿಂದ 5 ರವರೆಗೆ ಬಾಟನಿ, 5 ರಿಂದ 5:10 ರವರೆಗೆ ಪ್ರಾಣಿಶಾಸ್ತ್ರ, 5:10 ರಿಂದ 5:30 ಮೈಕ್ರೋ ಬಯಾಲಜಿ.
ಜುಲೈ 5 ರಂದು- ಬೆಳಿಗ್ಗೆ 10 ರಿಂದ 1:30 ಕಾಮರ್ಸ್ ಆಯಂಡ್ ಮ್ಯಾನೇಜ್ಮೆಂಟ್, 2:30 ರಿಂದ 3:30 ರವರೆಗೆ ಬಿಬಿಎ (ಟ್ರಾವೆಲ್ &ಟೂರಿಸಂ).
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು, ಕಡ್ಡಾಯವಾಗಿ ಎಲ್ಲಾ ಮೂಲ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಹಾಜರಾಗಬೇಕು. ಪೂರ್ಣಕಾಲಿಕ ಬೋಧನಾ ಅವಧಿಯನ್ನು ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ ವಾರಕ್ಕೆ 16 ಗಂಟೆ ಹಾಗೂ ವಿಜ್ಞಾನ ನಿಕಾಯಕ್ಕೆ 20 ಗಂಟೆಯೆಂದು ಪರಿಗಣಿಸಲಾಗುತ್ತದೆ. ಪೂರ್ಣಕಾಲಿಕ ಬೋಧನಾ ಅವಧಿ ಇದ್ದಲ್ಲಿ ಮಾಸಿಕ ಗರಿಷ್ಠ ರೂ.40,000 (UGC ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಮಾತ್ರ) ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಮಾಸಿಕ ಗರಿಷ್ಟ ರೂ.35,000 ಸಂಭಾವನೆ ಪಾವತಿ ಮಾಡಲಾಗುತ್ತದೆ. ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದ ಪಕ್ಷದಲ್ಲಿ ಪ್ರತಿ ಗಂಟೆಯ ಬೋಧನಾ ಅವಧಿಗೆ ರೂ. 650 ರಂತೆ ಮತ್ತು ಯು.ಜಿ.ಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದದವರಿಗೆ ಕಲಾ ಮತ್ತು ವಾಣಿಜ್ಯ ನಿಕಾಯಕ್ಕೆ 16 ಗಂಟೆಗಿಂತ ಕಡಿಮೆ ಕಾರ್ಯಭಾರ/ ವಿಜ್ಞಾನ ನಿಕಾಯಕ್ಕೆ 20 ಗಂಟೆಗಿಂತ ಕಡಿಮೆ ಕಾರ್ಯಭಾರ ಇದ್ದ ಪಕ್ಷದಲ್ಲಿ ಪ್ರತಿ ಗಂಟೆಯ ಬೋಧನಾ ಅವಧಿಗೆ ರೂ. 600 ರಂತೆ ಸಂಭಾವನೆ ಪಾವತಿ ಮಾಡಲಾಗುತ್ತದೆ. ವಿಶ್ವವಿದ್ಯಾನಿಲಯವು ವಹಿಸುವ ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬದ್ಧರಿರಬೇಕು. ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡಿದ ಅರ್ಜಿ ಹಾಗೂ ಮೂಲದಾಖಲೆಗಳ ಪ್ರತಿಯನ್ನು ಸಂದರ್ಶನ ದಿನದಂದು ಕಡ್ಡಾಯವಾಗಿ ತರಬೇಕು. ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯದ ಯಾವುದೇ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.
ಬೆಂಗಳೂರು.07.ಜುಲೈ.25:- ವಿಶ್ವವಿದ್ಯಾಲಯದ 10 ಜನ ದಲಿತ ಪ್ರಾಧ್ಯಾಪಕರು ಸಾಮೂಹಿಕ ರಾಜೀನಾಮೆ? ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿಯ ಶಿಕ್ಷಕರ ವಿರುದ್ಧ ವ್ಯವಸ್ಥಿತ…
ಚಾಮರಾಜನಗರ.06.ಜುಲೈ.25:- ಯಳಂದೂರು ತಾಲೂಕು ಕೊಮಾರನಪುರ ಗ್ರಾಮದ ಜೆಎಸ್ಎಸ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರವಿ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಬ್ಬಿನ ಕಟಾವು…
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸದ ಕಾರಣ ವಜಾಗೊಳಿಸುವಿಕೆಯನ್ನು ಎದುರಿಸುತ್ತಿರುವ ಗ್ರೀ ಕಾಲೇಜುಗಳು. ಕರ್ನಾಟಕ ಸರ್ಕಾರವು…
ಬೀದರ.06.ಜುಲೈ.25:- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿನಾಟಕ ಮತ್ತು ಜಾನಪದ ಸಂಗೀತ…
ಬೀದರ.06.ಜುಲೈ.25:- ಜಿಲ್ಲೆಯಲ್ಲಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಹಾಗೂ ಆ ಜನಾಂಗದವರಿಗೆ ವಸತಿ ಸೌಲಭ್ಯದಡಿಯಲ್ಲಿ ಮನೆಗಳನ್ನು…
ಬೀದರ.06.ಜುಲೈ.25:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶನಿವಾರ ಐತಿಹಾಸಿಕ ಗುರುನಾನಕ್ ಝೀರಾ ಸಾಹೇಬ್…